ಮೋದಿಗೆ ಪೂಜಾರಿ ಸವಾಲ್: 48 ಗಂಟೆ ಗಡುವು

ಕರ್ನಾಟಕದಲ್ಲಿ ಬಿಜೆಪಿ ಅಡಳಿತಕ್ಕೆ ಬಂದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದಿರುವ ಪೂಜಾರಿ ಒಂದು ವೇಳೆ ಬಿಜೆಪಿಗೆ ಅಧಿಕಾರ ಪ್ರಾಪ್ತಿಯಾಗದಿದ್ದರೆ ಮೋದಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸಲಿ. ಈ ಬಗ್ಗೆ 48 ಗಂಟೆಗಳೊಳಗೆ ಸ್ಪಷ್ಟಪಡಿಸಬೇಕು ಎಂದು ಪೂಜಾರಿ ರಣವೀಳ್ಯ ನೀಡಿದ್ದಾರೆ.
ಅತ್ತ, ಗುಜರಾತ್ ಮುಖ್ಯಮಂತ್ರಿ ಮೋದಿ ಅವರು ಮಂಗಳೂರಿನ ನೆಹರೂ ಮೈದಾನದಲ್ಲಿ ಚುನಾವಣಾ ಭಾಷಣ ಮಾಡಿ ವಾಪಸಾಗುತ್ತಿದ್ದಂತೆ ಒಂದು ಕ್ಷಣವೂ ತಡಮಾಡದೆ ಸುದ್ದಿಗೋಷ್ಠಿಯಲ್ಲಿ ನಡೆಸಿದ ಪೂಜಾರಿ, ಪ್ರಧಾನಿಯಾಗಲು ಹೊರಟ ಮೋದಿಗೆ ಕರ್ನಾಟಕದ ಬಗ್ಗೆ ಜ್ಞಾನವಿಲ್ಲ. ಇದು ಗುಜರಾತಿನಲ್ಲಿ ನಡೆಯುವ ಚುನಾವಣೆ ಅಲ್ಲ ಎಂದು ಹೇಳಿದರು.
ರಾಹುಲ್ ಅವರನ್ನು ಮೋದಿ, 'ಗೋಲ್ಡನ್ ಸ್ಪೂನ್' ಎಂದು ಟೀಕಿಸಿದ್ದಾರೆ. ರಾಹುಲ್ ವಿರುದ್ಧ ಮಾತನಾಡುವ ಯೋಗ್ಯತೆ ಅವರಿಗಿಲ್ಲ. ಹಾಗಾದರೆ ರೆಡ್ಡಿಗಳು ಚಿನ್ನದ ಖುರ್ಚಿಯಲ್ಲಿ ಕುಳಿತ ಬಗ್ಗೆ ಮೊದಲು ಉತ್ತರಿಸಲಿ' ಎಂದೂ ಪೂಜಾರಿ ಸವಾಲು ಎಸೆದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications