ಫಿಕ್ಸಿಂಗ್ : ಗುರು ಸಿಎಸ್ ಕೆ ಬಾಸ್ ಅಲ್ವಂತೆ ಗುರೂ
ಚೆನ್ನೈ, ಮೇ.24: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ ಸಿಇಒ ಗುರುನಾಥ್ ಅವರನ್ನು ವಿಚಾರಣೆ ಒಳಪಡಿಸಲು ಮುಂಬೈ ಪೊಲೀಸರು ಕಾದು ಕುಳಿತ್ತಿದ್ದಾರೆ. ಸಮನ್ಸ್ ಪಡೆದಿರುವ ಗುರುನಾಥ್ ನನಗೆ ಸ್ವಲ್ಪ ಕಾಲಾವಕಾಶ ನೀಡಿ ಎಂದಿದ್ದಾರೆ. ಆದರೆ, ಮುಂಬೈ ಪೊಲೀಸರು ಸಂಜೆಯೊಳಗೆ ಕ್ರೈಂ ಬ್ರ್ಯಾಂಚ್ ಕಚೇರಿಗೆ ಆಗಮಿಸುವಂತೆ ಫರ್ಮಾನು ಹೊರಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ 5 ಗಂಟೆಯೊಳಗೆ ನಮ್ಮ ಕಚೇರಿಗೆ ಹಾಜರಾಗಬೇಕು ಎಂದು ಮುಂಬೈ ಪೊಲೀಸರು ತಮ್ಮ ಸಮನ್ಸ್ ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯ ಎಲ್ಲರ ಕಣ್ಣು ಗುರುನಾಥ್ ಮುಂದಿನ ಹೆಜ್ಜೆ ಮೇಲೆ ನಿಂತಿದೆ. ಮಾವ ಅಳಿಯ ಕೊಡೈಕನಲ್ ಗೆ ಹೋಗಿದ್ದೇಕೆ? ಇನ್ನೂ ಸ್ಪಷ್ಟವಾಗಿಲ್ಲ. ಮುಂದೆ ಓದಿ...[ಗುರುನಾಥ್ ಬಗ್ಗೆ ಶ್ರೀನಿವಾಸನ್ ಪುತ್ರ ಬಿಚ್ಚಿಟ್ಟ ರಹಸ್ಯ]

ಸಮಯ 5.05: ಗುರು ಈಗ 'ಅನಾಥ' ಆಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಗುರುವಿಗೂ ಏನು ಸಂಬಂಧವಿಲ್ಲ. ಅವರು ಗೌರವಾನ್ವತ ಸದಸ್ಯ ಮಾತ್ರ ಎಂದು ಸಿಎಸ್ ಕೆ ತಂಡದ ಮಾಲೀಕತ್ವ ಹೊಂದಿರುವ ಇಂಡಿಯನ್ ಸಿಮೆಂಟ್ಸ್ ಸಂಸ್ಥೆ ಪತ್ರಿಕಾ ಹೇಳಿಕೆ ನೀಡಿದೆ.
ಸಮಯ 3.20: ಒಂದು ವೇಳೆ ಗುರುನಾಥ್ ಅವರು ವಿಚಾರಣೆ ವೇಳೆ ಸರಿಯಾಗಿ ಮಾಹಿತಿ ನೀಡದಿದ್ದರೆ ಹೆಚ್ಚಿನ ವಿಚಾರಣೆಗಾಗಿ ಮುಂಬೈ ಪೊಲೀಸರು ಅವರನ್ನು ಬಂಧಿಸುವ ಎಲ್ಲಾ ಸಾಧ್ಯತೆಗಳಿದೆ. ಗುರುನಾಥ್ ಬಂಧವಾದರೆ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಎನ್ ಶ್ರೀನಿವಾಸನ್ ರಾಜೀನಾಮೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ ಎಂಬ ಸುದ್ದಿ ಹಬ್ಬಿದೆ.
ಸಮಯ 2.45:
ಸಮಯ 1.15:
ಸಮಯ 12.50: ಇಂಡಿಯನ್ ಪ್ರಿಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಹಿಂಪಡೆಯುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಪೆಪ್ಸಿ ಕೋ ಲಿ. ಅಲ್ಲಗೆಳೆದಿದೆ.
ಸಮಯ 12.40: ಟೈಮ್ಸ್ ನೌ ವರದಿ ಯಂತೆ ವಿಂದೂ ಹೇಳಿಕೆ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ನ ಮೂರಕ್ಕೂ ಅಧಿಕ ಆಟಗಾರರ ಜೊತೆ ನಿರಂತರ ಸಂಪರ್ಕದಲ್ಲಿದ್ದೆ. ಗುರುನಾಥ್ ಅವರು ಬೆಟ್ಟಿಂಗ್ ನಲ್ಲಿ 1 ಕೋಟಿ ಕಳೆದುಕೊಂಡಿದ್ದಾರೆ ಎಂದಿದ್ದಾನೆ.
