ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲೂ ಬಾಯ್ಸ್ ಇಬ್ಬರಿಗೆ ಸೋಲು, ಒಬ್ಬರಿಗೆ ಗೆಲುವು

|
Google Oneindia Kannada News

Two ministers
ಬೆಂಗಳೂರು, ಮೇ 9 : ಕರ್ನಾಟಕ ವಿಧಾನಸಭೆಯಲ್ಲಿ ಪ್ರಮುಖ ವಿಷಯದ ಕುರಿತು ಚರ್ಚೆ ನಡೆಯುವಾಗ ಅಶ್ಲೀಲ ವಿಡಿಯೋ ನೋಡಿ ಸುದ್ದಿ ಮಾಡಿದ್ದ ಇಬ್ಬರು ಈ ಬಾರಿಯ ಚುನಾವಣೆಯಲ್ಲಿ ಮನೆ ಸೇರಿದ್ದಾರೆ. ಆದರೆ, ಲಕ್ಷ್ಮಣ ಸವದಿ ಮತ್ತೊಮ್ಮೆ ಆರಿಸಿ ಬಂದಿದ್ದಾರೆ.

ಸದನದಲ್ಲಿ ನೀಲಿ ಚಿತ್ರ ನೋಡಿ ಬ್ಲೂ ಬಾಯ್ಸ್ ಎಂದೇ ಖ್ಯಾತಿಗಳಿಸಿದ್ದ ಕೃಷ್ಣ ಪಾಲೇಮಾರ್ ಮತ್ತು ಸಿ.ಸಿ.ಪಾಟೀಲ್ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದರೆ, ಅಥಣಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ.

2012ರ ಫೆಬ್ರವರಿ 7ರಂದು ವಿಧಾನಸಭಾ ಕಲಾಪ ನಡೆಯುತ್ತಿರುವಾಗ ಮೂವರು ಸಚಿವರು ಅಶ್ಲೀಲ ವಿಡಿಯೋ ನೋಡುತ್ತಾ ಕಾಲ ಕಳೆಯುತ್ತಿದ್ದರು. ಈ ಪ್ರಕರಣದಿಂದ ಬಿಜೆಪಿ ಸರ್ಕಾರ ತೀವ್ರ ಮುಖಭಂಗ ಅನುಭವಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸದನ ಸಮಿತಿ ಮೂವರಿಗೂ ಕ್ಲೀನ್ ಚಿಟ್ ನೀಡಿತ್ತು.

ಸದನ ಸಮಿತಿಯ ಲಕ್ಷ್ಮಣ್ ಸವದಿ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿತ್ತು. ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರ ವಿರುದ್ಧದ ಆರೋಪ ಸಾಬೀತುಪಡಿಸಬಲ್ಲ ಸಾಕ್ಷ್ಯಾಧಾರಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.

ತಮ್ಮ ಸಚಿವ ಸ್ಥಾನ ಕಳೆದುಕೊಂಡು ಕೇವಲ ಶಾಸಕರಾಗಿ ಮುಂದುವರೆದಿದ್ದ ಮೂವರು 2013ರ ಚುನಾವಣೆಗೆ ಸ್ಪರ್ಧಿಸಿದ್ದರು. ಸಿ.ಸಿ.ಪಾಟೀಲ್ ತಮ್ಮ ಅಂಗರಕ್ಷಕನಿಂದ ಆಕಸ್ಮಿಕವಾಗಿ ಗುಂಡೇಟು ತಿಂದು ಆಸ್ಪತ್ರಗೆ ದಾಖಲಾಗಿದ್ದರು. ಅನುಕಂಪದ ಆಧಾರದ ಮೇಲೆಯೂ ಅವರು ಗೆಲ್ಲಲಿಲ್ಲ ಎಂಬುದು ಗಮನಾರ್ಹ.

ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ 74299 ಮತಗಳನ್ನು ಪಡೆದು ಜಯಗಳಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. ಆದರೆ, ವಿರೋಧ ಪಕ್ಷದ ಸ್ಥಾನದಲ್ಲಿ ಐದು ವರ್ಷ ಕುಳಿತುಕೊಳ್ಳಬೇಕು.

ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೃಷ್ಣ ಪಾಲೇಮಾರ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಮೋಯಿದ್ದಿನ್ ಬಾವಾ ಸೋಲಿನ ರುಚಿ ತೋರಿಸಿದ್ದಾರೆ. ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದಿರುವ ಪಾಲೇಮಾರ್, 64524 ಮತಗಳನ್ನು ಪಡೆದು ಸುಮಾರು 5 ಸಾವಿರಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

ನರಗುಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿ.ಸಿ.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ ವಿರುದ್ದ 8 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭಾರೀ ಸೋಲು ಅನುಭವಿಸಿದ್ದಾರೆ. ಕ್ಷೇತ್ರದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿರುವ ಪಾಟೀಲ್ 51035 ಮತಗಳನ್ನು ಪಡೆದಿದ್ದಾರೆ.

ಇಬ್ಬರನ್ನು ಸೋಲಿಸುವ ಮೂಲಕ ಮತದಾರ ಪ್ರಭು ಶಾಸಕರಾಗಿ ಆಯ್ಕೆಯಾದ ನಂತರ ಇವರು ಮಾಡಿದ ಘನ ಕಾರ್ಯಕ್ಕೆ ಸರಿಯಾದ ಶಿಕ್ಷೆ ನೀಡಿದ್ದಾನೆ. ಗೆದ್ದು ವಿಧಾನಸಭೆ ಪ್ರವೇಶಿಸಿದ ಇನ್ನೊಬ್ಬರು ಈ ಬಾರಿ ವಿಧಾನಸಭೆಯಲ್ಲಿ ಅವಾಂತರ ಮಾಡದಿರಲಿ ಎಂಬುದು ಕರ್ನಾಟಕದ ಜನರ ಆಶಯ.

ಗೆದ್ದವರು ಮತ್ತು ಸೋತವರ ಪಟ್ಟಿ ನೋಡಿಗೆದ್ದವರು ಮತ್ತು ಸೋತವರ ಪಟ್ಟಿ ನೋಡಿ

English summary
Karnataka assembly Election 2013 Results. Two ministers infamous porn viewing scandal has lost in assembly Election 2013. Athani constituency BJP candidate Lakshman Savadi again elected as MLA. J. Krishna Palemar and C C Patil are defeated in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X