ಪುಣ್ಯಾತ್ಮ ವಾಜಪೇಯಿ ಸಕ್ರಿಯರಾಗಿದ್ದರೆ...ಯಡಿಯೂರಪ್ಪ

ಅಂತಹ ಪರಿಸ್ಥಿತಿ ಉದ್ಭವವಾಗುವುದಕ್ಕೆ ಎದುರಾದ ಕಾರಣಗಳಾದರೂ ಏನು ಎಂಬ ಲೆಕ್ಕಾಚಾರದಲ್ಲೂ ತೊಡಗಿದ್ದಾರೆ. ಅದರಲ್ಲಿ ಅವರಿಗೆ ಸಹಜವಾಗಿ/ ಪ್ರಧಾನವಾಗಿ ಕಾಣಿಸಿಕೊಂಡಿರುವುದು ಆ ಪಕ್ಷದ ಉನ್ನತ ನಾಯಕ, 89 ವರ್ಷದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು.
ಹೌದು ಖುದ್ದು ಯಡಿಯೂರಪ್ಪ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ - ಆ ಪುಣ್ಯಾತ್ಮ ಸಕ್ರಿಯರಾಗಿರುತ್ತಿದ್ದರೆ ನನಗೆ ಪಕ್ಷ ಬಿಡುವ ಸ್ಥಿತಿ ಉದ್ಭವವಾಗುತ್ತಿರಲಿಲ್ಲ' ಎಂದು ಶುಕ್ರವಾರ ನವದೆಹಲಿಗೆ ಬಂದುತಲುಪಿದ ಯಡಿಯೂರಪ್ಪ ಗೋಳಾಡಿದ್ದಾರೆ.
'ಪಕ್ಷದ ವರಿಷ್ಠರ ಲಗಾಮುಗಳು ಇನ್ನು ನನ್ನನ್ನು ಕಟ್ಟಿಹಾಕಲಾರವು. ಹಿರಿಯ ನಾಯಕರಾದ ರಾಮ ಜೇಠ್ಮಲಾನಿ, ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟವರು ನನ್ನನ್ನು ಬಿಡುತ್ತಾರೆಯೇ?' ಎಂದು ಬಿಜೆಪಿಯ ಕೇಂದ್ರ ನಾಯಕರನ್ನು ಮಾತಿನಲ್ಲೇ ತಿವಿದರು.
ಇದೇ ವೇಳೆ, 'ನಾನು ಬಿಜೆಪಿ ಬಿಡಲು ಕಾರಣರಾದ ಈಶ್ವರಪ್ಪ ಅವರು ನಾನು ಕಟ್ಟಿದ ಮನೆಯಲ್ಲಿ ಆರಾಮವಾಗಿ ಇರಲಿ' ಎಂದು ಬಿಜೆಪಿ ರಾಜ್ಯಧ್ಯಕ್ಷರನ್ನು ಛೇಡಿಸಲು ಅವರು ಮರೆಯಲಿಲ್ಲ.
ವೈಷ್ಣೋದೇವಿ ಆಶೀರ್ವಾದ ಕೋರಿ...
ಇತ್ತ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜಿನಾಮೆ ನೀಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶನಿವಾರ ಬೆಳಗ್ಗೆ ತಮ್ಮ ನೆಚ್ಚಿನ ದೈವ ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದಾರೆ.
ಹಿಂದೆಯೂ ಸಂಕಷ್ಟ ಬಂದಾಗಲೆಲ್ಲ ಯಡಿಯೂರಪ್ಪ ಅವರು ವೈಷ್ಣೋದೇವಿ ಸನ್ನಿಧಿಗೆ ತೆರಳಿ ತಮ್ಮ ನೋವು, ಸಂಕಟವನ್ನು ನಿವೇದಿಸಿಕೊಳ್ಳುತ್ತಿದ್ದರು. ಈ ಬಾರಿ ಹೊಸ ರಾಜಕೀಯ ಜೀವನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಅವರಿಗೆ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಾಥ್ ನೀಡಿದ್ದಾರೆ.












Click it and Unblock the Notifications