ಬೊಮ್ಮನಹಳ್ಳಿ : 85 ನಕಲಿ ಮತದಾರರ ಬಂಧನ

voters
ಬೆಂಗಳೂರು, ಮೇ 5 : ಬಿಜೆಪಿ ಅಭ್ಯರ್ಥಿ ಪರವಾಗಿ ನಕಲಿ ಮತದಾನ ಮಾಡಲು ಆಗಮಿಸಿದ್ದ 85 ಜನರನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರತಿಯೊಬ್ಬರಿಗೂ 500 ರೂ. ಆಮಿಷ ಓಡ್ಡಿ ಕರೆತರಲಾಗಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ದೇವರ ಚಿಕ್ಕನಹಳ್ಳಿಯ ಬೂತ್ ನಂ 182ರ ಬಳಿ ಬಸ್ ನಲ್ಲಿ ಆಗಮಿಸುತ್ತಿದ್ದ, 85 ಜನರನ್ನು ಪೊಲೀಸರು ಬಂಧಿಸಿದರು. ವಿಜಯ್ ಎಂಬುವವರು ಇವರನ್ನು ಕರೆತಂದಿದ್ದರು ಎಂದು ತಿಳಿದು ಬಂದಿದೆ.

ಕಾರ್ಖನೆಯೊಂದರ ಕಾರ್ಮಿಕರಾಗಿದ್ದ ಇವರನ್ನು ಬೊಮ್ಮನಹಳ್ಳಿಗೆ ಕರೆತಂದು ನಕಲಿ ಮತದಾನ ಮಾಡಲು ಯತ್ನಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಬಸ್ ನಲ್ಲಿ ಆಗಮಿಸಿದ ಇವರನ್ನು ದೇವರ ಚಿಕ್ಕನಹಳ್ಳಿ ಬಳಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯ್ ಎಂಬುವವರು ಇವರನ್ನು ಕರೆತರುತ್ತಿದ್ದರು. ಯಾವ ಕ್ಷೇತ್ರದಲ್ಲಿ ಮತದಾನ ಮಾಡಲು ಆಗಮಿಸತ್ತಿದ್ದರು ಎಂದು ವಿಚಾರಣೆ ನಂತರ ತಿಳಿದು ಬರಲಿದೆ. ಸದ್ಯ ಬಿಟಿಎಂ ಲೇಔಟ್ ಪೊಲೀಸರು ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ.

ಹಣ ಹಂಚುತ್ತಿದ್ದ ಕಾರ್ಯಕರ್ತ ಬಂಧನ : ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತನನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆ ವೇಳೆ ಬಂಧಿಸಲಾಗಿದೆ. ಬಂಧಿತನಿಂದ 9 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದು. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+