ಮಹಿಳೆಯರೇ ಎಚ್ಚರ: Cilest ಗರ್ಭನಿರೋಧಕ ವಾಪಸ್

ತಾಜಾ ಆಗಿ, Johnson & Johnson ಕಂಪನಿಯು 3.2 ಕೋಟಿ ಪ್ಯಾಕ್ ಜನನ ನಿಯಂತ್ರಣ ಮಾತ್ರೆಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ. ಗಮನಿಸಿ, ಈಗಾಗಲೇ 43 ರಾಷ್ಟ್ರಗಳಲ್ಲಿ ಈ ಸರಕು ಬಿಕರಿಯಾಗಿದೆ. ಆದರೆ, ಅವುಗಳು ಅಮೆರಿಕದ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಮಾತ್ರೆಗಳನ್ನು ಬೇಡದ ಗರ್ಭವನ್ನು ತಡೆಯಲು ಮಹಿಳೆಯರು ಬಳಸುತ್ತಾರೆ.
'ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಬಿಕರಿಯಾಗಿರುವ ತನ್ನ 3.2 ಕೋಟಿ ಪ್ಯಾಕ್ ಜನನ ನಿಯಂತ್ರಣ ಸೇವನೆ ಮಾತ್ರೆ Cilestಅನ್ನು ಸ್ವಯಂಪ್ರೇರಿತವಾಗಿ ಹಿಂದಕ್ಕೆ ಪಡೆದುಕೊಳ್ಳಲಾಗುತ್ತಿದೆ' ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ವಕ್ತಾರರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅದು ಹಲವು ಬಾರಿ ತನ್ನ ಔಷಧಿಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದು, ಆ ಸರಣಿಯಲ್ಲಿ ಇದು ಇತ್ತೀಚಿನದ್ದಾಗಿದೆ. Cilest ಮಾತ್ರೆಗಳು ಜಾನ್ಸನ್ ಆ್ಯಂಡ್ ಜಾನ್ಸನ್ ಘಟಕವಾಗಿರುವ ಜಾನ್ಸನ್ ಫಾರ್ಮಾಸ್ಯುಟಿಕಲ್ಸ್ ಇನ್ಕ್ ನಲ್ಲಿ ತಯಾರಾಗುತ್ತಿವೆ.
ನಿಯಮಿತವಾಗಿ ನಡೆಯುವ ಆಂತರಿಕ ಪರೀಕ್ಷೆಯಲ್ಲಿ Cilestನ ಒಂದು ಸಕ್ರಿಯ ಘಟಕ ನಿರ್ದಿಷ್ಟ ಫಲಿತಾಂಶವನ್ನು ನೀಡಿಲ್ಲ. ಹಾಗಾಗಿ, 179 ಬ್ಯಾಚ್ ಗಳ ಔಷಧಿಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಕಾರ್ಯ ನಡೆದಿದೆ ಎಂದು ವಕ್ತಾರೆ ಮಿಶೆಲ್ ರೊಮಾನೊ ಹೇಳಿದ್ದಾರೆ.
ಸೈಲೆಸ್ಟ್‌ನಲ್ಲಿ ಎರಡು ಹಾರ್ಮೋನ್‌ಗಳಿವೆ. ಅವುಗಳು ನೈಸರ್ಗಿಕ ಹಾರ್ಮೋನುಗಳಾದ oestrogen ಮತ್ತು progesteroneಗೆ ಸಮವಾಗಿವೆ. ಅಂಡಾಶಯದಿಂದ ಅಂಡ ಬಿಡುಗಡೆಯಾಗದಂತೆ Cilest ತಡೆಯುತ್ತದೆ.












Click it and Unblock the Notifications