ಇ-ಖಾತಾ ವಿತರಣೆಗೆ ವೇಗ; ಬೆಂಗಳೂರಿನ 52 ಕೇಂದ್ರಗಳಲ್ಲಿ ನಾಗರಿಕರಿಗೆ ಸೇವೆ, ನಿಮ್ಮ ಸ್ಥಳಗಳ ವಿಳಾಸ ಇಲ್ಲಿದೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇ-ಖಾತಾ ವಿತರಣೆ, ಬಿ-ಖಾತಾ ಪರಿವರ್ತನೆ ಪ್ರಕ್ರಿಯೆಗೆ ವೇಗ ನೀಡಲಾಗಿದೆ. ಇಂದಿನಿಂದ 'ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ'ಕ್ಕೆ ಚಾಲನೆ ನೀಡಲಾಗುತ್ತದೆ. ತಪ್ಪುಗಳ ತಿದ್ದುಪಡಿ, ಇ-ಖಾತಾಗೆ ಪರಿವರ್ತನೆ ಹೀಗೆ ವಿವಿಧ ಆಸ್ತಿ ದಾಖಲೆಗಳ ಸೇವೆ ನೀಡಲು ಪ್ರತಿ ವಾರ ನಾಗರದ 5 ಪಾಲಿಕೆ ವ್ಯಾಪ್ತಿಗಳ 52 ಸ್ಥಳಗಳಲ್ಲಿ ಪ್ರತಿ ಕೇಂದ್ರದಲ್ಲೂ 200 ಇ-ಖಾತಾ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಇನ್ಣೂ ಬಿ ಖಾತಾ ದಿಂದ ಎ ಖಾತಾ ಪರಿವರ್ತಿಸಿಕೊಳ್ಳುವ ನಗರದ ಕಟ್ಟಡ ಮಾಲೀಕರಿಗೂ ಇದೊಂದು ಉತ್ತಮ ಅವಕಾಶವಾಗಿದೆ. ಅವರು ನಿಯನದಂತೆ ಖಾತೆ ಬದಲಾವಣೆಗಾಗಿ ಶೇ. 5ರ ಆಸ್ತಿ ಮೌಲ್ಯ ಬದಲಾಗಿ ಶೇ. 2 ರಷ್ಟು ಮಾತ್ರ ಪಾವತಿಸುವಂತೆ ಅವಕಾಶ ನೀಡಲಾಗಿದೆ. ಮುಂದಿನ 100 ದಿನಗಳವರೆಗೆ ಈ ಸೇವೆ ಲಭ್ಯವಿರುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾಹಿತಿ ನೀಡಿದೆ.

ನಗರದ 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಖಾತಾ ಸೇವೆ ಸಿಗಲಿದೆ ಎಂಬ ಗೊಂದಲ ನಿಮ್ಮಲ್ಲಿದ್ದರೆ, ಅದರ ಮಾಹಿತಿ ಇಲ್ಲಿದೆ. ಮೇ 16ರ ಶನಿವಾರದಿಂದ ನಗರದ 52 ಸ್ಥಳಗಳಲ್ಲಿ 'ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ' ಕೇಂದ್ರಗಳಲ್ಲಿ ಸೇವೆ ಪಡೆಯಬಹುದು. ವಿಳಾಸ ಇಲ್ಲಿ ತಿಳಿಯಿರಿ.
ಅಭಿಯಾನ/ಯೋಜನೆಯ ಉದ್ದೇಶವೇನು?
* ಬಾಕಿ ಪ್ರಕರಣಗಳ ಗಣನೀಯ ಕಡಿಮೆ ಮಾಡುವುದು
* ನಾಗರಿಕ ಅನುಕೂಲತೆಯನ್ನು ಸುಧಾರಿಸುವುದು
ಪಾರದರ್ಶಕತೆ ಬಲಪಡಿಸುವುದು
* ಸುಲಭ, ಪರಿಣಾಮಕಾರಿ ಹಾಗೂ ನಾಗರಿಕ ಸ್ನೇಹಿ ಇ-ಖಾತಾ ಸೇವೆ ಒದಗಿಸುವುದು
ಅಭಿಯಾನದ ಸ್ಥಳಗಳ ವಿವರ:
1-ಬೆಂಗಳೂರು ಪೂರ್ವ ನಗರ ಪಾಲಿಕೆ
1.ಮಾರತಹಳ್ಳಿ: ನ್ಯೂ ಹಾರಿಜಾನ್ ಕಾಲೇಜು, ಬೆಳ್ಳಂದೂರು, ಕಾಡುಬೀಸನಹಳ್ಳಿ.
