ಬಿಜೆಪಿ ಬ್ಲೂ ಬಾಯ್ಸ್ ಗೆ ಕ್ಲೀನ್ ಚೀಟ್ ಏಕೆ?

ಈ ವರದಿಯಲ್ಲಿ ಮಾಜಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ.ಪಾಲೆಮಾರ್‌ಗೆ ಕ್ಲೀನ್‌ಚಿಟ್ ನೀಡಲಾಗಿದೆ. ಮೂವರು ಮಾಜಿ ಸಚಿವರ ಪೈಕಿ ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ.ಪಾಲೆಮಾರ್ ಮೊಬೈಲ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾರೆ ಎನ್ನಲು ಯಾವುದೇ ಸ್ಪಷ್ಟ ಸಾಕ್ಷಿ ಆಧಾರಗಳು ಇಲ್ಲ. ಅವರ ವಿರುದ್ಧದ ಆರೋಪ ಸಾಬೀತಾಗಿಲ್ಲ ಎಂದು ಸದನ ಸಮಿತಿ ವರದಿಯಲ್ಲಿ ಹೇಳಲಾಗಿದೆ.
ಜೊತೆಗೆ ಲಕ್ಷ್ಮಣ ಸವದಿ ಮೇಲೆ ಮಾಡಲಾಗಿರುವ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡು ಬಂದಿದೆ. ಸಭಾಧ್ಯಕ್ಷರು ಅವರಿಗೆ ಇನ್ನು ಮುಂದೆ ಇಂಥ ಕೃತ್ಯ ಎಸೆಗಬಾರದು ಎಂದು ಬುದ್ಧಿವಾದದ ಎಚ್ಚರಿಕೆ ನೀಡಬೇಕೆಂದು ಸದನ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.
ಮೂವರು ಮಾಜಿ ಸಚಿವರಿಗೆ ಸದನದೊಳಗೆ ಬಾರದಂತೆ ವಿಧಿಸಲಾಗಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ ಎಂದು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸದನಕ್ಕೆ ಶುಕ್ರವಾರ(ಮಾ.30) ತಿಳಿಸಿದರು.












Click it and Unblock the Notifications