ಸಮಯ 12.15: ಬಿಸಿಸಿಐ ಹಿರಿಯ ಅಧಿಕಾರಿಗಳಾದ ಅರುಣ್ ಜೇಟ್ಲಿ, ರಾಜೀವ್ ಶುಕ್ಲಾ, ಕಾನೂನು ಸಚಿವ ಕಪಿಲ್ ಸಿಬಲ್ ಅವರು ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಜೊತೆ ಮಹತ್ವದ ಸಭೆ ನಡೆಸಲು ಮುಂದಾಗಿದ್ದಾರೆ.
ಸಮಯ 12.00: ಸ್ಪಾಟ್ ಫಿಕ್ಸಿಂಗ್ ಹಾಗೂ ಬುಕ್ಕಿಗಳ ನಂಟು ಹೊಂದಿರುವ ಬಾಲಿವುಡ್ ನಟ ವಿಂದೂ ದಾರಾಸಿಂಗ್ ರನ್ನು ಶುಕ್ರವಾರ ಕೋರ್ಟಿಗೆ ಹಾಜರುಪಡಿಸಲಾಗುತ್ತಿದೆ. ಮುಂಬೈ ಪೊಲೀಸರು ವಿಂದೂ ವಿಚಾರಣೆ ನಡೆಸಲು ಇನ್ನಷ್ಟು ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.ದೆಹಲಿಯಲ್ಲಿ ಬುಕ್ಕಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತದೆ.
ಸಮಯ 11.15: ಅಂತಾರಾಷ್ಟ್ರೀಯ ಬುಕ್ಕಿ ಮಹಮ್ಮದ್ ಎಂಬುವವನನ್ನು ಹೈದರಾಬಾದಿನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಸ್ಪಾಟ್ ಫಿಕ್ಸಿಂಗ್ ರುವಾರಿ ಎನ್ನಲಾಗಿರುವ ಮಹಮ್ಮದ್ ದುಬೈಗೆ ಹಾರಲು ಯತ್ನಿಸುತ್ತಿದ್ದ.
ಇಡಿ ತನಿಖೆ: ಐಪಿಎಲ್ ಸ್ಟಾಟ್ ಫಿಕ್ಸಿಂಗ್ ನಲ್ಲಿ ಹವಾಲ ಹಣ ವರ್ಗಾವಣೆ ಜಾಲದ ಕುರಿತು ಕೇಂದ್ರ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಅನ್ವಯ ಆರೋಪಿಗಳ ಸಂಪತ್ತು ಹಾಗೂ ಬ್ಯಾಂಕ್ ಅಕೌಂಟ್ ಗಳನ್ನು ಇಡಿ ತನ್ನ ವಶಕ್ಕೆ ಪಡೆದುಕೊಳ್ಳ ಬಹುದಾಗಿದೆ.
ನಿರ್ದೇಶನಾಲಯವು ಆಟಗಾರರ ಮೇಲೆ ವಿವಿಧ ಪೊಲೀಸ್ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪೊಲೀಸ್ ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡಲಿದೆ. ಆದಾಯ ತೆರಿಗೆ ಇಲಾಖೆಯೂ ಪ್ರಕರಣದ ಕುರಿತು ತನ್ನದೇ ಆದ ರೀತಿಯಲ್ಲಿ ತನಿಖೆ ನಡೆಸುವ ಸಿದ್ಧತೆಯಲ್ಲಿದೆ. [ಸ್ಪಾಟ್ ಫಿಕ್ಸಿಂಗ್ : ಗುರುವಾರದ ಸಮಗ್ರ ಬೆಳವಣಿಗೆ ಓದಿ]
Gurunath not owner or CEO of CSK: India Cements thatscricket.com/news/2013/05/2… #Ipl
— Thatscricket (@thatscricket) May 24, 2013
3 CSK players linked to spot-fixing, reveals Vindoo niticentral.com/2013/05/24/3-c…
— Niti Central (@NitiCentral) May 24, 2013
India should legalise betting to stop corruption: Geoffrey Boycott timesofindia.indiatimes.com/sports/cricket…
— Times of India (@timesofindia) May 24, 2013
BCCI Chief already owns cement company MT @pti_news: When IPL investigations reach concrete stage other agencies like I-T,ED will step in:FM
— Sir Sri Jhunjhunwala (@jhunjhunwala) May 23, 2013
IPL wants gullible Indn public to believe its all very 'shameful'/unfortunate'-its either not both!Time bcci bosses owned up lapses manfuly!
— Bishan Bedi (@BishanBedi) May 22, 2013












Click it and Unblock the Notifications