ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮ ದಿಕ್ಕು ತಪ್ಪಿಸಿದೆ. ಮಿನಿಸ್ಟ್ರು ಕ್ಲೀನ್: ವರದಿ

By Mahesh
|
Google Oneindia Kannada News

Savadi, Palemar, CC Patil
ಬೆಂಗಳೂರು, ಮಾ.31: ಸದನದಲ್ಲಿ ಡರ್ಟಿ ಪಿಕ್ಚರ್ ವೀಕ್ಷಣೆ ಬಗ್ಗೆ ತನಿಖೆ ನಡೆಸಿದ ಸಮಿತಿ ಎಲ್ಲಾ ಸುದ್ದಿವಾಹಿನಿಯ ಸಿಡಿಗಳನ್ನು ತರೆಸಿಕೊಂಡು ವೀಕ್ಷಿಸಿ, ಸಿಡಿದೆದ್ದಿದೆ. ಬಿಜೆಪಿ ಶಾಸಕರು ನೋಡಿದ್ದಕ್ಕಿಂತ ಹೆಚ್ಚಿನದು ಸಿಡಿಯಲ್ಲಿ ಕಾಣಿಸಿಕೊಂಡಿದೆ.

ಟಿವಿ ಮಾಧ್ಯಮಗಳು ಪ್ರಕರಣದ ದಿಕ್ಕು ತಪ್ಪಿಸಿದೆ. ವಿಷಯವನ್ನು ವೈಭವೀಕರಿಸಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಮೊಬೈಲ್ ಫೋನ್ ಮೂಲಕ ವಿಡಿಯೋ ಕ್ಲಿಪ್ಪಿಂಗ್ ವೀಕ್ಷಣೆ ಮಾಡುತ್ತಿದ್ದ ಚಿತ್ರಗಳು ಸ್ಪಷ್ಟವಾಗಿರಲಿಲ್ಲ. ಆದರೆ, ಸುದ್ದಿಯನ್ನು ಪ್ರಸಾರ ಮಾಡುವಾಗ ಟಿವಿ ಪರದೆಯ ಮೇಲೆ ಪ್ರತ್ಯೇಕವಾಗಿ ಅದೇ ಚಿತ್ರಗಳನ್ನು ಸ್ಪಷ್ಟವಾಗಿ 24X7 ಚಾನಲ್ ನವರು ವೈಭವೀಕರಿಸಿ ತೋರಿಸುತ್ತಿದ್ದುದನ್ನು ಗಮನಿಸಬಹುದು.

ಸುದ್ದಿವಾಹಿನಿಗಳು ಸದನದಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದರೂ ಅವುಗಳನ್ನು ವೈಭವೀಕರಿಸಿ ಪ್ರಸಾರ ಮಾಡುವ ಉದ್ದೇಶದಿಂದ ಇಂಟರ್‌ನೆಟ್‌ನಿಂದ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ತೋರಿಸಿದ್ದು, ಪ್ರಕರಣಕ್ಕೆ ತಿರುವು ನೀಡಿದೆ. ಮಾಧ್ಯಮಗಳು ಸಚಿವರುಗಳ ಬಗ್ಗೆ ಸಾಕ್ಷಿಯಾಗಿ ನೀಡಿದ ವಿಡಿಯೋ ದಾಖಲೆಗಳು ಈ ಕಾರಣಕ್ಕೆ ತಿರಸ್ಕಾರಗೊಂಡಿದೆ.

ಸದನದಲ್ಲಿ ಮೊಬೈಲ್ ನಿಷೇಧಿಸಿ: ಸದನದೊಳಗೆ ಮೊಬೈಲ್ ಬಳಕೆಯ ನಿಷೇಧದ ಕುರಿತು ಉಪಬಂಧವನ್ನು ಸೇರಿಸಿ ತಿದ್ದುಪಡಿ ಮಾಡುವುದು ಅವಶ್ಯ ಎಂದು ಸಮಿತಿ ಶಿಫಾರಸು ಮಾಡಿದೆ.

ಕರ್ನಾಟಕ ವಿಧಾನಸಭೆಯಲ್ಲಿಯೂ ಲೋಕಸಭೆಯ ಮಾದರಿಯಲ್ಲಿ ವಿಧಾನಸಭೆಯ ಕಲಾಪಗಳನ್ನು ಪ್ರಸಾರ ಮಾಡಲು ವಿದ್ಯುನ್ಮಾನ ಮಾಧ್ಯಮದವರಿಗೆ ಮಾರ್ಗಸೂಚಿಗಳನ್ನು ರಚಿಸುವಂತೆ ಶಿಫಾರಸು ಮಾಡಲಾಗಿದೆ.

ಜೊತೆಗೆ ಲೋಕಸಭೆಯಲ್ಲಿ ಇರುವಂಥ ಮಾದರಿಯಲ್ಲೇ ಪ್ರತ್ಯೇಕವಾದ ವಾಹಿನಿ ಅಥವಾ ಸರ್ಕಾರಿ ಸೌಮ್ಯದ ಸಂಸ್ಥೆಯ ಮೂಲಕ ವಿಧಾನಸಭೆಯ ಕಾರ್ಯಕಲಾಪಗಳನ್ನು ಪ್ರಸಾರ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.

English summary
The Karnataka Legislature Committee which probed the infamous porn viewing scandal has indicted a former minister and recommended his "admonition" but gave a clean chit to two others while proposing a ban on the use of mobiles in the House. And also blamed TV media for diverting, glorifying the news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X