ಚಿತ್ರಗಳಲ್ಲಿ: ಬೆಂಗಳೂರು ಬಿಟ್ಟು ಹೊರಟ ಆನೆಗಳ ಹಿಂಡು
ಬೆಂಗಳೂರು, ಜೂ.25: ನಗರದ ಹೊರವಲಯದಲ್ಲಿರುವ ಹುಸ್ಕೂರು ಕೆರೆ ಬಿಟ್ಟು ಮುಂದೆ ಸಾಗುತ್ತಿರುವ ಆನೆಗಳ ಸಮೂಹ ಕಂಡು ಬಂದಿದ್ದು ಹೀಗೆ.. ಪಿಟಿಐ ಛಾಯಾಗ್ರಾಹಕ ಶೈಲೇಂದ್ರ ಅವರ ಕೆಮೆರಾಗೆ ಸೆರೆ ಸಿಕ್ಕ ಆನೆ ಹಿಂಡಿನ ಚಿತ್ರ ಇಲ್ಲಿದೆ. ಸುದ್ದಿ ವಿವರ ಓದಿ.
ಕಾಶ್ಮೀರದ ಕಣಿವೆಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದಿನ ಮೊರೆತ ಶುರುವಾಗಿದೆ. ತುಂತುರು ಮಳೆಯಿಂದ ತಂಪಾಗಿದ್ದ ಕಣಿವೆ ರಾಜ್ಯದ ಶ್ರೀನಗರದಲ್ಲಿ ಸೋಮವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೆ ತೀವ್ರಗಾಯಗಳಾಗಿದೆ. ಗಡಿಭಾಗದ ಭದ್ರತಾ ಪಡೆ ಯೋಧರು ಶ್ರೀನಗರದ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರಕ್ಷಣಾ ನಿರತ ಯೋಧರ ಚಿತ್ರ ಇಲ್ಲಿದೆ..
ಉಳಿದಂತೆ, ವಿಂಬಲ್ಡನ್ ಮೊದಲ ಸುತ್ತಿನಲ್ಲೇ ರಫೆಲ್ ನಡಾಲ್ ಗೆ ಮನೆಗೆ ಕಳಿಸಿದ ಆಟಗಾರ ಯಾರು? ಫೆಡರರ್ ಗೆಲುವಿನ ನಗೆ, ನಂಗಾ ಪರ್ವತ ಹತ್ತಲು ಬಂದ ಟ್ರೆಕ್ಕರ್ಸ್ ಕೊಂದ ತಾಲಿಬಾನಿಗಳ ವಿರುದ್ಧ ಹತಾಶೆ, ಆಕ್ರೋಶ ಪ್ರತಿಭಟನೆ, ಭಾರತಕ್ಕೆ ಬಂದಿರುವ ಯುಎಸ್ ಕಾರ್ಯದರ್ಶಿ ಜಾನ್ ಕೆರಿ ಚಿತ್ರ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ

ಬೈ ಬೈ ಎಲಿಫೆಂಟ್ಸ್
ಹುಸ್ಕೂರು ಕೆರೆಯಿಂದ ನಿರ್ಗಮನದ ಹಾದಿಯಲ್ಲಿ ಆನೆಗಳು

ಕಾಶ್ಮೀರದಲ್ಲಿ ಗುಂಡಿನ ಮೊರೆತ
ಗಡಿಭಾಗದ ಭದ್ರತಾ ಪಡೆ ಯೋಧರು ಶ್ರೀನಗರದ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರಕ್ಷಣಾ ನಿರತ ಯೋಧರ ಚಿತ್ರ

ರಕ್ಷಣಾ ನಿರತ ಯೋಧ
ಗಡಿಭಾಗದ ಭದ್ರತಾ ಪಡೆ ಯೋಧರು ಶ್ರೀನಗರದ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ರಕ್ಷಣಾ ನಿರತ ಯೋಧರ ಚಿತ್ರ

ರಕ್ಷಣಾ ಪಡೆ ಯೋಧರು
ತುಂತುರು ಮಳೆಯಿಂದ ತಂಪಾಗಿದ್ದ ಕಣಿವೆ ರಾಜ್ಯದ ಶ್ರೀನಗರದಲ್ಲಿ ಸೋಮವಾರ ನಡೆದ ಗುಂಡಿನ ಚಕಮಕಿ

ಚಿತ್ರಗಳಲ್ಲಿ ಇಂದಿನ ಸುದ್ದಿ
ತುಂತುರು ಮಳೆಯಿಂದ ತಂಪಾಗಿದ್ದ ಕಣಿವೆ ರಾಜ್ಯದ ಶ್ರೀನಗರದಲ್ಲಿ ನಡೆದ ಗುಂಡಿನ ಚಕಮಕಿ

