ಚಿತ್ರಗಳಲ್ಲಿ: ಓಕ್ಲಹಾಮಾ ಪ್ರಕೃತಿಯ ರುದ್ರ ನರ್ತನ

ವಾಷಿಂಗ್ಟನ್, ಮೇ.21: ಓಕ್ಲಹಾಮಾ ಪ್ರಕೃತಿಯ ರುದ್ರ ನರ್ತನಕ್ಕೆ ಶಾಲೆ, ಕಚೇರಿ, ಮನೆ ಸೇರಿದಂತೆ ಎಲ್ಲವೂ ನೆಲಕಚ್ಚಿದೆ. ಪ್ರಾಥಮಿಕ ಶಾಲೆಯೊಂದರಲ್ಲಿದ್ದ 7 ಮಕ್ಕಳು ಸೇರಿದಂತೆ ಸುಮಾರು 91 ಮಂದಿಯನ್ನು ಬಲಿ ತೆಗೆದುಕೊಂಡರೂ ಶಾಂತವಾಗದ ಚಂಡಮಾರುತ ತನ್ನ ಆರ್ಭಟ ಮುಂದುವರೆಸಿದೆ.

ಅಬಾಲ ವೃದ್ಧರಾದಿಯಾಗಿ ಗಾಯಗೊಂಡವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅಮೆರಿಕದ ಓಕ್ಲೋಹಾಮಾ ನಗರದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು 32,000 ಕ್ಕೂ ಅಧಿಕ ಗ್ರಾಹಕರು ವಿದ್ಯುತ್ ಸಂಪರ್ಕ ಇಲ್ಲದೆ ಒದ್ದಾಡಿದ್ದಾರೆ. ಚಂಡ ಮಾರುತದ ಸದ್ದು ಕಿವಿಗೆ ಬೀಳುತ್ತಿದ್ದಂತೆ ರಕ್ಷಣೆಗಾಗಿ ಹೊರಕ್ಕೆ ಓಡಿ ಬಂದ ಜನರಿಗೆ ತಮ್ಮ ಕಾರು ನಜ್ಜುಗುಜ್ಜಾಗಿರುವುದು ಕಂಡು ಬಂದಿದೆ.

ಭುವಿಯಿಂದ ಬಾನಿಗೆ ಕಿತ್ತಳೆ ವರ್ಣದ ಗಾಳಿ ಸುರುಳಿಯಾಕರದಲ್ಲಿ ಸುತ್ತುತ್ತಿದ್ದು, ಎಲ್ಲೆಡೆ ಮಳೆ ಸುರಿಯುತ್ತಿದೆ. ಮೂರೆ ಪ್ರದೇಶದಲ್ಲಿ ಬೀಸಿದ್ದ ಗಾಳಿಯ ಪ್ರಮಾಣ ದಂಗುಬಡಿಸುವಂತಿದೆ. ಪ್ರತಿ ಗಂಟೆಗೆ 166 ರಿಂದ 200 ಮೈಲಿ ವೇಗದಲ್ಲಿ ಬೀಸಿದ ಮಾರುತದ ಹೊಡೆತಕ್ಕೆ ಸಿಕ್ಕವರು ನಾಶವಾಗಿದ್ದಾರೆ.

National Oceanic and Atmospheric Administration's (NOAA) ಎಚ್ಚರಿಕೆ ಪ್ರಕಾರ ಚಂಡಮಾರುತದ ಆರ್ಭಟ ಮುಂದುವರೆಯುವ ಸಾಧ್ಯತೆ ನಿಚ್ಚಳವಾಗಿದೆ. ಸೋಮವಾರ, ಮಂಗಳವಾರ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ನಲುಗಿದ ಓಕ್ಲೋಹಾಮಾದ ದೃಶ್ಯಗಳು ನಿಮಗಾಗಿ ನೀಡುತ್ತಿದ್ದೇವೆ ನೋಡಿ...ಚಿತ್ರ ಕೃಪೆ: AP/PTI

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಸ್ವಾನಿ: ಭಾನುವಾರ ರಾತ್ರಿ ವೇಳೆ ಚಂಡ ಮಾರುತದ ಆರ್ಭಟಕ್ಕೆ ತತ್ತರಿಸಿ ಚೆಲ್ಲಾ ಪಿಲ್ಲಿಯಾಗಿರುವ ವಾಹನಗಳು. ಎಲ್ಲಿ?: Interstate 40 at the junction with U.S. 177 on the west side of Shawnee, Okla.

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ನಾರ್ಮನ್: ಮನೆಗೆ ಹಿಂತುರಿಗಿದ ಅಲ್ಲಿ ಕ್ರಿಶ್ಚಿನ್ (ಎಡ) ಜೆಸ್ಸಿಕಾ ವಿಲ್ಕಿಂಸನ್ ಅವರು ತಮ್ಮ ನಾಯಿ ಬೆಲ್ಲಾಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ. ಎಲ್ಲಿ?: 156th street and Franklin Road, Norman

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಸ್ವಾನಿ: ತನ್ನ ಸಂಚಾರಿ ಗೃಹದಲ್ಲಿ ಏನ್ನನ್ನೋ ಹುಡುಕುತ್ತಿರುವ ನಾಗರಿಕ ಸ್ಥಳ: Steelman Estates Mobile Home Park, Shawnee, Okla

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಮೂರೆ: ಓಕ್ಲಹಾಮಾ ನಗರದ ಹೊರವಲಯದ ಪ್ಲಾಜಾ ಟವರ್ ಪ್ರಾಥಮಿಕ ಶಾಲೆಗೆ ಉಂಟಾಗಿರುವ ಹಾನಿ ಪ್ರಮಾಣ ತೋರಿಸುತ್ತಿರುವ ವೈಮಾನಿಕ ಚಿತ್ರ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಮೂರೆ: ಓಕ್ಲಹಾಮಾ ನಗರದ ಹೊರವಲಯದ ಪ್ಲಾಜಾ ಟವರ್ ಪ್ರಾಥಮಿಕ ಶಾಲೆ ಅವಶೇಷಗಳ ಜೊತೆ ರಕ್ಷಣಾ ಸಿಬ್ಬಂದಿ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಬಿರುಗಾಳಿಗೆ ತತ್ತರಿಸಿದ ಅಮೆರಿಕನ್ ಸಿಟಿ

ಮೂರೆ: ಮೆಡಿಕಲ್ ಸೆಂಟರ್ ಹಾಗೂ ವಾಹನಗಳು ನಾಶವಾಗಿರುವ ದೃಶ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+