ಫ್ರಾನ್ಸ್: ಸಲಿಂಗಿಗಳ ಮದುವೆಗೆ ಮುಹೂರ್ತ ಫಿಕ್ಸ್

 France legalises same-sex marriage amid protests
ಫ್ರಾನ್ಸ್, ಮೇ.19: ಸಲಿಂಗಿಗಳ ಮದುವೆಗೆ ಕಾನೂನಿನ ಮಾನ್ಯತೆ ನೀಡಿರುವ ದೇಶಗಳ ಸಾಲಿಗೆ ಫ್ರಾನ್ಸ್ ಲೇಟೆಸ್ಟ್ ಆಗಿ ಸೇರ್ಪಡೆಗೊಂಡಿದೆ. ಸುಮಾರು 14ದೇಶಗಳಲ್ಲಿ ಸಲಿಂಗಿಗಳ ಮದುವೆಗೆ ಅಧಿಕೃತ ಒಪ್ಪಿಗೆ ನೀಡಲಾಗಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್ಸಿಸ್ಕೋ ಹೊಲ್ಲಾಂಡೆ ಅವರು ಗೇ ಮ್ಯಾರೇಜ್ ಮಸೂದೆಗೆ ಅಂಕಿತ ಹಾಕಿ ಅಧಿಕೃತಗೊಳಿಸಿದ್ದಾರೆ.

ಫ್ರಾನ್ಸಿನಲ್ಲಿ ಈಗ ಅಧಿಕೃತ ಗೇ/ಲೆಸ್ಬಿಬಿಯನ್ ಮದುವೆಗಾಗಿ LGBT ಸಮುದಾಯ ಸಿದ್ಧತೆ ನಡೆಸಿದ್ದು, ಇನ್ನೆರಡು ವಾರದೊಳಗೆ ರಿಂಗ್ ವಿನಯಮ ಮಾಡಿಕೊಂಡು ಮದುವೆ ಸಮಾರಂಭ ನಡೆಯುವುದನ್ನು ಜಗತ್ತು ಬೆರಗಿನಿಂದ ನೋಡಬಹುದಾಗಿದೆ.

ಫ್ರಾನ್ಸಿನಲ್ಲಿ ಸಲಿಂಗಿಗಳ ಮದುವೆಗೆ ಒಪ್ಪಿಗೆ ಸೂಚಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಸೂದೆಗೆ ಸದನದಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು. ಆದರೆ, ಮಸೂದೆಗೆ ಈಗ ಅನುಮತಿ ಸಿಕ್ಕಿದ್ದು ಅಧ್ಯಕ್ಷ ಹೊಲ್ಲಾಂಡೆ ಅಂಕಿತ ಬಿದ್ದಿದ್ದು, ಅಧಿಕೃತ ಸರ್ಕಾರಿ ಅದೇಶವಾಗಿ ಎಲ್ಲೆಡೆ ಕಾನೂನು ಪಾಲನೆಗೆ ಬರಲಿದೆ. ಮುಂದಿನ ವರ್ಷದ ಚುನಾವಣೆಗಾಗಿ ಈ ವಿವಾದಿತ ಮಸೂದೆ ಅಂಗೀಕಾರಗೊಳ್ಳುವಂತೆ ಮಾಡಲಾಗಿದೆ ಎಂಬ ಮಾತಿದೆ.

ಈ ಹಿಂದೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಸಲಿಂಗಿಗಳ ಮದುವೆ ತಪ್ಪಲ್ಲ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಕಾನೂನು ಸಮ್ಮತ ಇಲ್ಲದಿದ್ದರೂ ವಿಶ್ವದ ಅನೇಕ ಕಡೆ ಸಲಿಂಗಿಗಳ ಮದುವೆ ನಡೆದ ಉದಾಹರಣೆಗಳಿದೆ.

ಭಾರತದಲ್ಲಿ ನೆಲೆಕಂಡಿರುವ ಬ್ರಿಟನ್ ಮೂಲದ ಪ್ರಜೆ ಮತ್ತು ಅಹಮದಾಬಾದಿನ ಸಲಿಂಗಕಾಮಿ ಜೋಡಿಯೊಂದು ನೇಪಾಳದಲ್ಲಿ ಮದುವೆಯಾಗಿ ಸುದ್ದಿ ಮಾಡಿತ್ತು. ಹಿಂದೂ ರಾಷ್ಟ್ರ ಎಂದು ಗುರುತಿಸಲ್ಪಡುವ ನೇಪಾಳದಲ್ಲಿ ಇಂಥ ಮದುವೆ ನಡೆದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಇವರಿಬ್ಬರೂ ಭಿನ್ನ ಧರ್ಮಗಳಿಗೆ ಸೇರಿದವರು ಎಂಬು ಇನ್ನೂ. ಹಿಂದೂ -ಮುಸ್ಲಿಂ ಧರ್ಮಕ್ಕೆ ಈ ರೀತಿ ಬೆಸುಗೆ ಬಿದ್ದಿತ್ತು.

ಮೆಕ್ಸಿಕೊ ಸರ್ಕಾರ ಸಲಿಂಗ ವಿವಾಹ ಊರ್ಜಿತಗೊಳಿಸಿ ಆದೇಶ ಹೊತಡಿಸಿದ ಬೆನ್ನಲ್ಲೇ 88 ಮಂದಿ ಸಲಿಂಗಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದರು. ಇವರಲ್ಲಿ 50 ಮಂದಿ ಗೇ(ಪುರುಷ ದಂಪತಿ) ಹಾಗೂ 38 ಮಂದಿ ಲೆಸ್ಬಿಯನ್ಸ್(ಮಹಿಳಾ ದಂಪತಿ) ಸೇರಿದ್ದರು. [ಸಲಿಂಗಕಾಮಕ್ಕೆ ಹನಿಗವನ ಸಿಂಚನ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+