'Ranbaxy ಕಂಪನಿಯ ಔಷಧಗಳನ್ನು ಬಳಸಬೇಡಿ'

Jaslok Hospital ಸಲಹಾ ಮಂಡಳಿಯು ನಾಲ್ಕು ದಿನಗಳ ಹಿಂದೆಯೇ ಆಸ್ಪತ್ರೆಯ ಆಯಕಟ್ಟಿನ ಜಾಗಗಳಲ್ಲಿ ಇಂತಹ ಸಲಹಾ ಪ್ರತಿಯನ್ನು ಅಂಟಿಸಿದ್ದು, ಕಂಪನಿಯ ಔಷಧಗಳ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಿದೆ. 'ನಮ್ಮ ಆಸ್ಪತ್ರೆಯ ಆವರಣದಲ್ಲಂತೂ Ranbaxy ಕಂಪನಿಯ ಯಾವುದೇ ಔಷಧವೂ ಸಿಗುವುದಿಲ್ಲ. ಆದ್ದರಿಂದ ವೈದ್ಯರೂ ಸಹ ಇದಕ್ಕೆ ಸಹಕರಿಸುವಂತೆ ಈ ಔಷಧಗಳನ್ನು prescribe ಮಾಡಬಾರದು ಎಂದು ತಾಕೀತು ಮಾಡಿದೆ.
ಭಾರತದ ಅತಿ ದೊಡ್ಡ ಔಷಧ ಉತ್ಪಾದನಾ ಕಂಪನಿಗಳ ಪೈಕಿ Ranbaxy ಸಹ ಒಂದು. ಅಮೆರಿಕದ Food and Drug Administration ಔಷಧ ನಿಯಂತ್ರಣ ಪ್ರಾಧಿಕಾರವು 2008-09 ಸಾಲಿನಲ್ಲಿ ಅಮೆರಿಕದ ಮಾರುಕಟ್ಟೆ ನೀತಿಗೆ ಅನುಗುಣವಾಗಿ ಗುಣಮಟ್ಟದ ಔಷಧಗಳನ್ನು ಉತ್ಪಾದಿಸುವಲ್ಲಿ Ranbaxy ವಿಫಲವಾಗಿದೆ ಎಂದು ಸಾರಿತ್ತು. ತತ್ಫಲವಾಗಿ ಸುಮಾರು 30 ಔಷಧಗಳ ಮೇಲೆ ನಿಷೇಧ ಹೇರಿ, ಮಾರುಕಟ್ಟೆಯಿಂದ ವಾಪಸ್ ಪಡೆಯುವಂತೆ ಸೂಚಿಸಿತ್ತು.
ಆದರೆ Jaslok Hospital ಸಲಹಾ ಮಂಡಳಿಯು ತಾನು ಹೇರಿರುವ ನಿಷೇಧಕ್ಕೆ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲವಾದರೂ ಅಮೆರಿಕದ ನೀತಿಯನ್ನು ಅನುಸರಿಸಿದೆ ಎನ್ನಲಾಗಿದೆ.












Click it and Unblock the Notifications