ಮಧ್ಯಾಹ್ನವಾದರೂ ಚೇತರಿಕೆ ಕಾಣದ ಮತದಾನ

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ ನಡೆಯಲಿದೆ. ಬೆಳಗ್ಗೆ 6.30 ಗಂಟೆಯಿಂದಲೇ ಜನರು ಮತದಾನಕ್ಕಾಗಿ ಕ್ಯೂ ನಿಂತಿದ್ದು ಹಲವೆಡೆ ಕಂಡು ಬಂದಿತ್ತು. ಈ ಬಾರಿ ಶೇಕಡಾವಾರು ಮತದಾನ ಹೆಚ್ಚಳ ಕಾಣುವ ನಿರೀಕ್ಷೆಯನ್ನು ರಾಜ್ಯ ಚುನಾವಣಾ ಆಯೋಗ ಹೊಂದಿದೆ.
224 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ರಾಜ್ಯಾದ್ಯಂತ ಸರಾಸರಿ ಶೇ. 36ರಷ್ಟು ಮತದಾನವಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ....
ರಾಜ್ಯದ ಒಟ್ಟಾರೆ ಸರಾಸರಿ 36.8% | 11 ಗಂಟೆ ವರದಿ ಓದಿ
* ಮಧ್ಯಾಹ್ನ 4 ಗಂಟೆಯ ವೇಳೆಗೆ ರಾಜ್ಯಾದ್ಯಂತ ಶೇ.50.80 ರಷ್ಟು ಮತದಾನವಾಗಿದೆ
* ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟಾರೆ ಪ್ರಮಾಣ 38% ರಷ್ಟು ಮಾತ್ರ ಏರಿಕೆ ಕಂಡಿದೆ. ಕೊಡಗು ಜಿಲ್ಲೆ ಶೇ 55ರಷ್ಟು ಮತದಾನ ಕಂಡು ಈ ಸಮಯಕ್ಕೆ ಅತಿ ಹೆಚ್ಚು ಮತ ಹಾಕಲ್ಪಟ್ಟ ಜಿಲ್ಲೆ ಎನಿಸಿದೆ.
* ದಕ್ಷಿಣ ಕನ್ನಡ 44%
* ಕೊಡಗು 55%
* ಶಿವಮೊಗ್ಗ 21%
* ದಾವಣಗೆರೆ 35%
* ಉತ್ತರಕನ್ನಡ 21%
* ಚಿಕ್ಕಮಗಳೂರು 41%
* ಶಿವಮೊಗ್ಗ 45%
* ಕೋಲಾರ 41%
* ಬೀದರ್ 30%
* ರಾಯಚೂರು 36%
* ಬಳ್ಳಾರಿ 18%
* ತುಮಕೂರು 40%
* ಚಾಮರಾಜನಗರ 35%
* ಮೈಸೂರು 20%
* ಬೆಳಗಾವಿ 35%
* ಉಡುಪಿ 43%
* ಚಿಕ್ಕಬಳ್ಳಾಪುರ 24%
* ಗುಲ್ಬರ್ಗ 20%
ರಾಜ್ಯದ 52034 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಕೋಲಾರದಲ್ಲಿ ಲಾಂಗು ಮಚ್ಚುಗಳ ದರ್ಶನ, ಕೆಲವೆಡೆ ಮತದಾನ ಬಷಿಷ್ಕಾರ, ಬಿಎಸ್ ಎಫ್ ಯೋಧನಿಂದ ಮತದಾರನಿಗೆ ಹಿಗ್ಗಾ ಮುಗ್ಗಾ ಥಳಿತ ಪ್ರಕರಣ ಬಿಟ್ಟರೆ ರಾಜ್ಯದೆಲ್ಲೆಡೆ ಬಹುತೇಕ ಶಾಂತಿಯುತವಾಗಿದೆ.
ವಿಶೇಷವಾಗಿ ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸಿನಿತಾರೆಯರು, ಸಾಹಿತಿಗಳು ಹಾಗೂ ಕಣದಲ್ಲಿರುವ ಅಭ್ಯರ್ಥಿಗಳು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಇನ್ನಷ್ಟು ನಿರೀಕ್ಷಿಸಿ...












Click it and Unblock the Notifications