• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮ್ಮನನ್ನೆ ಸುತ್ತಿಗೆ ಯಿಂದ ಬಡಿದು ಕೊಂದ ಅಣ್ಣ

|
ಬೆಂಗಳೂರು, ಮೇ 4 : ಅಣ್ಣನೇ ತಮ್ಮನನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಧಾರುಣ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಕೊಲೆ ಮಾಡಿರುವ ಶ್ರೀನಾಥ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಕೆನರಾ ಬ್ಯಾಂಕ್ ಬಡಾವಣೆಯ ನಂಜರಸಪ್ಪ ನಗರದ ನಿವಾಸಿ ಶ್ರೀಕಾಂತ್ (22) ಕೊಲೆಯಾವರು. ಹತ್ಯೆ ಮಾಡಿದ ಅಣ್ಣ ಶ್ರೀನಾಥ್‌ ಮಾನಸಿಕ ಅಸ್ವಸ್ಥನಾಗಿರುವುದು ಘಟನೆಗೆ ಕಾರಣವೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಶ್ರೀನಾಥ್ ಹಾಗೂ ಶ್ರೀಕಾಂತ್ ಮೂಲತಃ ತುಮಕೂರು ಜಿಲ್ಲೆ ಮಧುಗಿರಿಯವರು. ಮಧುಗಿರಿ ತಾಲೂಕು ಮಾಳೇನಹಳ್ಳಿ ನಿವಾಸಿ ಗೋವಿಂದರಾಜು ಹಾಗೂ ಲಕ್ಷ್ಮಮ್ಮ ಅವರ ಮಕ್ಕಳು. ದಂಪತಿಗಳೂ ಹನ್ನೆಡರು ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಗೋವಿಂದರಾಜು ಎಲೆಕ್ಟ್ರಿಷಿಯನ್ ಆಗಿ ಹಾಗೂ ಲಕ್ಷ್ಮಮ್ಮ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಶುಕ್ರವಾರ ಬೆಳಗ್ಗೆ ಗೋವಿಂದರಾಜು ಮತ್ತು ಲಕ್ಷ್ಮಮ್ಮ ಕೆಲಸಕ್ಕೆ ತರೆಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಜಗಳ ಕೊಲೆಯಲ್ಲಿ ಅಂತ್ಯ : ಸಹೋದರರ ನಡುವೆ ಕ್ಷುಲ್ಲಕ ಕಾರಣಕ್ಕೆ ಶುಕ್ರವಾರ ಜಗಳ ನಡೆದಿದೆ. ನಂತರ ಶ್ರೀಕಾಂತ್ ಹಾಡು ಕೇಳುತ್ತಾ, ಕೊಠಡಿಯಲ್ಲಿದ್ದ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆಗಮಿಸಿದ ಶ್ರೀನಾಥ್ ಮನೆಯಲ್ಲಿದ್ದ ಸುತ್ತಿಗೆ ತೆಗೆದುಕೊಂಡು ಹೋಗಿ ಸಹೋದರನ ತಲೆಗೆ ಹೊಡೆದಿದ್ದಾರೆ.

ಶ್ರೀಕಾಂತ್ ಪರಾರಿಯಾಗಲು ಯತ್ನಿಸುವ ಮುನ್ನವೇ ಶ್ರೀನಾಥ್ ಹಲವರು ಬಾರಿ ಶ್ರೀಕಾಂತ್ ಅವರಿಗೆ ಹೊಡೆದಿದ್ದಾರೆ. ಜೋರಾಗಿ ಕೂಗಿಕೊಂಡು ಶ್ರೀಕಾಂತ್ ಸ್ಥಳದಲ್ಲೇ ಕುಸಿದು ಬಿದಿದ್ದಾರೆ. ಸ್ಥಳಕ್ಕೆ ಧಾಮಿಸಿದ ನೆರೆಮನೆಯವರು ಪೋಷಕರಿಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿದಾಗ ಶ್ರೀನಾಥ್ ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಒಂದೇ ಗಂಟೆಯಲ್ಲಿಯೇ ವಿಜಯನಗರದಲ್ಲಿ ಆತನನ್ನು ಬಳಿ ಬಂಧಿಸಿದ್ದಾರೆ.

ದುಶ್ಚಟಕ್ಕೆ ಬಲಿ : ಶ್ರೀನಾಥ್ 9 ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿದ್ದು, ನಂತರ ಶಾಲೆಗೆ ಹೋಗಲು ನಿರಾಸಕ್ತಿ ತೋರಿದ್ದ. ಪ್ರತಿನಿತ್ಯ ಮದ್ಯ ಹಾಗೂ ಗಾಂಜಾ ಸೇವಿಸಿ ಮನೆಗೆ ಬರುವುದು ಸಾಮಾನ್ಯವಾಗಿತ್ತು.

ಕ್ರಮೇಣವಾಗಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಈತನಿನನ್ನ್ನು ನಿಮ್ಹಾನ್ಸ್‌ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆತನ ಆರೋಗ್ಯ ಸ್ಥಿತಿ ಸುಧಾರಿಸದಿದ್ದರೂ ಮನೆಯಲ್ಲಿಯೇ ಇಟ್ಟುಕೊಂಡು, ನಾಗರಬಾವಿಯಲ್ಲಿರುವ ಕ್ಲಿನಿಕ್‌ವೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಎರಡು ವರ್ಷದಿಂದ ಮದ್ಯ ಮತ್ತು ಗಾಂಜಾ ಚಟ ಬಿಟ್ಟಿದ ಶ್ರೀನಾಥ್ ಖಿನ್ನತೆಗೊಳಗಾಗಿದ್ದ. ವಿಚಿತ್ರವಾಗಿ ವರ್ತಿಸುತ್ತಿದ್ದ, ಕೋಪಿಸಿಕೊಳ್ಳುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಶ್ರೀಕಾಂತ್ ಡಿಪ್ಲೋಮೊ ಪದವಿ ಪಡೆದಿದ್ದು, ಆಂಧ್ರ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಯುಗಾದಿಗೆ ಬೆಂಗಳೂರಿಗೆ ಮರಳಿದ್ದ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು vijayanagar ಸುದ್ದಿಗಳುView All

English summary
A 22-year-old man was murdered allegedly by his elder brother over a trivial issue at their house in Chandra Layout police station limits on Friday afternoon. The deceased is Srikanth, a resident of Nanjarasappa Colony. Police claimed they arrested the suspect, Srinath, within an hour of the crime. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more