ವಾಜಪೇಯಿ ಆರೋಗ್ಯ ಸ್ಥಿರ: ಆತಂಕ ಅನಗತ್ಯ

ಆದರೆ ಬಿಜೆಪಿ ಪಕ್ಷವು ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿದ್ದು, ಅಂಥದ್ದೇನೂ ಆಗಿಲ್ಲ. ಹಿರಿಯರಾದ ಅಟಲ್ ಜೀ ಆರೋಗ್ಯವಾಗಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಆರೋಗ್ಯ ಏರುಪೇರಾಗಿದೆ. ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಪಕ್ಷವು ಹೇಳಿಕೆ ಹೊರಡಿಸಿದ್ದು 'ವಯೋಸಹಜವಾಗಿ ಅವರು ಆರೋಗ್ಯವಂತರಾಗಿದ್ದಾರೆ. ಎಲ್ಲರ ಹಾರೈಕೆ/ ಪ್ರಾರ್ಥನೆಗಳಿಂದಾಗಿ ಅವರು ಇನ್ನೂ ದೀರ್ಘಕಾಲ ನಮ್ಮ ಮಧ್ಯೆ ಇರುತ್ತಾರೆ' ಎಂದು ಆಶಿಸಿದೆ.
88 ವರ್ಷದ ಹಿರಿಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರು ಹಾಸಿಗೆ ಹಿಡಿದಿದ್ದು, ಅವರ ಆರೋಗ್ಯ ಹದಗೆಟ್ಟಿದೆ ಎಂಬ ಗಾಳಿಸುದ್ದಿ ಹಬ್ಬಿತ್ತು.












Click it and Unblock the Notifications