"ಲಿಂಗಾಯತರೇ ಬಿಎಸ್ವೈ ಬೆಂಬಲಿಸಬೇಡಿ"

Sharad Yadav
ಬೆಳಗಾವಿ, ಏ. 29 : ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡಿದರೂ ಲಿಂಗಾಯತ ಸಮುದಾಯ ಬೆಂಬಲ ನೀಡುತ್ತದೆ ಎಂದು ಯಡಿಯೂರಪ್ಪ ತಿಳಿದುಕೊಂಡಿದ್ದಾರೆ. ಇವರ ಭ್ರಷ್ಟಾಚಾರಗಳನ್ನೆಲ್ಲ ಸಹಿಸಿಕೊಂಡು ಬೆಂಬಲ ನೀಡಲು ಲಿಂಗಾಯತರೇನಾದರು ಇವರ ಜೇಬಿನಲ್ಲಿದ್ದಾರೆಯೇ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶರದ್‌ ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಜೆಡಿಯು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು, ಲಿಂಗಾಯತ ಸಮುದಾಯಕ್ಕೆ ಅತ್ಯಂತ ಪುರಾತನ ಇತಿಹಾಸವಿದೆ. ಸಮಾಜ ಸುಧಾರಣೆ, ದಲಿತರರಿಗೆ ಸಮಾನತೆ ಒದಗಿಸಲು ಶ್ರಮಿಸಿದ ಬಸವಣ್ಣನವರು ಲಿಂಗಾಯತರ ಸಮುದಾಯದ ಪ್ರತೀಕ.

ಸಂಪತ್ತು ವೃದ್ಧಿಗಾಗಿ ಅಳಿಯ, ಮಕ್ಕಳಿಗೆ ನೆರವಾಗುವಂತೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಜೈಲಿಗೆ ಹೋಗಿಬಂದ ಯಡಿಯೂರಪ್ಪ ಅವರನ್ನು ಲಿಂಗಾಯತ ಸಮಾಜದ ಪ್ರಭಾವಿ ನಾಯಕ ಎಂದು ಒಪ್ಪಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಭವ್ಯ ಪರಂಪರೆ ಇತಿಹಾಸವಿದೆ. ಬಸವಣ್ಣ, ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ಅಪ್ರತಿಮರು ಹಾಗೂ ಸಮಾಜ ಸುಧಾರಕರಿಗೆ ಜನ್ಮ ನೀಡಿದ ಪುಣ್ಯಭೂಮಿ ಇದು. ಇಂತಹ ಭವ್ಯ ಇತಿಹಾಸ ಹೊಂದಿರುವ ಕರ್ನಾಟಕಕ್ಕೆ ಯಡಿಯೂರಪ್ಪ ಕಳಂಕ ತಂದಿದ್ದಾರೆ ಎಂದು ಅವರು ದೂರಿದರು.

ಕಾಂಗ್ರೆಸ್‌ - ಬಿಜೆಪಿ ಒಂದೇ : ಎಚ್‌.ಡಿ. ಕುಮಾರಸ್ವಾಮಿ ರೆಸಾರ್ಟ್‌ ರಾಜಕೀಯದಿಂದಲೇ ಮುಖ್ಯಮಂತ್ರಿಯಾದರು. ಕಾಂಗ್ರೆಸ್‌ ಹಲವು ವರ್ಷಗಳ ಕಾಲ ರಾಜ್ಯ ಆಳಿದ್ದರೂ ಭ್ರಷ್ಟಾಚಾರ, ಅಭಿವೃದ್ದಿಯನ್ನು ಕಡೆಗಣಿಸಿತು.

ಕಾಂಗ್ರೆಸ್ ‌- ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿಂದ್ದಂತೆ. ಈ ಪಕ್ಷಗಳ ಭ್ರಷ್ಟಾಚಾರಕ್ಕೆ ಕೊನೆಗೊಳಿಸಲು ಜೆಡಿಯುಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್ ‌- ಬಿಜೆಪಿ ಪಕ್ಷಗಳು ಅಕ್ಕಿ ಕೆ.ಜಿಗೆ 70ರೂ. ಆಗುತ್ತಿರುವಾಗ 1ರೂ.ಗೆ ಕೆ.ಜಿ. ಅಕ್ಕಿ ಕೊಡುವುದಾಗಿ ಜನರನ್ನು ಮೂರ್ಖರನ್ನಾಗಿಸಲು ಮುಂದಾಗಿವೆ.

ರಾಜ್ಯದಲ್ಲಿ ಆಡಳಿತವೇ ಇಲ್ಲವಾಗಿದೆ. ಜನರ ಹಿತ ಕಾಯಲು ಆಡಳಿತ ಹಾಗೂ ವಿಪಕ್ಷ ವಿಫಲವಾಗಿದ್ದು, ಅತ್ಯುತ್ತಮ ವಿಪಕ್ಷವಾಗಿ ಕಾರ್ಯನಿರ್ವಹಿಸಲು ಜೆಡಿಯುಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಸಂತಾಪ : ಹೃಯಾಘಾತದಿಂದ ಮೃತಪಟ್ಟ ಸಿಂಧಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪ ಗೌಡ ಅವರಿಗೆ ಈ ಸಂದರ್ಭದಲ್ಲಿ ಪಕ್ಷದ ನಾಯಕರು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+