2. ವೈಟ್ ಫೀಲ್ಡ್: ವೈಟ್ ಫೀಲ್ಡ್ ಕ್ಲಬ್
3. ಹೂಡಿ: ಪಾಲಿಕೆ ವಾರ್ಡ್ ಕಚೇರಿ, ಎಇಸಿಎಸ್ ಲೇಔಟ್, ದೊಡ್ಡನೆಕ್ಕುಂದಿ.
4. ಕೆ.ಆರ್.ಪುರಂ: ಐಟಿಐ ಶಾಲೆ, ಐಟಿಐ ಕಾಲೋನಿ, ಕೆ.ಆರ್ ಪುರಂ.
5. ಹೆಚ್.ಎ.ಎಲ್ ಏರ್ಪೋರ್ಟ್ ವಿಭಾಗ: ಎಸ್.ಸಿ.ಟಿ ಪಾಲಿಟೆಕ್ನಿಕ್, ಕಗ್ಗದಾಸಪುರ ಮುಖ್ಯ ರಸ್ತೆ.
6. ಹೊರಮಾವು: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಕೆರೆ ಅಗ್ರ ಮುಖ್ಯ ರಸ್ತೆ, ಬೆಂಗಳೂರು
2-ಬೆಂಗಳೂರು ಕೇಂದ್ರ ನಗರ ಪಾಲಿಕೆ
1. ಸಿ.ವಿ.ರಾಮನ್ ನಗರ: ಸಿ.ವಿ.ರಾಮನ್ ನಗರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, 9ನೇ ಎ ಮುಖ್ಯ ರಸ್ತೆ, ಐIಅ ಕಾಲೋನಿ, ಊಂಐ 3ನೇ ಹಂತ, ಸೆಕ್ಟರ್ 4, ಜೀವನ್ ಭೀಮಾ ನಗರ.
2. ಜೀವನ್ ಭೀಮಾ ನಗರ: ಜೀವನ್ ಭೀಮಾ ನಗರ, ತಮಿಳು ಸರ್ಕಾರಿ ಶಾಲೆ.
3. ಶಾಂತಿನಗರ: ಶಾಂತಿನಗರ ಸರ್ಕಾರಿ ಮಾದರಿ ಪ್ರಾಥಮಿಕ ತಮಿಳು ಬಾಲಕಿಯರ ಶಾಲೆ, ಶಾಂತಿನಗರ ಮುಖ್ಯ ರಸ್ತೆ, ಲಾಂಗ್ಫೋರ್ಡ್ ಟೌನ್.
4. ದೊಮ್ಮಲೂರು: ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಬಯಲು ರಂಗಮಂಟಪ, 1ನೇ ಮಹಡಿ, ಇಂಡಿಕ್ಯೂಬ್ ಪಾರ್ಕ್, ಊಂಐ ಹಳೆ ವಿಮಾನ ನಿಲ್ದಾಣ ರಸ್ತೆ, ದೋಮ್ಲೂರು 1ನೇ ಹಂತ.
5. ಗಾಂಧಿನಗರ: ಗುಂಡೂರಾವ್ ಮೈದಾನ, ಸಿರೂರ್ ಪಾರ್ಕ್ ರಸ್ತೆ, ಮಲ್ಲೇಶ್ವರಂ.
6. ಚಿಕ್ಕಪೇಟೆ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, 1ನೇ ಕ್ರಾಸ್, ಮಾಗಡಿ ಮುಖ್ಯ ರಸ್ತೆ, ಆರೋಗ್ಯ ಸೌಧ ಸಮೀಪ.
7. ಕೆಂಪೇಗೌಡ ನಗರ: ನ್ಯಾಷನಲ್ ಹೈ ಸ್ಕೂಲ್, ಕೆ.ಆರ್ ರಸ್ತೆ, ಬಸವನಗುಡಿ.
8. ಹೊಂಬೇಗೌಡನಗರ: ರಾಣಿ ಸರಳಾ ದೇವಿ ವಿದ್ಯಾ ಸಂಸ್ಥೆ, ನಂ.281, 7ನೇ ಕ್ರಾಸ್ ರಸ್ತೆ, 1ನೇ ಬ್ಲಾಕ್, ಜಯನಗರ.
9. ಶಿವಾಜಿನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಡಿಸ್ಪೆನ್ಸರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಹಿಂಭಾಗ.
10. ವಸಂತನಗರ: ಸರ್ದಾರ್ ಪಟೇಲ್ ಭವನ, ನಂ.16, ತಿಮ್ಮಯ್ಯ ರಸ್ತೆ, ಕ್ವೀನ್ಸ್ ರಸ್ತೆ.
