ಇಂದಿನಿಂದ 3 ರಾಶಿಯವರಿಗೆ ರಾಜಯೋಗ: ಹಣಕಾಸಿನ ಸಮಸ್ಯೆ ನಿವಾರಣೆ, ವೃತ್ತಿಯಲ್ಲಿ ಪ್ರಗತಿ, ಹೊಸ ಉದ್ಯೋಗ ಭಾಗ್ಯ

ಇಂದು ಈ ವರ್ಷದ ಶನಿ ಜಯಂತಿ. ಶನಿ ಜಯಂತಿಯನ್ನು ಜ್ಯೇಷ್ಠ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ಶನಿ ಜಯಂತಿಯು ಶನಿ ದೇವರಿಗೆ ಅರ್ಪಿತವಾದ ಶನಿವಾರವೇ ಬಂದಿರುವುದು ಗಮನಾರ್ಹ. ಶನಿಯು ಪ್ರತಿ ೨೪ ಗಂಟೆಗಳಿಗೊಮ್ಮೆ ತನ್ನ ಪಥವನ್ನು ಬದಲಾಯಿಸುತ್ತಿರುತ್ತಾನೆ. ಇದಲ್ಲದೆ, ನಾಳೆ ಮೇ 17, 2026 ರಂದು, ಶನಿಯು ರೇವತಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಶನಿಯ ಪಥ ಬದಲಾವಣೆಯಿಂದ ಶನಿ ಜಯಂತಿ ಸಂದರ್ಭದಲ್ಲಿ ಅಪರೂಪದ ಯೋಗ ರೂಪುಗೊಳ್ಳುತ್ತಿದೆ.

ಇಂದು, ಚಂದ್ರನು ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಶುಕ್ರನ ರಾಶಿಯಾದ ವೃಷಭ ರಾಶಿಗೆ ಸಂಕ್ರಮಿಸುತ್ತಾನೆ. ಅಲ್ಲಿ ಈಗಾಗಲೇ ಇರುವ ಸೂರ್ಯ ಮತ್ತು ಬುಧ ಸೇರಿ ಬುಧಾದಿತ್ಯ ರಾಜಯೋಗವನ್ನು ರೂಪಿಸುತ್ತಿದ್ದಾರೆ. ಹೀಗಾಗಿ, ಶನಿ ಜಯಂತಿಯಂದು ರೂಪುಗೊಳ್ಳುವ ಗ್ರಹಗಳ ಸಂಯೋಗವು ಬಹಳ ವಿಶೇಷವಾಗಿದೆ.ಕೆಲವು ರಾಶಿಯವರಿಗೆ ಗ್ರಹಗಳ ಈ ಸಂಚಾರವು ಶುಭಫಲಗಳನ್ನು ನೀಡಲಿದೆ.

Shani Jayanti 2026

ಶನಿ ಜಯಂತಿಯ ಅದೃಷ್ಟ ರಾಶಿಗಳು:

ವೃಷಭ ರಾಶಿ: ವೃಷಭ ರಾಶಿಯವರಿಗೆ, ವಿಶೇಷವಾಗಿ ವೃತ್ತಿ ಹೊಂದಿರುವವರಿಗೆ ಇದು ಒಳ್ಳೆಯ ದಿನ. ಬಡ್ತಿಯ ಮಾಹಿತಿ ಬರುವ ಸಾಧ್ಯತೆ ಇದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು. ಸಂಬಂಧಗಳು ಉತ್ತಮಗೊಳ್ಳುವ ಸಾಧ್ಯತೆ ಇದೆ. ವಿವಾಹಿತ ವ್ಯಕ್ತಿಗಳು ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳುತ್ತಾರೆ. ಹಳೆಯ ಸಮಸ್ಯೆಗಳು ಬಗೆಹರಿಯುತ್ತವೆ. ವೃಷಭ ರಾಶಿಯಲ್ಲಿ ರೂಪುಗೊಳ್ಳುವ ರಾಜಯೋಗವು ಆರ್ಥಿಕ ಲಾಭವನ್ನು ತರುತ್ತದೆ. ಆರೋಗ್ಯ ಸಮಸ್ಯೆಗಳೂ ಬಗೆಹರಿಯುವುದು.

