ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪಾಲಿಸಬೇಕಾದ ಡ್ರೆಸ್ ಕೋಡ್

ತಕ್ಷಣದಿಂದಲೇ ಜಾರಿಗೆ ಬರುವಂತೆ ವಸ್ತ್ರಸಂಹಿತೆ ಜಾರಿ ಮಾಡಿ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಪಾಶ್ಚಿಮಾತ್ಯ ಉಡುಪು ಧರಿಸಿ ವಿಐಪಿ ಭಕ್ತರೂ ಸೇರಿ ದೇವಾಲಯಕ್ಕೆ ಪ್ರವೇಶಿಸುವಂತಿಲ್ಲ ಎಲ್ಲರೂ ವಸ್ತ್ರಸಂಹಿತೆ ನಿಯಮವನ್ನು ಪಾಲಿಸಲೇ ಬೇಕೆಂದು ಟಿಟಿಡಿ ಹೇಳಿದೆ.
ಭಕ್ತಾದಿಗಳು ದೇವಾಲಯದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮಂಡಳಿ ವಿನಂತಿಸಿಕೊಂಡಿದೆ.
ಬರ್ಮುಡಾ, ಮಿನಿಸ್ಕರ್ಟ್, ಮಿಡಿ, ಜೀನ್ಸ್, ಸ್ಲೀವ್ಲೆಸ್ ಟಾಪ್, ಶಾರ್ಟ್ ಟಿ ಶರ್ಟ್ ಬಟ್ಟೆಗಳನ್ನು ಧರಿಸಿದರೆ ದರ್ಶನ ಭಾಗ್ಯ ಸಿಗುವುದಿಲ್ಲ.
ಮಹಿಳಾ ಭಕ್ತಾದಿಗಳು ಚೂಡಿದಾರ್ - ಶಾಲು, ಸೀರೆ ಧರಿಸಬಹುದು.
ಪುರುಷ ಭಕ್ತಾದಿಗಳು ಉತ್ತರೀಯ ಅಥವಾ ಶಾಲು, ಧೋತಿ, ಕುರ್ತಾ, ಸರಳವಾದ ಪ್ಯಾಂಟ್ ಮತ್ತು ಶರ್ಟ್ ಧರಿಸಿ ದೇವಾಲಯ ಪ್ರವೇಶಿಸಬಹುದು.












Click it and Unblock the Notifications