ಈ ರೈಲು ಬರುವುದು ತಡವಾದರೆ ಸಿಗುತ್ತೆ ಫ್ರೀ ಫುಡ್! ಐಆರ್‌ಸಿಟಿಸಿ ನಿಯಮ ಏನು?

ಭಾರತೀಯ ರೈಲ್ವೆಯ ರಾಜಧಾನಿ, ಶತಾಬ್ದಿ ಮತ್ತು ದುರಾಂತೋ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಒಂದು ಮಹತ್ವದ ಸೌಲಭ್ಯ ಇದೆ. ರೈಲುಗಳು ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ತಡವಾದರೆ ಪ್ರಯಾಣಿಕರಿಗೆ ಉಚಿತ ಆಹಾರ ನೀಡುವ ನಿಯಮ ಜಾರಿಯಲ್ಲಿದೆ. ಆದರೆ ಈ ಬಗ್ಗೆ ಬಹುತೇಕ ಪ್ರಯಾಣಿಕರಿಗೆ ಮಾಹಿತಿ ಇರುವುದಿಲ್ಲ.

ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ರೈಲಿಗಾಗಿ ಕಾಯುವುದು ಪ್ರಯಾಣಿಕರಿಗೆ ಆಗುವ ಸಾಮಾನ್ಯ ತೊಂದರೆ. ಆದರೆ ರಾಜಧಾನಿ, ಶತಾಬ್ದಿ ಮತ್ತು ದುರಾಂತೋ ರೈಲುಗಳು ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಉಚಿತ ಉಪಹಾರ ಅಥವಾ ಊಟ ನೀಡಬೇಕಾಗುತ್ತದೆ.

Indian Railways Rule

ಯಾವಾಗ ಉಚಿತ ಆಹಾರ ಸಿಗುತ್ತದೆ?

ರೈಲು ಮೂರು ಗಂಟೆಗಳಿಗಿಂತ ಹೆಚ್ಚು ತಡವಾದಾಗ, ಪ್ರಯಾಣಿಕರಿಗೆ ರೈಲ್ವೆ ಕ್ಯಾಟರಿಂಗ್ ವಿಭಾಗದ ಮೂಲಕ ಉಚಿತ ಆಹಾರವನ್ನು ವಿತರಿಸಲಾಗುತ್ತದೆ. ಸಮಯಕ್ಕೆ ಅನುಗುಣವಾಗಿ ಬೆಳಗಿನ ಚಹಾ, ಉಪಹಾರ, ಮಧ್ಯಾಹ್ನದ ಊಟ, ಸಂಜೆ ತಿಂಡಿ ಅಥವಾ ರಾತ್ರಿ ಊಟವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಚಹಾ, ಕಾಫಿ, ಬಿಸ್ಕತ್, ಬ್ರೆಡ್-ಬಟರ್, ಹಣ್ಣಿನ ಜ್ಯೂಸ್ ಮುಂತಾದ ಉಪಹಾರಗಳು ನೀಡಲಾಗುತ್ತವೆ. ಊಟದಲ್ಲಿ ಅನ್ನ, ದಾಲ್, ರಾಜ್ಮಾ, ಛೋಲೆ ಅಥವಾ ಪೂರಿ-ಪಲ್ಯ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಇರಬಹುದು.

ವಂದೇ ಭಾರತ್ ರೈಲಿನ ಬಾಗಿಲು ಮುಚ್ಚಿದ ಬಳಿಕ ಒಳಗೆ ಸಿಲುಕಿದರೆ ಏನು ಮಾಡಬೇಕು?
ವಂದೇ ಭಾರತ್ ರೈಲಿನ ಬಾಗಿಲು ಮುಚ್ಚಿದ ಬಳಿಕ ಒಳಗೆ ಸಿಲುಕಿದರೆ ಏನು ಮಾಡಬೇಕು?

ಬೆಂಗಳೂರು ಪ್ರಯಾಣಿಕರಿಗೂ ಅನ್ವಯ

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಕೆಎಸ್‌ಆರ್ ಬೆಂಗಳೂರು-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಹಾಗೂ ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ಈ ನಿಯಮ ಅನ್ವಯಿಸುತ್ತದೆ. ಈ ಪ್ರೀಮಿಯಂ ರೈಲುಗಳು ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ಪ್ರಯಾಣಿಕರಿಗೆ ಐಆರ್‌ಸಿಟಿಸಿ ಮೂಲಕ ಉಚಿತ ಉಪಹಾರ, ಊಟ ಅಥವಾ ತಿಂಡಿಯನ್ನು ಒದಗಿಸಲಾಗುತ್ತದೆ. ವಿಶೇಷವಾಗಿ ಬೆಂಗಳೂರು ರೈಲು ನಿಲ್ದಾಣದಿಂದ ದೂರದ ಪ್ರಯಾಣಕ್ಕೆ ಹೊರಡುವವರು ಈ ಸೌಲಭ್ಯದ ಬಗ್ಗೆ ತಿಳಿದುಕೊಂಡಿದ್ದರೆ, ವಿಳಂಬದ ಸಂದರ್ಭಗಳಲ್ಲಿ ತಮ್ಮ ಹಕ್ಕನ್ನು ಬಳಸಿಕೊಳ್ಳಬಹುದು.