11. ಚಾಮರಾಜಪೇಟೆ: ಪಾಲಿಕೆ ಪಿಯು ಕಾಲೇಜು, 2ನೇ ಮುಖ್ಯ ರಸ್ತೆ, 6ನೇ ಕ್ರಾಸ್.
12. ಜೆ.ಜೆ.ಆರ್ ನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಪಾದರಾಯನಪುರ.
3-ಬೆಂಗಳೂರು ಪಶ್ಚಿಮ ನಗರ ಪಾಲಿಕೆ
1. ಮಲ್ಲೇಶ್ವರಂ ಮತ್ತು ಮತ್ತಿಕೆರೆ: ಮಲ್ಲೇಶ್ವರಂ ವಿಭಾಗ ಕಂದಾಯಾಧಿಕಾರಿಗಳ ಕಚೇರಿ ಸಭಾಂಗಣ, ಪಾಲಿಕೆ ಕಟ್ಟಡ, 5ನೇ ಮುಖ್ಯ ರಸ್ತೆ, 5ನೇ ಕ್ರಾಸ್ ರಸ್ತೆ, ಎಂ.ಕೆ.ಕೆ ರಸ್ತೆ.
2. ರಾಜಾಜಿನಗರ ಮತ್ತು ಶ್ರೀರಾಮಮಂದಿರ: ರಾಜಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 1ನೇ ಮಹಡಿ, ಸರ್ ಎಂ. ವಿಶ್ವೇಶ್ವರಯ್ಯ ಸಂಕೀರ್ಣ, 2ನೇ ಬ್ಲಾಕ್.
3. ಬಸವನಗುಡಿ ಮತ್ತು ಗಿರಿನಗರ: ಬಸವನಗುಡಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, #19, ನೆಲ ಮಹಡಿ, ತ್ಯಾಗರಾಜನಗರ, ಚೆನ್ನಮ್ಮನಕೆರೆ ಅಚ್ಚುಕಟ್ಟು (ಸಿಟಿ ಬೆಡ್ ಪ್ರದೇಶ).
4. ಗೋವಿಂದರಾಜನಗರ ಮತ್ತು ಚಂದ್ರ ಲೇಔಟ್: ಜ್ಞಾನಸೌಧ, 3ನೇ ಮುಖ್ಯರಸ್ತೆ, ಕಲ್ಯಾಣನಗರ, 8ನೇ ಕ್ರಾಸ್, 1ನೇ ಹಂತ, 2ನೇ ಬ್ಲಾಕ್, ನಾಗರಭಾವಿ, ಮೂಡಲಪಾಳ್ಯ.
5. ವಿಜಯನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ: ಪಾಲಿಕೆ ವಾರ್ಡ್ ಕಚೇರಿ, ಹಂಪಿನಗರ, ಶಾಸಕರ ಕಚೇರಿ, ಸಂಕಷ್ಟಹರ ಗಣಪತಿ ದೇವಸ್ಥಾನ ಸಮೀಪ, ಹಂಪಿನಗರ, ಆರ್‌ಪಿಸಿ ಲೇಔಟ್.
6. ಪದ್ಮನಾಭನಗರ ಮತ್ತು ಬನಶಂಕರಿ: ಪದ್ಮನಾಭನಗರ ಶಾಸಕರ ಕಚೇರಿ, ಸಂಖ್ಯೆ 3, 9ನೇ ಮುಖ್ಯರಸ್ತೆ, ವಿಹಾರ ಕೇಂದ್ರ ಸಮೀಪ, ಸಿದ್ದಣ್ಣ ಲೇಔಟ್, ಬನಶಂಕರಿ 2ನೇ ಹಂತ.
7. ಆರ್.ಆರ್.ನಗರ, ಲಗ್ಗೆರೆ ಮತ್ತು ಲಕ್ಷ್ಮೀದೇವಿನಗರ: ಗಂಗಮ್ಮ ತಿಮ್ಮಯ್ಯ ಶಿಕ್ಷಣ ಸಂಸ್ಥೆ, ಸುಂಕದಕಟ್ಟೆ, 10/15, ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಪೋಸ್ಟ್.
8. ಕೆಂಗೇರಿ ಮತ್ತು ಹೇರೋಹಳ್ಳಿ: ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್, ಕೊಮ್ಮಘಟ್ಟ ರಸ್ತೆ, 18, 3ನೇ ಮುಖ್ಯರಸ್ತೆ, ಅಂಚೆ ಕಚೇರಿ ಹಿಂಭಾಗ, ಕೆಂಗೇರಿ ಸ್ಯಾಟಲೈಟ್ ಟೌನ್.
9. ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಹೆಗ್ಗನಹಳ್ಳಿ: ಹೆಗ್ಗನಹಳ್ಳಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 4ನೇ ಕ್ರಾಸ್, ಎಚ್‌ಎಂಟಿ ಲೇಔಟ್, ಓಂ ಟಿಂಬರ್ಸ್ ರಸ್ತೆ, ನೀರಿನ ಟ್ಯಾಂಕ್ ಸಮೀಪ, ನಾಗಸಂದ್ರ ಪೋಸ್ಟ್.
10. ಮಹಾಲಕ್ಷ್ಮೀ ಲೇಔಟ್ ಮತ್ತು ನಾಗಪುರ: ಮಹಾಲಕ್ಷ್ಮೀಪುರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಪಾಲಿಕೆ ಸಂಕೀರ್ಣ, ಸಂಖ್ಯೆ 1221, 12ನೇ ಮುಖ್ಯರಸ್ತೆ, 11ನೇ ಕ್ರಾಸ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, 2ನೇ ಹಂತ, ನಾಗಪುರ.
4-ಬೆಂಗಳೂರು ದಕ್ಷಿಣ ನಗರ ಪಾಲಿಕೆ
1. ಅಂಜನಾಪುರ: ಬುದ್ಧ ಭವನ, ಜೆಪಿ ನಗರ 8ನೇ ಹಂತ, ರಾಘವ ನಗರ, ಐಎಂಜಿ ಅಪಾರ್ಟ್ಮೆಂಟ್ಸ್ ಸಮೀಪ.
2. ಬೇಗೂರು: ವಿದ್ಯಾ ವಿಕಾಸ್ ಸರ್ಕಾರಿ ಪ್ರೌಢಶಾಲೆ, ವಿಶ್ವಪ್ರಿಯಾ ನಗರ, ಬೇಗೂರು.
3. ಜಯನಗರ: ಬಹುಉದ್ದೇಶ ಕಾರ್ಪೊರೇಷನ್ ಕಟ್ಟಡ, 2ನೇ ಕ್ರಾಸ್ ರಸ್ತೆ, ಸಿಎಚ್‌ಸಿಎಸ್ ಲೇಔಟ್, ಎಲ್‌ಐಸಿ ಕಾಲೋನಿ, ಜಯನಗರ 4ನೇ ಬ್ಲಾಕ್, ಜಯನಗರ.
4. ಜೆಪಿ ನಗರ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, 21ನೇ ಮುಖ್ಯರಸ್ತೆ, ಮಾರೆನಹಳ್ಳಿ, ರೇಣುಕಾ ಪ್ರಸನ್ನ ಥಿಯೇಟರ್ ಎದುರು, 2ನೇ ಹಂತ, ಜೆಪಿ ನಗರ.
5. ಉತ್ತರಹಳ್ಳಿ: ಕರ್ನಾಟಕ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ ಬಸ್ ನಿಲ್ದಾಣದ ಹಿಂಭಾಗ, ಉತ್ತರಹಳ್ಳಿ.
6. ಯಲಚೇನಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚಘಟ್ಟ, 14ನೇ ಮುಖ್ಯರಸ್ತೆ, ಆರ್‌ಬಿಐ ಲೇಔಟ್, ಜೆಪಿ ನಗರ 7ನೇ ಹಂತ.
7. ಪದ್ಮನಾಭನಗರ: ಎಆರ್‌ಒ ಕಚೇರಿ, ಸಿಜೆ ವೆಂಕಟದಾಸ್ ರಸ್ತೆ, 15ಂ ಬಸ್ ನಿಲ್ದಾಣದ ಸಮೀಪ, ಲಕ್ಷ್ಮೀಕಾಂತ ಪಾರ್ಕ್ ಎದುರು.
8. ಬೊಮ್ಮನಹಳ್ಳಿ: ಶ್ರೀ ಸದ್ಗುರು ಸಾಯಿಬಾಬಾ ಕನ್ನಡ ಪ್ರಾಥಮಿಕ ಶಾಲೆ, ರೂಪೇನ ಅಗ್ರಹಾರ, ಪೊಲೀಸ್ ಠಾಣೆ ಸಮೀಪ.
9. ಅರಕೆರೆ: ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪುಟ್ಟೇನಹಳ್ಳಿ, ಜಂಬೂಸವಾರಿ ದಿನ್ನೆ ಮುಖ್ಯರಸ್ತೆ.