ಬೆಂಗಳೂರಿನಲ್ಲಿ ವಿದ್ಯಾ
ಘನ್ ಚಕ್ಕರ್ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ವಿದ್ಯಾ ಬಾಲನ್ ಹಾಗೂ ಇಮ್ರಾನ್ ಹಶ್ಮಿ

ಕಾಶ್ಮೀರದಲ್ಲಿ ಸಾಧುಗಳು
ಶ್ರೀನಗರ: ಅತ್ತ ಗುಂಡಿನ ಮೊರೆತ ಇತ್ತ ನಶೆಯಲ್ಲಿ ಸಾಧುಗಳ ಗುಂಪು

ಏನಿದೆ ಇದರಲ್ಲಿ?
ಯುಎಸ್ ಕಾರ್ಯದರ್ಶಿ ಜಾನ್ ಕೆರಿ ಯುಎಸ್ ಇಂಡಿಯಾ ರಾಜತಾಂತ್ರಿಕ ಸಂಬಂಧದ ಬಗ್ಗೆ ಮಾತುಕತೆ ನಡೆಸಲು ಭಾರತಕ್ಕೆ ಭೇಟಿ ನೀಡಿದ್ದಾರೆ. ನವದೆಹಲಿಯಲ್ಲಿ ಸುಧಾರಿತ ಅಡುಗೆ ಸಾಧನಗಳನ್ನು ಪರಿಶೀಲಿಸುತ್ತಿರುವ ಕೆರಿ

ಹ್ಯಾಪಿ ಬರ್ಥಡೇ ಮೆಸ್ಸಿ
ಕೋಲ್ಕತ್ತಾ: ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯಾನೆಲ್ ಮೆಸ್ಸಿ ಅವರ 26ನೇ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ ಫುಟ್ಬಾಲ್ ಪ್ರೇಮಿಗಳು

ದೈತ್ಯ ಸಂಹಾರಿ
ವಿಂಬಲ್ಡನ್: ಬೆಲ್ಜಿಯಂನ ಸ್ಟೀವ್ ಡಾರ್ಸಿಸ್ ಅವರು ಸ್ಪೇನಿನ ರಫೆಲ್ ನಡಾಲ್ ಅವರನ್ನು ಮೊದಲ ಸುತ್ತಿನ ಪಂದ್ಯದಲ್ಲೇ ಸೋಲಿಸಿದರು.

ವಿಂಬಲ್ಡನ್ ಟೆನಿಸ್
ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯ ಗೆದ್ದ ರೋಜರ್ ಫೆಡರರ್ ಅಭಿಮಾನಿಗಳತ್ತ ಕೈ ಬೀಸುತ್ತಿದ್ದಾರೆ.

ಮರಿಯಾಗೆ ಗೆಲುವು
ಫ್ರಾನ್ಸಿನ ಕ್ರಿಸ್ಟೀನಾ ಮ್ಲಡೆನೊವಿಕ್ ವಿರುದ್ಧ ಗೆಲುವು ಸಾಧಿಸಿದ ಸಂಭ್ರಮದಲ್ಲಿ ರಷ್ಯಾದ ಮರಿಯಾ ಶೆರಪೋವಾ

UEFA ಯುರೋ 2016
ಪ್ಯಾರೀಸ್: ಸುಮಾರು 12 ಮೀಟರ್ ಎತ್ತರ UEFA ಯುರೋ 2016 ಕಪ್ ನ ಪ್ರತಿಕೃತಿ ಐಫೆಲ್ ಟವರ್ ಎದುರು ಇಟ್ಟಾಗ ತೆಗೆದ ಚಿತ್ರ

ಹಾಲಿವುಡ್ ತ್ರ್ರೀ ಸ್ಟಾರ್ಸ್
ಲಾಸ್ ಏಂಜಲೀಸ್: ಜಾನಿ ಡೆಪ್, ಜೆರಿ ಬ್ರುಕೈಮರ್, ಟಾಮ್ ಕ್ರೂಸ್ ಅವರು ಹಾಲಿವುಡ್ ಹಾಲ್ ಆಫ್ ಫೇಮ್ ನಲ್ಲಿ ಸ್ಟಾರ್ ಸನ್ಮಾನ ಸಮಾರಂಭದಲ್ಲಿ ಕೊಟ್ಟ ಪೋಸ್

ಮಳೆ ಮಳೆ ಮಳೆ
ಅಹಮದಾಬಾದಿನಲಿ ಭಾರಿ ಮಳೆ ನಡುವೆ ಸಂಚಾರಿ












Click it and Unblock the Notifications