ಪ್ರಮಾಣವಚನ ಇನ್ನೂ ಸ್ವೀಕರಿಸದ ಏಳು ಶಾಸಕರು

ಬೆಂಗಳೂರು, ಜೂ 1: ಪಿರಿಯಾಪಟ್ಟಣದಿಂದ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿ ಹೊರತು ಪಡಿಸಿ ಕಾರಣಾಂತರದಿಂದ ಹದಿಲಾನ್ಕನೇ ವಿಧಾನಸಭೆಗೆ ಆಯ್ಕೆಯಾದ 223 ಶಾಸಕರ ಪೈಕಿ ಇನ್ನೂ ಏಳು ಮಂದಿ ಪ್ರಮಾಣವಚನ ಸ್ವೀಕರಿಸಲಿಲ್ಲ.

ಶುಕ್ರವಾರದಂದು (ಮೇ 31) 77 ಶಾಸಕರು ಪ್ರಮಾಣವಚನ ಸ್ವೀಕರಿಸಬೇಕಾಗಿತ್ತು. ಆದರೆ ಏಳು ಮಂದಿ ಶಾಸಕರು ಹೊರತಾಗಿ ಮಿಕ್ಕೆಲ್ಲಾ ಸಚಿವರು ಪ್ರಮಾಣವಚನ ಸ್ವೀಕರಿಸಿದರು.

ಡಿ ಕೆ ಶಿವಕುಮಾರ್ ಹೊರತು ಪಡಿಸಿ ಮಿಕ್ಕ ಶಾಸಕರು ಪ್ರಮಾಣವಚನ ಸ್ವೀಕರಿಸದೇ ಇರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಶಾಸಕರು ಪ್ರಮಾಣವಚನ ಸ್ವೀಕರಿಸಿದ ನಂತರವೇ ಅವರನ್ನು ವಿಧಾನಸಭೆಯ ಸದಸ್ಯರೆಂದು ಪರಿಗಣಿಸಲಾಗುವುದು. ಅದುವರೆಗೆ ಸದನದಲ್ಲಿ ನಡೆಯುವ ಯಾವುದೇ ಕಲಾಪದಲ್ಲಿ ಇವರುಗಳು ಭಾಗವಹಿಸುವಂತಿಲ್ಲ.

ಏಳು ಮಂದಿ ಶಾಸಕರ ಪೈಕಿ ಪ್ರಮಾಣವಚನ ಸ್ವೀಕರಿಸದೇ ಇರುವ ಶಾಸಕರ ಪೈಕಿ ಕಾಂಗ್ರೆಸ್ಸಿನ ಹಿರಿಯ ಮತ್ತು ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್ ಪ್ರಮುಖರು. ಭಾರೀ ಅಂತರದಿಂದ ಆಯ್ಕೆಯಾಗಿದ್ದರೂ ಇನ್ನೂ ವಿಧಾನಸೌಧದ ಮೆಟ್ಟಿಲು ಹತ್ತಿಲ್ಲದೇ ಇರುವುದಕ್ಕೆ ಮೇಲ್ನೋಟಕ್ಕೆ ಕಾಣಸಿಗುವ ಕಾರಣ ಸಚಿವ ಸ್ಥಾನ ಪ್ರಾಪ್ತಯಾಗಿಲ್ಲ ಎನ್ನುವುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ವಿಧಾನಸಭೆ ಅಧಿವೇಶನ ಬುಧವಾರದಂದು (ಮೇ 29) ಆರಂಭವಾಗಿತ್ತು.

ಡಿಕೆಶಿ ಹೊರತುಪಡಿಸಿ ಪ್ರಮಾಣವಚನ ಸ್ವೀಕರಿಸದ ಆರು ಶಾಸಕರು ಸ್ಲೈಡಿನಲ್ಲಿ..

ಜಮೀರ್ ಅಹಮದ್ ಖಾನ್

ಜಮೀರ್ ಅಹಮದ್ ಖಾನ್

ಬೆಂಗಳೂರು ಚಾಮರಾಜಪೇಟೆ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಇನ್ನೂ ಪ್ರಮಾಣವಚನ ಸ್ವೀಕರಿಸಲಿಲ್ಲ.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

ಬಳ್ಳಾರಿ ಕ್ಷೇತ್ರದಿಂದ ಆಯ್ಕೆಯಾದ BSR ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಮತ್ತು ಶಾಸಕ ರಾಮುಲು ಕೂಡಾ ಪ್ರಮಾಣವಚನ ಸ್ವೀಕರಿಸದೇ ಇರುವವರಲ್ಲಿ ಒಬ್ಬರು.

ಫಿರೋಜ್ ಶೇಟ್

ಫಿರೋಜ್ ಶೇಟ್

ಬೆಳಗಾವಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಆಯ್ಕೆಯಾಗಿದ್ದ ಫಿರೋಜ್ ನೂರುದ್ದೀನ್ ಶೇಟ್ ಕೂಡಾ ಇನ್ನೂ ಪ್ರಮಾಣವಚನ ಸ್ವೀಕರಿಸಲಿಲ್ಲ.

ಎಚ್ ಎಸ್ ಪ್ರಕಾಶ್

ಎಚ್ ಎಸ್ ಪ್ರಕಾಶ್

ಹಾಸನ ಕ್ಷೇತ್ರದಿಂದ ಜೆಡಿಎಸ್ ಟಿಕೆಟಿನಿಂದ ಆಯ್ಕೆಯಾದ ಎಚ್ ಎಸ್ ಪ್ರಕಾಶ್ ಪ್ರಮಾಣವಚನ ಸ್ವೀಕರಿಸಲು ವಿಧಾನಸಭೆಗೆ ಕಾಲಿಟ್ಟಿಲ್ಲ.

ಸುರೇಶ್ ಬಾಬು

ಸುರೇಶ್ ಬಾಬು

BSR ಕಾಂಗ್ರೆಸ್ ಪಕ್ಷದ ಟಿಕೆಟಿನಿಂದ ಕಂಪ್ಲಿ ಕ್ಷೇತ್ರದಿಂದ ಆಯ್ಕೆಯಾದ ಟಿ ಎಚ್ ಸುರೇಶ್ ಬಾಬು ಪ್ರಮಾಣವಚನ ಸ್ವೀಕರಿಸದ ಮತ್ತೊಬ್ಬ ಶಾಸಕ.

ಜಗದೀಶ್ ಕುಮಾರ್

ಜಗದೀಶ್ ಕುಮಾರ್

ಬೆಂಗಳೂರು ಹೆಬ್ಬಾಳ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಜಗದೀಶ್ ಕುಮಾರ್ ಕೂಡಾ ಪ್ರಮಾಣವಚನ ಇದುವರೆಗೆ ಸ್ವೀಕರಿಸಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+