ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದುಜೀ ಯಾವ ಲೋಕಾಯುಕ್ತ ವರದಿ ಹೇಳ್ತೀರಾ?

By Mahesh
|
Google Oneindia Kannada News

ಅರಕಲಗೂಡು, ಏ.26: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೇ ಲೋಕಾಯುಕ್ತ ವರದಿ ಅನುಷ್ಠಾನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಘೋಷಿಸಿದರು. ಆದರೆ, ಯಾವ ಕಾಲದ ವರದಿ ಎಂದರೆ ಉತ್ತರಿಸದೆ ನುಣಚಿಕೊಂಡರು. ಲೋಕಾಯುಕ್ತ ವರದಿ ಪ್ರಕಾರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಕೂಡಾ ವಿಸ್ತಾರವಾಗಿ ವಿವರಿಸಲಾಗಿದೆ.

ಅಂದಿನ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಕಾಲದಿಂದ ಯಡಿಯೂರಪ್ಪ ಅವರ ಕಾಲದ ತನಕ ಭ್ರಷ್ಟತನವನ್ನು ಬಯಲಿಗೆಳೆದು ವರದಿಯನ್ನು ಯುವಿ ಸಿಂಗ್, ಸಂತೋಷ್ ಹೆಗ್ಡೆ ಆವರ ತಂಡ ತಯಾರಿಸಿತ್ತು. ಈಗ ಲೋಕಾಯುಕ್ತ ವರದಿ ಜಾರಿಗೆ ತಂದರೆ ಕಾಂಗ್ರೆಸ್ ಸಿಎಂಗಳಾದ ಎಸ್ಸೆಂ ಕೃಷ್ಣ, ಧರಂ ಸಿಂಗ್ ಅವರಿಗೂ ಬಿಸಿ ತಟ್ಟಲಿದೆ ಎಂಬ ಕಾಮನ್ ಸೆನ್ಸ್ ಮರೆತು ಸಿದ್ದು ಹೇಳಿದ ಡೈಲಾಗ್ ಕಾಂಗ್ರೆಸ್ ನಾಯಕರಿಗೆ ಇರಸು ಮುರುಸು ತಂದಿರುವುದಂತೂ ನಿಜ.

Siddaramaiah Promises Lokayukta report

ಅರಕಲಗೂಡು ಪಟ್ಟಣದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ಉದ್ಘಾಟಿಸಿ ಶುಕ್ರವಾರ (ಏ.26) ಸಿದ್ದರಾಮಯ್ಯ ಮಾತನಾಡಿದರು, ಕಳೆದ ಐದು ವರ್ಷಗಳಲ್ಲಿ ರಾಜ್ಯ ಆಳಿದ ಬಿಜೆಪಿ ಪಕ್ಷ ತನ್ನ ಸ್ವಾರ್ಥಕ್ಕಾಗಿ ದುರಾಡಳಿತ ನಡೆಸಿದೆ. ಇದರ ಪ್ರತಿಫಲವೇ ರಾಜ್ಯ ಒಂದು ಲಕ್ಷ ಕೋಟಿಗೂ ಮೀರಿ ಸಾಲ ಮಾಡಿದೆ. ಇದು ರಾಜ್ಯ ಜನತೆಯ ಮೇಲಿದೆ ಎಂದು ನೊಂದು ಕೊಂಡರು.

ರಾಜ್ಯಕ್ಕೆ ಅಂಟಿರುವ ಕೊಳೆಯನ್ನು ತೊಳೆಯಲು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕಲ್ಪಿಸಿ ಎಂದು ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಳಿಸಿರುವ ಅಕ್ರಮ ಆಸ್ತಿ ರಕ್ಷಿಸಿಕೊಳ್ಳುವ ಸಲುವಾಗಿ ಕೆಜೆಪಿ ಪಕ್ಷ ಕಟ್ಟಿದ್ದಾರೆ. ಈ ಪಕ್ಷದ ವತಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಎಷ್ಟರಮಟ್ಟಿಗೆ ಸಮರ್ಥರು, ಪ್ರಾಮಾಣಿಕರು ಎಂದು ಊಹಿಸಿಕೊಳ್ಳಿ ಎಂದರು.

ಪುಟ್ಟಸ್ವಾಮಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡು ಎಂದು ಹೇಳಿದ್ದೇನೆ ವಿನಹ ಟಿಕೆಟ್ ಕೊಡುವುದಾಗಿ ಯಾವುದೇ ಭರವಸೆ ನೀಡಿರಲಿಲ್ಲ. ಅದನ್ನು ದಿಕ್ಕರಿಸಿ ಕೆಜೆಪಿ ಪಕ್ಷದಲ್ಲಿ ಚುನಾವಣೆಗೆ ನಿಂತಿರುವ ಪುಟ್ಟಸ್ವಾಮಿ ಗೆಲುವು ಅಸಾಧ್ಯ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುಗೆ ಮತ ನೀಡಿ ಗೆಲುವು ತಂದುಕೊಟ್ಟರೇ ಅದು ಸಿದ್ಧರಾಮಯ್ಯನ ಗೆಲುವು ಆಗುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ಜೆಡಿಎಸ್ ಪಕ್ಷ ಪ್ರಾಬಲ್ಯಕ್ಕೆ ಬ್ರೇಕ್: ಜೆಡಿಎಸ್ ಅಧಿಕಾರದ ಕನಸು ಕಾಣುತ್ತಿದೆ. ಕೇವಲ ಅಪ್ಪಮಕ್ಕಳ ಪಕ್ಷಕ್ಕೆ ಜನತೆ ಮುಂದೆ ಬೆಂಬಲಿಸಲಾರರು. ರಾಜ್ಯದಲ್ಲಿ ಸುಮಾರು 20 ಸ್ಥಾನಗಳನ್ನು ಮಾತ್ರ ಜೆಡಿಎಸ್ ಪಡೆಯಲಿದೆ. ಹಾಸನ ಜಿಲ್ಲೆಯಲ್ಲಿಯೇ ಕೇವಲ ಇಬ್ಬರು ಶಾಸಕರಾಗುವ ಲಕ್ಷಣಗಳು ಕಂಡುಬರುತ್ತಿವೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಶಾಸಕ ಮಂಜು ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ದೊಡ್ಡಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು,ಈ ಗೆಲುವು ಸಿದ್ದರಾಮಯ್ಯನವರಿಗೆ ಸೇರಲಿದೆ.ಮುಂದಿನ ದಿನಗಳಲ್ಲಿಯೂ ಕೂಡ ಅವರ ಪರವಾಗಿ ನಿಂತು ಮುಖ್ಯಮಂತ್ರಿಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದರು.

English summary
Congress leader Siddaramaiah promises to implement Lokayukta report if Congress comes to power in state. Siddu was busy campaigning for Arakalgud candidate A Manju today(Apr.26). Siddaramaiah didn't mentioned which Lokayukta report,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X