E Khata: 6ನೇ 'ಭೂ ಗ್ಯಾರಂಟಿ' ಇಂದಿನಿಂದ ಜಾರಿ: ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನಕ್ಕೆ ಚಾಲನೆ: ಡಿಕೆ ಶಿವಕುಮಾರ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ನಗರ ಪಾಲಿಕೆಗಳ ಆಸ್ತಿ ಮಾಲೀಕರಿಗೆ ಭೂ ದಾಖಲೆಗಳನ್ನು ಸುರಕ್ಷತೆ, ವಂಚನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಉಪ ಮುಖ್ಯ ಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ರವರು 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಹಾಗೂ ಡಿಜಿಟಲೀಕರಣ ಮಾಡಲಾಗಿದೆ. ಅವುಗಳಿಗೆ ಇ-ಖಾತೆಗಳನ್ನು ಸಿದ್ಧಪಡಿಸಿ, ವಿತರಿಸಲಾಗುತ್ತಿದೆ. ಅದರ ಬೆನ್ನಲ್ಲೆ 6ನೇ ಗ್ಯಾರಂಟಿ 'ಭೂ ಗ್ಯಾರಂಟಿ' ಯೋಜನೆ ಘೋಷಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಬೆಂಗಳೂರು ನಗರ ಭೂಮಾಲೀಕರ ಹಿತಕ್ಕಾಗಿ 6ನೇ ಗ್ಯಾರಂಟಿ 'ಭೂ ಗ್ಯಾರಂಟಿ'ಗೆ ಇಂದು ಜಾರಿಗೊಳಿಸಲಿದೆ. ಬಿ ಖಾತಾ ದಿಂದ ಎ ಖಾತಾ ಪರಿವರ್ತನೆಗಾಗಿ ಮಾರ್ಗಸೂಚಿ ಬೆಲೆ ಶೇ. 5 ರ ಬದಲಿಗೆ ಶೇ. 2 ರಷ್ಟು ಮಾತ್ರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯು ಕೇವಲ 100 ದಿನಗಳು ಮಾತ್ರ ಇರಲಿದೆ. ಇದರ ಪ್ರಯೋಜನೆ ಪಡೆಯುವಂತೆ ಅವರು ತಿಳಿಸಿದರು.

6th Bhoo Guarantee

ಪ್ರತಿ ವಾರ 200 ಆಸ್ತಿ ಮಾಲೀಕರಿಗೆ ಖಾತಾ ಸೇವೆ

ಪ್ರತಿ ಕೇಂದ್ರದಲ್ಲಿಯೂ ಸುಮಾರು 100 ರಿಂದ 200 ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ. 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ, ಅಂತಹವರಿಗೆ ಟೋಕನ್ ನೀಡಿ ಮುಂದಿನ ವಾರ ಅರ್ಜಿ ಸ್ವೀಕರಿಸಿ ಇತ್ಯರ್ಥಪಡಿಸಲಾಗುವುದು. ಪ್ರತಿ ಶನಿವಾರ ಸುಮಾರು 5000 ನಾಗರಿಕರಿಂದ ಸೇವೆ ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.

BWSSB: ಬೆಂಗಳೂರು ವಾಹನ ಸವಾರರಿಗೆ ಗುಡ್‌ನ್ಯೂಸ್: ರೊಬೋಟಿಕ್ ತಂತ್ರಜ್ಞಾನದ ಕೊಡುಗೆ
BWSSB: ಬೆಂಗಳೂರು ವಾಹನ ಸವಾರರಿಗೆ ಗುಡ್‌ನ್ಯೂಸ್: ರೊಬೋಟಿಕ್ ತಂತ್ರಜ್ಞಾನದ ಕೊಡುಗೆ

ಖಾತಾ ಅಭಿಯಾನ ಕೇಂದ್ರದಲ್ಲಿನ ವ್ಯವಸ್ಥೆಗಳು

* ನಾಗರಿಕ ಸಹಾಯ ಕೇಂದ್ರಗಳ(ಹೆಲ್ಪ್ ಡೆಸ್ಕ್ಸ್) ವ್ಯವಸ್ಥೆ

ಆಸನ ಹಾಗೂ ಸರತಿ ಸಾಲು ವ್ಯವಸ್ಥೆ

* ಪಾವತಿ ನೆರವು

* ನುರಿತ ಸಿಬ್ಬಂದಿ ವ್ಯವಸ್ಥೆ

* ಸೂಚನಾ ಹಾಗೂ ಮಾಹಿತಿಯುಳ್ಳ ನಾಮಫಲಕಗಳು

* ಪ್ರತ್ಯೇಖ ಕೌಂಟರ್‌ಗಳು

* ಇಂಟರ್‍‌ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್‌ಗಳು, ಪ್ರಿಂಟರ್, ಸ್ಕ್ಯಾನರ್‌ಗಳ ವ್ಯವಸ್ಥೆ ಇರಲಿವೆ.

ನಾಗರಿಕರಿಗೆ ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳೇನು?

* ಇ-ಖಾತಾ

* ಹೊಸ ಇ-ಖಾತಾ

* ಬಿ ಖಾತಾ ದಿಂದ ಎ ಖಾತಾ ಪರಿವರ್ತನೆ

* ತುಂಬಾ ದಿನಗಳಿಂದ ಬಾಕಿ ಇರುವ ನಾಗರಿಕ ಅರ್ಜಿಗಳು, ತಿದ್ದುಪಡಿಗಳು ಹಾಗೂ ಅಹವಾಲುಗಳು, ಹೊಸ ಅರ್ಜಿದಾರರು ಹಾಗೂ ವಾಕ್-ಇನ್ ನಾಗರಿಕರಿಗೆ ಸಂಪೂರ್ಣ ಸೌಲಭ್ಯ ನೀಡಲಾಗುವುದು.

