ನೀತಿ ಸಂಹಿತೆ ಅಡ್ಡಿಯಿಲ್ಲ : ತಿರುಗಲಿದೆ ಫ್ಯಾನ್

ಬೆಂಗಳೂರು, ಮೇ 4 : ಮತಗಟ್ಟೆಗಳಲ್ಲಿ ಚುನಾವಣಾ ಚಿಹ್ನೆಗಳನ್ನು ಹೋಲುವ ಯಾವುದೇ ವಸ್ತುಗಳಿದ್ದರೂ ಅವುಗಳನ್ನು ತೆರವುಗೊಳಿಸುವುದಿಲ್ಲ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಬಿಎಸ್ಆರ್ ಪಕ್ಷದ ಚಿಹ್ನೆಯಾದ ಸೀಲಿಂಗ್ ಫ್ಯಾನ್ ಅನ್ನು ಮತಗಟ್ಟೆಯಿಂದ ತೆಗೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಾಗ ಬಳ್ಳಾರಿ ಜಿಲ್ಲೆಯಲ್ಲಿ ಮತಗಟ್ಟೆಗಳಿಂದ ಫ್ಯಾನ್ ಅನ್ನು ನೀತಿ ಸಂಹಿತೆ ನೆಪ ಹೇಳಿ ತೆರವುಗೊಳಿಸಲಾಗಿತ್ತು. ಇದರಿಂದ ಕರ್ತವ್ಯ ನಿರ್ವಹಿಸುವ ಚುನಾಣಾಧಿಕಾರಿಗಳು ಬಿಸಿಲಿನಿಂದ ಕಂಗೆಟ್ಟಿದ್ದರು.

ಇದರಿಂದ ವಿಧಾನಸಭೆ ಚುನಾವಣೆಯಲ್ಲಿ, ಯಾವುದೇ ಆಕ್ಷೇಪ ವ್ಯಕ್ತವಾದರೂ ಸೀಲಿಂಗ್ ಫ್ಯಾನ್, ಮೇಜು, ಖುರ್ಚಿ, ಬಲ್ಪ್ ಮುಂತಾದ ಅಭ್ಯರ್ಥಿಗಳ ಚಿಹ್ನೆ ಸೂಚಿಸುವ ವಸ್ತಗಳನ್ನು ಮತಗಟ್ಟೆಯಿಂದ ತೆರವುಗೊಳಿಸುವುದಿಲ್ಲ ಎಂದು ಘೋಷಿಸಿಲಾಗಿದೆ.

2008ರ ಚುನಾವಣೆಯ ಸಂದರ್ಭಗಳಲ್ಲೂ ಪ್ಯಾನ್, ಬಲ್ಪ್, ಮೇಜು ಮುಂತಾದವುಗಳನ್ನು ಮತಗಟ್ಟೆಯಿಂದ ತೆಗೆಯುವಂತೆ ವಿವಿಧ ಪಕ್ಷಗಳು ಬೇಡಿಕೆ ಇಟ್ಟಿದ್ದವು. ಚುನಾವಣಾ ಮುನ್ನದಿನವೇ ಪ್ರಕಟಣೆ ನೀಡಿರುವ ಆಯೋಗ, ರಾಯಚೂರು, ಬಳ್ಳಾರಿ ಸೇರಿದಂತೆ ಬಿರುಬಿಸಿಲು ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಫ್ಯಾನ್ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಆದ್ದರಿಂದ ಅವುಗಳನ್ನು ತೆರವುಗೊಳಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ. ಕೆಲವು ಪಕ್ಷೇತರ ಅಭ್ಯರ್ಥಿಗಳು ಕನ್ನಡಕದ ಚಿಹ್ನೆ ಪಡೆದಿದ್ದಾರೆ. ಆದರೆ, ಕನ್ನಡಕ ತೆಗೆದಿಟ್ಟಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆ ಎಂದು ಝಾ ಪ್ರಶ್ನಿಸಿದ್ದಾರೆ.

ಹಸ್ತ ತೆಗೆಯಿರಿ : ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಜ್ಯೋತಿಷಿಗಳ ಜಾಹೀರಾತು ಫಲಕಗಳಲ್ಲಿರುವ ಹಸ್ತ ಚಿಹ್ನೆಯನ್ನು ತಕ್ಷಣ ತೆರವುಗೊಳಿಸುವಂತೆ ಮಡಿಕೇರಿಯಲ್ಲಿ ಅಭ್ಯರ್ಥಿಯೊಬ್ಬರು ಮನವಿ ಮಾಡಿದ್ದರು.

ಜ್ಯೋತಿಷಿಗಳ ಟ್ರೇಡ್ ಮಾರ್ಕ್ ಹಸ್ತ ಕಾಂಗ್ರೆಸ್‌ನ ಚಿಹ್ನೆಯಾಗಿರುವುದರಿಂದ ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಅವರು ಆರೋಪಿಸಿದ್ದರು. ಆದರೆ, ಆಯೋಗ ಈ ಮನವಿಯನ್ನು ತಳ್ಳಿಹಾಕಿದೆ.

ಆಯೋಗದ ಈ ನಿರ್ಧಾರದಿಂದಾಗಿ ಚುನಾವಣಾಧಿಕಾರಿಗಳು ಸ್ಪಲ್ಪ ನಿಟ್ಟುಸಿರು ಬಿಡಬಹುದು. ಹಿಂದಿನ ದಿನ ರಾತ್ರಿಯಿಂದ ಮತಗಟ್ಟೆಯಲ್ಲಿ ವಾಸ್ತವ್ಯ ಹೂಡುವ ಚುನಾವಣಾಧಿಕಾರಿ, ಪೊಲೀಸರು ಫ್ಯಾನ್ ಗಾಳಿಯಿಂದ ವಂಚಿತರಾಗುವುದಿಲ್ಲ.

ಅಭ್ಯರ್ಥಿಗಳ ಚಿಹ್ನಗಳು : ರಾಷ್ಟ್ರೀಯ ಮತ್ತು ಮಾನ್ಯತೆ ಪಡೆದ ಪ್ಷಕಗಳಿಗೆ ಚುನಾವಣಾ ಆಯೋಗ ಚಿಹ್ನೆಗಳನ್ನು ನೀಡಿದೆ. ಆದರೆ, ಪಕ್ಷೇತರ ಅಭ್ಯರ್ಥಿಗಳು ಮೇಜು, ಖುರ್ಚಿ, ಪೆನ್ನು, ಕಾಗದ, ಸಿಲಿಂಡರ್, ಕನ್ನಡಕ, ಆಟೋರಿಕ್ಷಾ, ಚೆಸ್ ಬೋರ್ಡ್ ಮುಂತಾದ ಚಿಹ್ನೆಗಳನ್ನು ಪಡೆದಿರುತ್ತಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+