ಖರ್ಗೆ ಮುಖ್ಯಮಂತ್ರಿ ಆಗ್ತಾರಾ? ಅವರನ್ನೇ ಕೇಳಿ
ಬೆಂಗಳೂರು,
ಮೇ 8: ಕಾಂಗ್ರೆಸ್ ಗೆದ್ದರೆ ಪಕ್ಷದ ಹಳೆಯ ಹುಲಿ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಇದೀಗ ಕಾಂಗ್ರೆಸ್ 113ರ ಗಡಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ ದಲಿತ ನಾಯಕ ಖರ್ಗೆಗೆ ಕಾಂಗ್ರೆಸ್ ಮಣೆ ಹಾಕುತ್ತದಾ ಎಂಬ ಕುತೂಹಲ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನೇ ಕೇಳಿದಾಗ id="toptextpromo">'ರಾಹುಲ್
ಗಾಂಧಿ ಅವರು 140 ಸ್ಥಾನಗಳ ಟಾರ್ಗೆಟ್ ಕೊಟ್ಟಿದ್ದರು. ನಾವು 115-120 ಸ್ಥಾನಗಳನ್ನು ನಿರೀಕ್ಷಿಸಿದ್ದೆವು. ಅದರ ಆಸುಪಾಸಿನಲ್ಲಿದ್ದೇವೆ. ಖಂಡಿತ ಸ್ವತಂತ್ರವಾಗಿ ಕಾಂಗ್ರೆಸ್ ಸರಕಾರ ರಚಿಸಲಿದೆ' ಎಂದು ಗೆಲುವಿನ ನಗೆ ಬೀರಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸ್ವತಃ
ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಖರ್ಗೆ ತಾವು ಮುಖ್ಯಮಂತ್ರಿಯಾಗುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಸಹ ಗೆಲುವು ಸಾಧಿಸಿದ್ದಾರೆ.











Click it and Unblock the Notifications