ಫಿಕ್ಸಿಂಗ್ : ಬುಕ್ಕಿಗಳಿಗೆ 35,೦೦೦ಕೋಟಿ ನಷ್ಟ

ಮುಂಬೈ, ಮೇ 24: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವ ಆರೋಪಿಗಳು ಕೋರ್ಟ್ ಮೆಟ್ಟಿಲೇರುತ್ತಿದ್ದರೆ, ಬುಕ್ಕಿಗಳನ್ನು ಇನ್ನೊಂದೆಡೆ ಪೊಲೀಸರು ನಿರಂತರವಾಗಿ ಬಂಧಿಸುತ್ತಿದ್ದಾರೆ. ಈ ನಡುವೆ ಸಾವಿರಾರು ಕೋಟಿ ವ್ಯವಹಾರ ಹೊಂದಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆ ಭಾರಿ ನಷ್ಟ ಅನುಭವಿಸಿದೆ.

ಐಪಿಎಲ್ 2013 ಆರಂಭಕ್ಕೂ ಮುನ್ನ ಬೆಟ್ಟಿಂಗ್ ದಂಧೆ ಸುಮಾರು 50,000 ಕೋಟಿ ವ್ಯವಹಾರದ ನಿರೀಕ್ಷೆ ಹೊಂದಿತ್ತು. ಆದರೆ, ಈಗ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಹೊರ ಬಿದ್ದ ಮೇಲೆ ಬುಕ್ಕಿಗಳಿಗೆ ಸುಮಾರು 35,000 ಕೋಟಿ ರು ನಷ್ಟವಾಗಿದೆ ಎಂಬ ಸುದ್ದಿ ಬಂದಿದೆ.

Bookies lose Rs 35,000 crore in IPL 2013

ಭಾನುವಾರ ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಐಪಿಎಲ್ ನ ಫೈನಲ್ ಪಂದ್ಯಕ್ಕೆ ಒಟ್ಟು 15 ಸಾವಿರ ಕೋಟಿ ರೂ. ಬೆಟ್ಟಿಂಗ್ ನಡೆಯುವ

ಈ ಪಂದ್ಯದಲ್ಲಿ ಯಾರು ಗೆಲ್ಲುವರು, ಯಾರು ಹೆಚ್ಚು ರನ್ ಹೊಡೆಯುವರು, ಪ್ರಶಸ್ತಿ ಯಾರ ಮುಡಿಗೇರಲಿದೆ ಎಂಬುದರ ಬಗ್ಗೆ ಬುಕ್ಕಿಗಳು ತಲೆಕೆಡಿಸಿಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದ ಮೇಲೆ 1500 ಬುಕ್ಕಿಗಳು ಸಕ್ರಿಯವಾಗಿ ಬೆಟ್ಟಿಂಗ್ ನಡೆಸುತ್ತಿದ್ದಾರೆ.

ಪ್ರಸ್ತುತ ದೆಹಲಿ, ಮುಂಬೈ, ಹೈದರಾಬಾದ್ ಪೊಲೀಸರ ವಶದಲ್ಲಿರುವ ಬುಕ್ಕಿಗಳು ನೀಡಿರುವ ಮಾಹಿತಿಯಂತೆ ಭಾನುವಾರದ ಪಂದ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 15-35 ಸಾವಿರ ಕೋಟಿ ರೂ. ಬೆಟ್ಟಿಂಗ್ ನಡೆಯಲಿದೆ ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ.

ಭಾರತದ ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಪಾಕಿಸ್ತಾನದ ಕರಾಚಿ, ಇಸ್ಲಾಮಾಬಾದ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ದುಬೈ, ಶಾರ್ಜಾ ಸೇರಿದಂತೆ ಮತ್ತಿತರ ಕಡೆ ಬೆಟ್ಟಿಂಗ್ ನಡೆಯಲಿದೆ ಎಂದು ತಿಳಿದು ಬಂದಿದೆ.

Bookies lose Rs 35,000 crore in IPL 2013

ಆಟಗಾರರು ತಂಗಲಿರುವ ಹೋಟೆಲ್ ಗಳಲ್ಲಿ ಮಧ್ಯವರ್ತಿಗಳು ಸಂಪರ್ಕಿಸದಂತೆ ಬಿಸಿಸಿಐ ನೇಮಿಸಿರುವ ಎಸಿಎಸ್ ಯು ಅಧಿಕಾರಿಗಳ ತಂಡ ಹದ್ದಿನ ಕಣ್ಣಿಡಲಿದೆ. ಆಟಗಾರರ ಜತೆ ಯಾರೊಬ್ಬರೂ ಮಾತುಕತೆ ನಡೆಸದಂತೆ ಅವರ ದೂರವಾಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಹೋಟೆಲ್ ನಲ್ಲಿರುವ ಸ್ವಾಗತಕಾರಣಿಗಳ ಮೇಲೆಯೂ ಕಣ್ಣಿಡಲಾಗಿದೆ.

ಈ ನಡುವೆ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ ಸಿಇಒ ಗುರುನಾಥ್ ಅವರನ್ನು ವಿಚಾರಣೆ ಒಳಪಡಿಸಲು ಮುಂಬೈ ಪೊಲೀಸರು ಕಾದು ಕುಳಿತ್ತಿದ್ದಾರೆ. ಸಮನ್ಸ್ ಪಡೆದಿರುವ ಗುರುನಾಥ್ ನನಗೆ ಸ್ವಲ್ಪ ಕಾಲಾವಕಾಶ ನೀಡಿ ಎಂದಿದ್ದಾರೆ. ಆದರೆ, ಮುಂಬೈ ಪೊಲೀಸರು ಸಂಜೆಯೊಳಗೆ ಕ್ರೈಂ ಬ್ರ್ಯಾಂಚ್ ಕಚೇರಿಗೆ ಆಗಮಿಸುವಂತೆ ಫರ್ಮಾನು ಹೊರಡಿಸಿದ್ದಾರೆ. ಹೆಚ್ಚಿನ ವಿವರಕ್ಕೆ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+