ಟಿಕೆಟ್ ರದ್ದು ಮತ್ತು ರೀಫಂಡ್ ನಿಯಮಗಳು

ರೈಲು 3 ಗಂಟೆಗಿಂತ ಹೆಚ್ಚು ತಡವಾದರೆ ಅಥವಾ ನಿಗದಿತ ಮಾರ್ಗ ಬದಲಾದರೆ, ಪ್ರಯಾಣಿಕರು ಟಿಕೆಟ್ ರದ್ದು ಮಾಡಿ ಹಣವನ್ನು ಮರುಪಾವತಿ ಪಡೆಯಬಹುದು. ಆನ್‌ಲೈನ್ ಟಿಕೆಟ್‌ಗಳ ರೀಫಂಡ್ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾದರೆ, ಕೌಂಟರ್ ಟಿಕೆಟ್‌ಗಳನ್ನು ರೈಲ್ವೆ ಸ್ಟೇಷನ್‌ನ ಬುಕ್ಕಿಂಗ್ ಕೌಂಟರ್‌ನಲ್ಲಿ ನೀಡಿ ಹಣವನ್ನು ವಾಪಸ್ ಪಡೆಯಬೇಕಾಗುತ್ತದೆ. ಮುಂದಿನ ಬಾರಿ ರೈಲು ತಡವಾದರೆ ಈ ನಿಯಮದ ಸದುಪಯೋಗ ಪಡೆದುಕೊಳ್ಳಿ.

ಇನ್ಮುಂದೆ ಈ ಯೋಜನೆಯಡಿ ದಿವ್ಯಾಂಗರಿಗೆ ಉಚಿತ ರೈಲು ಪ್ರಯಾಣ: ಗಮನಿಸಿ, ಬೆಂಗಳೂರು ಸೇರಿ ಈ ಭಾಗದ ರೈಲುಗಳ ಸಮಯ ಬದಲು
ಇನ್ಮುಂದೆ ಈ ಯೋಜನೆಯಡಿ ದಿವ್ಯಾಂಗರಿಗೆ ಉಚಿತ ರೈಲು ಪ್ರಯಾಣ: ಗಮನಿಸಿ, ಬೆಂಗಳೂರು ಸೇರಿ ಈ ಭಾಗದ ರೈಲುಗಳ ಸಮಯ ಬದಲು

ಐಆರ್‌ಸಿಟಿಸಿ ಆಹಾರ ಸೇವೆಯ ಹೊಸ ದಾಖಲೆ

ಐಆರ್‌ಸಿಟಿಸಿ ಈಗ ತನ್ನ ಡಿಜಿಟಲ್ ಮತ್ತು AI ತಂತ್ರಜ್ಞಾನದ ಮೂಲಕ 1,400 ಕ್ಕೂ ಹೆಚ್ಚು ರೈಲುಗಳಲ್ಲಿ ಪ್ರಯಾಣಿಕರ ಹಸಿವು ನೀಗಿಸುತ್ತದೆ. ವರ್ಷಕ್ಕೆ ಬರೋಬ್ಬರಿ 58 ಕೋಟಿ ಊಟಗಳನ್ನು ವಿತರಿಸುವ ಸಂಸ್ಥೆಯು, 425ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಇ-ಕ್ಯಾಟರಿಂಗ್ ಸೌಲಭ್ಯ ನೀಡಿದೆ. ವಿಶೇಷವೆಂದರೆ 2025ರ ಅಕ್ಟೋಬರ್ 18ರಂದು ಒಂದೇ ದಿನ ಗರಿಷ್ಠ 1.84 ಲಕ್ಷ ಆಹಾರದ ಆರ್ಡರ್‌ಗಳು ಬುಕ್ ಆಗುವ ಮೂಲಕ ಇ-ಕ್ಯಾಟರಿಂಗ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.

ಮುಂದಿನ ಬಾರಿ ರಾಜಧಾನಿ, ಶತಾಬ್ದಿ ಅಥವಾ ದುರಂತೋ ರೈಲುಗಳು ಮೂರು ಗಂಟೆಗಿಂತ ಹೆಚ್ಚು ತಡವಾಗಿ ಚಲಿಸಿದರೆ, ಐಆರ್‌ಸಿಟಿಸಿ (IRCTC) ನಿಯಮಾವಳಿಗಳ ಪ್ರಕಾರ ಉಚಿತ ಆಹಾರವನ್ನು ಪಡೆದುಕೊಳ್ಳುವ ನಿಮ್ಮ ಹಕ್ಕನ್ನು ನೆನಪಿನಲ್ಲಿಟ್ಟುಕೊಳ್ಳಿ. ಈ ಸರಳ ನಿಯಮದ ಅರಿವಿದ್ದರೆ ನಿಮ್ಮ ಪ್ರಯಾಣದ ಜರ್ನಿ ಮತ್ತಷ್ಟು ಸುಲಭವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+