ಕುಡಿತದ ಕಿಕ್: ವಿಮಾನ ಬಾಗಿಲು ತೆರೆಯಲೆತ್ನಿಸಿದ ಕ್ರಿಕೆಟಿಗ

drunk-lanka-cricketer-tried-to-open-brit-airways-flight
ನವದೆಹಲಿ, ಜುಲೈ 3: ಬ್ರಿಟೀಷ್ ಏರ್ ವೇಸ್ ಸಂಸ್ಥೆಯ ವಿಮಾನ 35 ಸಾವಿರ ಅಡಿ ಮೇಲೆ ಆಗಸದಲ್ಲಿ ತೇಲಾಡುತ್ತಿದ್ದು. ಆದರೆ ಅದರೊಳಗಿದ್ದ ಪ್ರಯಾಣಿಕನ ಒಳಗೆ ಪರಮಾತ್ಮ ಕೆಲಸ ಮಾಡುತ್ತಿದ್ದ. ಹಾಗಾಗಿ ಅವನೂ ಓಲಾಡುತ್ತಿದ್ದ. ಅಷ್ಟೇ ಆಗಿದ್ದರೆ ಓಕೆ ಆದರೆ ಅವಯ್ಯ ಹಾಗೆ ತೂರಾಡುತ್ತಲೇ ವಿಮಾನದ ಬಾಗಿಲನ್ನು ತೆರೆದು, ಪ್ರಯಾಣಿಕರಿಗೆ ಪರಲೋಕ ತೋರಿಸಲು ಯತ್ನಿಸಿದ್ದಾನೆ.

ಆ ಭೂಪ ಯಾರಪ್ಪಾ ಅಂದರೆ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ. ಆದರೆ ಬ್ರಿಟೀಷ್ ಏರ್ ವೇಸ್ ಕಂಪನಿ ಆತನ ಹೆಸರನ್ನು ಬಹಿರಂಗಪಡಿಸದೆ ಅವನ ಮಾನ ಉಳಿಸಿದೆ.

ಎಣ್ಣೆಯೇಟಿಗೆ ಓಲಾಡುತ್ತಿದ್ದ ಕ್ರಿಕೆಟಿಗನ ಅವತಾರವನ್ನು ಗಗನಸಖಿಯರು ಮೊದಲು ಗಮನಿಸಿದ್ದಾರೆ. ಆಗ ಅವಯ್ಯ, ಅಮ್ಮಿ ನನಗೆ ಸುಸ್ಸುಗೆ ಅರ್ಜೆಂಟಾಗಿದೆ. ದಾರಿ ತೋರು ಎಂದು ಕೇಳಿದ್ದನಂತೆ. ಆದರೆ ಮುಂದೆ ನಾಲ್ಕು ತಪ್ಪು ಹೆಜ್ಜೆಗಳನ್ನು ಹಾಕಿದ ಭೂಪ ಸೀದಾ exit ಬಾಗಿಲಿನ ಬಳಿ ಬಂದು ಅದನ್ನು ತೆರೆಯಲು ಯತ್ನಿಸಿದ್ದಾನೆ.

ವಿಮಾನವು ಸೋಮವಾರ ಸೈಂಟ್ ಲೂಸಿಯಾದಿಂದ ಲಂಡನ್ ಗಾಟ್ವಿಕ್ ನತ್ತ ಚಲಿಸುತ್ತಿತ್ತು. ವೆಸ್ಟ್ ಇಂಡೀಸ್ ವಿರುದ್ಧ ಜೂನ್ 27ರಂದು ಮುಕ್ತಾಯವಾದ ಕ್ರಿಕೆಟ್ ಸರಣಿಯನ್ನು ಮುಗಿಸಿಕೊಂಡು ಲಂಕಾ ತಂಡ ತಾಯ್ನಾಡಿಗೆ ವಾಪಸಾಗುತ್ತಿತ್ತು.

ಸದೃಢ ವ್ಯಕ್ತಿಗಳೇ ವಿಮಾನದ ಬಾಗಿಲು ತೆರೆಯಲು ಆಗುವುದಿಲ್ಲ. ಅಂತಹುದರಲ್ಲಿ ಕುಡುಕ ಪ್ರಯಾಣಿಕನಿಂದ ಬಾಗಿಲು ತೆರೆಯಲು ಸಾಧ್ಯವೇ ಎಂದು ಸಹ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+