• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾಸಮರ : ಒಂದೇ ದಿನ ಸಿಕ್ಕಿತು 80 ಲಕ್ಷ

|
Money
ಬೆಂಗಳೂರು, ಏ. 18 : ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಣದ ಹೊಳೆ ಹರಿಯುವುದು ಖಚಿತವಾಗಿದೆ. ಮಂಗಳವಾರ ತಡ ರಾತ್ರಿಯಿಂದ ಬುಧವಾರ ಸಂಜೆಯ ವರೆಗೆ ರಾಜ್ಯದ ವಿವಿಧ ಪ್ರದೇಶದಲ್ಲಿ 80 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ವ್ಯಕ್ತಿಯೊಬ್ಬ ಬಸ್ ನಲ್ಲಿ ಸಾಗಿಸುತ್ತಿದ್ದ 60 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿದ್ದಾರೆ. ಲೋಕೇಶ್ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನಿಂದ ಹಣ ತೆಗೆದುಕೊಂಡು ಬಂದಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ, ಯಾವ ಪಕ್ಷದ ಹಣ ಎಂದು ತಿಳಿದು ಬಂದಿಲ್ಲ. (ಭ್ರಷ್ಟಾಚಾರ ತಡೆಯಲು ಸಹಾಯ ಮಾಡಿ)

ಕಾರ್ ನಲ್ಲಿತ್ತು 8 ಲಕ್ಷ : ಬೆಳಗಾವಿಯಿಂದ ಕೊಪ್ಪಳಕ್ಕೆ ಸಾಗಿಸುತ್ತಿದ್ದ 8 ಲಕ್ಷ ರೂ.ಹಣವನ್ನು ಸವದತ್ತಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂಡಿಕಾ ಕಾರಿನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು.

ನೆಲಮಂಗಲ ಬಳಿ 8 ಲಕ್ಷ : ನೆಲಮಂಗಲ ಚೆಕ್ ಪೋಸ್ಟ್ ಬಳಿ ಒಂದು ಕೋಟಿ ರೂ. ದೊರಕಿದ ಪ್ರಕರಣ ಬಗೆಹರಿಯುವ ಮುನ್ನವೇ ಗುರುವಾರ ಸಂಜೆ ಪೊಲೀಸರು 8 ಲಕ್ಷ ರೂ.ಗಳನ್ನು ವಶಪಡಿಸಿಕೊಂಡು. ಒಂದು ಕಾರು ಮತ್ತು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ನಾಳೆ ಬಿಜೆಪಿ ಪ್ರಣಾಳಿಕೆ : ವಿಧಾನಸಭೆ ಚುನಾವಣೆಗೆ ಶುಕ್ರವಾರ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಲಿದೆ. ರಾಜ್ಯದ ಐದು ಜಿಲ್ಲೆಗಳ ವಿವಿಧ ಪ್ರಚಾರ ಸಭೆಯಲ್ಲಿ ಪ್ರಣಾಳಿಕೆ ಬಿಡುಗಡೆ ಆಗಲಿದೆ ಎಂದು ಪಕ್ಷದ ಪ್ರಟಕಣೆಯಲ್ಲಿ ತಿಳಿಸಲಾಗಿದೆ. (ಪ್ರಚಾರಕ್ಕೆ ಮೋದಿ ಬರಲಿದ್ದಾರೆ)

ಮುನಿರತ್ನಗೆ ರಿಲೀಫ್ : ಚುನಾವಣಾಧಿಕಾರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಗೊಂಡಿದ್ದ ಚಿತ್ರ ನಿರ್ಮಾಪಕ, ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ಜಾಮೀನು ದೊರಕಿದೆ. 3ನೇ ಎಸಿಎಂಎಂ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. (ಮುನಿರತ್ನ ಮಾಡಿದ್ದೇನು?)

ಖೇಣಿಗೆ ಕಿರಿಕ್ : ಬೀದರ್ ದಕ್ಷಿಣ ಕೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಭಾರತೀಯ ರಲ್ಲ. ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಅವರ ಪ್ರತಿಸ್ಪರ್ಧಿ ಟಿ.ಜೆ.ಅಬ್ರಾಹಂಗೆ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ದೂರನ್ನು ಪಡೆದಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.( ಏನಿದು ಖೇಣಿ ರಗಳೆ )

ಚುನಾವಣೆಗೆ ಕೆಂಪು ಬಾವುಟ : ಕೆಲವು ದಿನಗಳಿಂದ ಮರೆಯಾಗಿದ್ದ ನಕ್ಸಲರು ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಶೃಂಗೇರಿ ಸಮೀಪದ ಕಿಗ್ಗಾ ದೇವಾಲಯದ ಬಳಿ ಕರಪತ್ರ ಅಂಟಿಸಿರುವ ನಕ್ಸಲರು ಚುನಾವಣೆ ಬಹಿಷ್ಕರಿಸುವಂತೆ ಮನವಿ ಮಾಡಿದ್ದಾರೆ. ನಕ್ಸ್ ಲ್ ನಿಗ್ರಹ ಪಡೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಕೆಜೆಪಿ ಅಭ್ಯರ್ಥಿಗೆ ನ್ಯಾಯಾಂಗ ಬಂಧನ : ಬೆಂಗಳೂರಿನ ರಾಜರಾಜೇಶ್ವರಿ ನಗರದ ಕೆಜೆಪಿ ಅಭ್ಯರ್ಥಿ ವೆಂಕಟೇಶ ಗೌಡ ಅವರಿಗೆ ನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚುನಾವಣಾಧಿಕಾರಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಶಾಮನೂರು ನಾಮಪತ್ರ ತಿರಸ್ಕರಿಸಿ : ಕೆಪಿಸಿಸಿ ಖಜಾಂಚಿ, ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಸುಬಾನ್ ಖಾನ್ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.(ಶಾಮನೂರು ಸಿಎಂ ಆಗ್ತಾರಂತೆ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು karnataka assembly election ಸುದ್ದಿಗಳುView All

English summary
Rs 80 lack Illegal Money seized all over the state today. On April, 18, in Chirtadurga, Belagam and Bangalore police sized the cash worth of 80 lacks. here is a latest updates of Thursday political developments.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more