ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖೇಣಿ, ಅಬ್ರಾಹಂ ನಡುವೆ ಬಿಗ್ ಫೈಟ್

|
Google Oneindia Kannada News

T.J.Abraham
ಬೀದರ್, ಏ. 17 : ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ರೈತರ ಜಮೀನು ಕಬಳಿಸಿದ್ದಾರೆ ಎಂದು ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ, ಚುನಾವಣೆಯಲ್ಲೂ ಖೇಣಿ ಬೆನ್ನಿಗೆ ಬಿದಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಖೇಣಿ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಇದುವರೆಗೂ ನ್ಯಾಯಾಲಯ ಮತ್ತು ಮಾಧ್ಯಗಳಲ್ಲಿ ನಡೆಯುತ್ತಿದ್ದ ಖೇಣಿ ಮತ್ತು ಅಬ್ರಾಹಂ ನಡುವಿನ ಕಾಳಗ ಈಗ ಚುನಾವಣೆಯಲ್ಲೂ ಮುಂದುವರೆದಿದೆ. ಬೀದರ್ ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಟಿ.ಜೆ.ಅಬ್ರಾಹಂ ನಾಮಪತ್ರ ಸಲ್ಲಿಸಲಿದ್ದಾರೆ.

ಮೂಲತಃ ಬೀದರ್ ನವರಾದ ಕರ್ನಾಟಕ ಮಕ್ಕಳ ಪಕ್ಷದ ಅಧ್ಯಕ್ಷ ಮತ್ತು ಉದ್ಯಮಿ ಅಶೋಕ್ ಖೇಣಿ ಬೀದರ್ ದಕ್ಷಿಣ ಕ್ಷೇತ್ರದಿಂದ ಚುನಾಣೆಗೆ ಸ್ಪರ್ಧಿಸುವುದಾದಿ ಘೋಷಿಸಿದ್ದರು. ಖೇಣಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಖೇಣಿ ವಿರುದ್ದ ಕಾನೂನು ಸಮರ ಸಾರಿರುವ ಟಿ.ಜೆ. ಅಬ್ರಾಹಂ ಸಹ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಇಬ್ಬರ ನಡುವಿನ ಕಾದಾಟದಿಂದಾಗಿ ಬೀದರ್ ದಕ್ಷಿಣ ಕ್ಷೇತ್ರ ಸ್ಟಾರ್ ಕ್ಷೇತ್ರವಾಗಿ ಬದಲಾವಣೆಯಾಗಲಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸಿರುವ ಖೇಣಿ, ನಡೆಸಿದ್ದಾರೆ ಎಂಬ ಆರೋಪಿಸುತ್ತಿರುವ ಹಗರಣಗಳನ್ನೇ ಜನರಿಗೆ ತಲುಪಿಸಿ ಮತ ಕೇಳಲು ಅಬ್ರಾಹಂ ನಿರ್ಧರಿಸಿದ್ದಾರೆ.

ವಿಭಿನ್ನ ಪ್ರಚಾರ : ಟಿ.ಜೆ.ಅಬ್ರಾಹಂ ವಿಭಿನ್ನ ರೀತಿಯ ಪ್ರಚಾರ ಕೈಗೊಳ್ಳಲಿದ್ದಾರೆ. ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದು ಅಭ್ಯರ್ಥಿಗಳು ಕೇಳುವುದು ಸಹಜ. ಆದರೆ ಅಬ್ರಾಹಂ ನನಗೆ ಮತ ನೀಡದಿದ್ದರೂ ಓಕೆ. ಖೇಣಿ ಅವರಂತಹ ಭ್ರಷ್ಟರಿಗೆ ಮತ ನೀಡಬೇಡಿ ಎಂದು ಜನರಿಗೆ ಮನವಿ ಮಾಡಲಿದ್ದಾರೆ.

ಅಶೋಕ್ ಖೇಣಿ ಅಕ್ರಮವಾಗಿ ರೈತರ ಜಮೀನನ್ನು ಕಡಿಮೆ ಬೆಲೆಗೆ ಕೊಂಡುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೈಸ್ ಯೋಜನೆಯಲ್ಲಿ ಅವ್ಯಹಾರ ನಡೆದಿದೆ. ಎಂದು ಅಹ್ರಾಹಂ ಲೋಕಾಯುಕ್ತದಿಂದ ಹಿಡಿದು ಸುಪ್ರೀಂ ಕೋರ್ಟ್ ವರೆಗೆ ಖೇಣಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಉಭಯರ ನಡುವಿನ ಕಾನೂನು ಸಮರ ನ್ಯಾಯಾಲದಲ್ಲಿ ಅಂತ್ಯ ಕಾಣುವುದು ವಿಳಂಬವಾಗಬಹುದು. ಆದರೆ, ಜನತಾ ನ್ಯಾಯಾಲಯದಲ್ಲಿ ತೀರ್ಪು ತಕ್ಷಣ ಲಭಿಸಲಿದೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಯಾರಿಗೆ ನ್ಯಾಯ ದೊರಕುತ್ತದೆ ಎಂಬುದು, ಮೇ 8ರಂದು ಬಹಿರಂಗಗೊಳ್ಳಲಿದೆ.

ಕ್ಷೇತ್ರದಲ್ಲಿ ಎದುರಾಳಿಗಳಾರು

ಜೆಡಿಎಸ್ - ಬಂಡೆಪ್ಪ ಖಾಶೆಂಪುರ
ಕೆಜೆಪಿ - ಡಾ.ಶೈಲೇಂದ್ರ ಬೆಲ್ದಾಳೆ
ಕಾಂಗ್ರೆಸ್ - ಮೀನಾಕ್ಷಿ ಸಂಗ್ರಾಮ
ಬಿಜೆಪಿ - ಬಸವರಾಜ್ ಪಾಟೀಲ್ ಅಟ್ಟೂರು
ಬಿಎಸ್ ಪಿ - ಅಬ್ದುಲ್ ಮನ್ನಾನ್

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Social activist T.J.Abraham will contest against Ashok Kheny in Bidar South constituency. Kheny contest from Karnataka Makkala Paksha and Abraham contest as independent candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X