* ಅಂತಿಮ ಇ-ಖಾತಾದಾರರಿಗೆ ನಿಮ್ಮ ಇ-ಖಾತಾ ಸಿದ್ದವಿದೆ, ಕೇಂದ್ರಕ್ಕೆ ಭೇಟಿ ನೀಡಿ ಮುದ್ರಿತ ಪ್ರತಿಯನ್ನು ಸಂಗ್ರಹಿಸಿ ಎಂದು ದೂರವಾಣಿ ಹಾಗೂ ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡಲಾಗಿರುತ್ತದೆ.

* ಮೊದಲ ಬಾರಿ ಅರ್ಜಿ ಸಲ್ಲಿಸುವವರಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕೆಂದ ತರಬೇತಿ ಕೂಡಾ ನೀಡಲಾಗುವುದು.

* ಈ ಕಾರ್ಯಕ್ರಮದ ಮೂಲಕ ಇ-ಖಾತಾ ಸೇವೆಗಳ ಕುರಿತ ನಾಗರಿಕರ ಅಹವಾಲುಗಳಿಗೆ ತಕ್ಷಣದ ಪರಿಹಾರ ಹಾಗೂ ಸ್ಥಳದಲ್ಲೇ ಸೇವಾ ಸೌಲಭ್ಯ ನೀಡಲಾಗುವುದು.

ಇಂದಿನಿಂದ ಯಶವಂತಪುರ-ವಿಜಯಪುರ ವಿಶೇಷ ರೈಲು, ಹುಬ್ಬಳ್ಳಿಗೆ ಹೋಗಲ್ಲ! ವಾರಾಂತ್ಯದ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಇಂದಿನಿಂದ ಯಶವಂತಪುರ-ವಿಜಯಪುರ ವಿಶೇಷ ರೈಲು, ಹುಬ್ಬಳ್ಳಿಗೆ ಹೋಗಲ್ಲ! ವಾರಾಂತ್ಯದ ಪ್ರಯಾಣಿಕರಿಗೆ ಗುಡ್‌ನ್ಯೂಸ್

* ಜಿಬಿಎ ವ್ಯಾಪ್ತಿಯ 5 ಬೆಂಗಳೂರು ನಗರ ಪಾಲಿಕೆಗಳಲ್ಲಿ ಬಾಕಿ ಇರುವ ಅರ್ಜಿಗಳು ಅಥವಾ ಕುಂದು ಕೊರತೆಗಳು ಹೊಂದಿರುವ ಎಲ್ಲಾ ನಾಗರಿಕರನ್ನು ಆಹ್ವಾನಿಸಲು ಎಸ್‌ಎಂಎಸ್, ಫೋನ್ ಕರೆಗಳು ಮತ್ತು ಸಾರ್ವಜನಿಕ ಸಂವಹನದ ಮೂಲಕ ವ್ಯಾಪಕ ನಾಗರಿಕ ಸಂಪರ್ಕ ಕೈಗೊಳ್ಳಲಾಗಿದೆ.

ಸಹಾಯಕ ಕಂದಾಯ ಅಧಿಕಾರಿಗಳು(AROs), ಕಂದಾಯ ನಿರೀಕ್ಷಕರು(RIs), ತಾಂತ್ರಿಕ ತಂಡಗಳು ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಮತ್ತು ಸ್ಥಳದಲ್ಲೇ ವಿಲೇವಾರಿ ಮತ್ತು ಪರಿಹಾರ ಒದಗಿಸಲಿದ್ದಾರೆ.

ಅಭಿಯಾನ: ಸಿಬ್ಬಂದಿಗೆ ಹೆಚ್ಚುವರಿ ರಜೆ

ಭೂ ಗ್ಯಾರಂಟಿ ಯೋಜನೆ ಅನುಷ್ಠಾನದ ಭಾಗವಾಗಿ ಪ್ರತಿ ಶನಿವಾರವೂ ನನ್ನ ಖಾತಾ ನನ್ನ ಹಕ್ಕು ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ 2ನೇ ಮತ್ತು 4ನೇ ಶನಿವಾರದ ರಜಾದಿನಗಳಂದು ಸದರಿ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುವ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ಬದಲಿಯಾಗಿ ಕೆಲಸದ ದಿನಗಳಂದು ಪರ್ಯಾಯವಾಗಿ ಒಂದು ದಿನ ಹೆಚ್ಚುವರಿ ರಜೆಯನ್ನು ಪಡೆಯಬಹುದಾಗಿರುತ್ತದೆ.

ನಾಗರಿಕರು ಖಾತಾ ಅಭಿಯಾನದ ಸ್ಥಳಕ್ಕೆ ಭೇಟಿ ನೀಡುವ ವೇಳೆ ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಗುರುತಿನ ಪುರಾವೆ ಮತ್ತು ಅರ್ಜಿ ವಿವರಗಳೊಂದಿಗೆ ಹಾಜರಾಗಲು ವಿನಂತಿಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲ ಎಲ್ಲ ಐದು ಪಾಲಿಕೆಗಳ ವ್ಯಾಪ್ತಿಯಲ್ಲೂ ಇ-ಖಾತಾ ಸೇವೆ ಸಿಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+