10. ಎಚ್‌ಎಸ್‌ಆರ್ ಲೇಔಟ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೆಕ್ಟರ್-1.
11. ಕೋರಮಂಗಲ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸಿಇಆರ್‌ಪಿ ಪೊಲೀಸ್ ಕ್ವಾರ್ಟರ್ಸ್, ಅಡುಗೋಡಿ.
12. ಬಿಟಿಎಂ ಲೇಔಟ್: ಶ್ರೀ ಸಾಯಿ ಇಂಗ್ಲಿಷ್ ಶಾಲೆ, 2ನೇ ಮುಖ್ಯರಸ್ತೆ, ನ್ಯೂ ಮೈಕೊ ಲೇಔಟ್ ರಸ್ತೆ, ಅಡುಗೋಡಿ ಸಿಗ್ನಲ್ ಸಮೀಪ.
5-ಬೆಂಗಳೂರು ಉತ್ತರ ನಗರ ಪಾಲಿಕೆ
1. ಕೊಡಿಗೆಹಳ್ಳಿ: ಸರ್ಕಾರಿ ಪ್ರಾಥಮಿಕ ಶಾಲೆ, ಅಮೃತಹಳ್ಳಿ ಮುಖ್ಯರಸ್ತೆ, ಬ್ಯಾಟರಾಯನಪುರ.
2. ವಿದ್ಯಾರಣ್ಯಪುರ: ಬಿಬಿಎಂಪಿ ಸಮುದಾಯಭವನ ಕಟ್ಟಡ, ಎಚ್‌ಎಂಟಿ ಲೇಔಟ್, 1ನೇ ಬ್ಲಾಕ್, 2ನೇ ಕ್ರಾಸ್, ಎನ್‌ಟಿಐ ಮೈದಾನದ ಎದುರು, ಹಾಪ್‌ಕಾಮ್ಸ್ ರಸ್ತೆ, ವಿದ್ಯಾರಣ್ಯಪುರ.
3. ಪುಲಿಕೇಶಿನಗರ: ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ, ಕ್ಲೀವ್‌ಲ್ಯಾಂಡ್ ಟೌನ್, ಫ್ರೆಜರ್ ಟೌನ್.
4. ಕೆ.ಜಿ. ಹಳ್ಳಿ: ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ, ಕ್ಲೀವ್‌ಲ್ಯಾಂಡ್ ಟೌನ್, ಫ್ರೆಜರ್ ಟೌನ್.
5. ಮಾರುತಿಸೇವಾನಗರ: ಸೀತಾರಾಮ ಕಲ್ಯಾಣ ಮಂಟಪ, ಬಾಣಸವಾಡಿ ಮುಖ್ಯರಸ್ತೆ.
6. ಎಚ್.ಬಿ.ಆರ್. ಲೇಔಟ್: ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಶಾಲೆ, ಎಚ್‌ಬಿಆರ್ ಲೇಔಟ್, 7ನೇ ಮುಖ್ಯರಸ್ತೆ.
7. ದಾಸರಹಳ್ಳಿ: ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎಕ್ಸ್ಟೆನ್ಷನ್, ಹೆಸರಘಟ್ಟ ರಸ್ತೆ.
8. ಯಶವಂತಪುರ: ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎಕ್ಸ್ಟೆನ್ಷನ್, ಹೆಸರಘಟ್ಟ ರಸ್ತೆ.
9. ಶೆಟ್ಟಿಹಳ್ಳಿ : ಆರ್‌ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಚಿಕ್ಕಬಾಣಾವರ ರೈಲು ನಿಲ್ದಾಣ ರಸ್ತೆ, ಬ್ಯಾಂಕ್ ಆಫ್ ಬರೋಡಾ ಎಟಿಎಂ ಸಮೀಪ, ಮೇಡರಹಳ್ಳಿ.
10. ಹೆಬ್ಬಾಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬಾಳ.
11. ಜೆ.ಸಿ.ನಗರ: ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಆರ್.ಟಿ.ನಗರ.
12. ಯಲಹಂಕ ನ್ಯೂ ಟೌನ್ / ಯಲಹಂಕ ಓಲ್ಡ್ ಟೌನ್ ಮಿನಿ ವಿಧಾನಸೌಧ, 3ನೇ ಮಹಡಿ, ಎನ್‌ಇಎಸ್ ಸಮೀಪ, ಸುಗ್ಗಪ್ಪ ಲೇಔಟ್, ಯಲಹಂಕ, ಬೆಂಗಳೂರು - 560064














Click it and Unblock the Notifications