ಶನಿ ಪೂಜೆ ಸಮಯದಲ್ಲಿ ಬಹುತೇಕರು ಮಾಡುವ ತಪ್ಪಿದು!ನಾಳೆ ಶನಿ ಜಯಂತಿ ಪೂಜೆ ಹೀಗಿದ್ದರೆ ಛಾಯಾಪುತ್ರನ ವಕ್ರ ದೃಷ್ಟಿಯಿಂದ ಪಾರಾಗಬಹುದು!
ಶನಿ ಪೂಜೆ ಸಮಯದಲ್ಲಿ ಬಹುತೇಕರು ಮಾಡುವ ತಪ್ಪಿದು!ನಾಳೆ ಶನಿ ಜಯಂತಿ ಪೂಜೆ ಹೀಗಿದ್ದರೆ ಛಾಯಾಪುತ್ರನ ವಕ್ರ ದೃಷ್ಟಿಯಿಂದ ಪಾರಾಗಬಹುದು!

ತುಲಾ ರಾಶಿ: ತುಲಾ ರಾಶಿಯವರಿಗೆ ಇದು ಶುಭ ಸಮಯ. ವೃತ್ತಿ ಪ್ರಗತಿಯ ಬಲವಾದ ಸಾಧ್ಯತೆಗಳಿವೆ. ನಿಮ್ಮ ಸ್ಥಾನಮಾನ ಹೆಚ್ಚಾಗುವುದು. ನಿಮ್ಮ ಪ್ರಭಾವವೂ ಹೆಚ್ಚಾಗುವುದು. ಸಾಲ ನೀಡಿ ಹೊರಗೆ ಉಳಿದಿರುವ ಹಣ ಅಥವಾ ಕೈ ಸೇರಲು ಬಾಕಿ ಇರುವ ಮೊತ್ತ ಮರಳಿ ಬರುವುದು. ಆದರೆ ಕೆಲಸದ ಹೊರೆ ಕೂಡಾ ಹೆಚ್ಚಾಗುವುದು. ಇದು ನಿಮ್ಮ ಕುಟುಂಬಕ್ಕೆ ಸಮಯವನ್ನು ಮೀಸಲಿಡುವುದನ್ನು ತಡೆಯುತ್ತದೆ.

ಕುಂಭ ರಾಶಿ: ಕೆಲಸ ಮಾಡುವ ಜನರಿಗೆ ಸಮಯ ಉತ್ತಮವಾಗಿರುತ್ತದೆ. ನಿಮ್ಮ ಗುರಿ ಸಾಧಿಸುವ ಸಮಯ ಹತ್ತಿರವಾಗಿದೆ. ಹೊಸ ಉದ್ಯೋಗವನ್ನು ಪಡೆಯಬಹುದು. ಉದ್ಯಮಿಗಳಿಗೆ ಈ ಅವಧಿ ತುಂಬಾ ಅನುಕೂಲಕರವಾಗಿರುತ್ತದೆ. ಆದಾಯ ಹೆಚ್ಚಾಗುತ್ತದೆ. ಸಂಪರ್ಕ ಕಳೆದುಕೊಂಡಿರುವ ಸ್ನೇಹಿತರು ಅಥವಾ ಸಹೋದ್ಯೋಗಿಗಳ ಸಂಬಂಧಗಳು ಮತ್ತೆ ಸುಧಾರಿಸುವುದು. ವಿಶ್ವಾಸ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ.

ಈ ರಾಶಿಯವರು ಮಾತ್ರ ಬಹಳ ಎಚ್ಚರಿಕೆಯಿಂದ ಇರಬೇಕು:

ಕನ್ಯಾ ರಾಶಿ: ಕನ್ಯಾ ರಾಶಿಯವರು ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಅನಗತ್ಯ ಖರ್ಚು ನಿಮ್ಮ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಬಹುದು. ಮಾತಿನಿಂದಲೂ ಸಮಸ್ಯೆ ಉಂಟಾಗುವುದು. ತಪ್ಪು ಸಮಯದಲ್ಲಿ ತಪ್ಪು ಪದಗಳ ಬಹಳಕೆ ಮಾಡುವುದರಿಂದನ್ನು ಕಚೇರಿಯಲ್ಲಿ ನಿಮ್ಮ ವ್ಯಕ್ತಿತ್ವಕ್ಕೇ ಕುತ್ತು ಬರುವುದು. ಪ್ರಗತಿಗೆ ಅಡ್ಡಿಯಾಗಬಹುದು. ಆದ್ದರಿಂದ, ಮಾತನಾಡುವ ವೇಳೆ ಎಚ್ಚರಿಕೆಯಿಂದಿರಿ.

3 ರಾಶಿಯವರಿಗೆ ವರದಾನವಾಗಲಿದೆ ಶನಿ ಜಯಂತಿ : ಕಷ್ಟ ಕಳೆದು ಹೆಚ್ಚಾಗುವುದು ಸುಖ ಸಮೃದ್ಧಿ
3 ರಾಶಿಯವರಿಗೆ ವರದಾನವಾಗಲಿದೆ ಶನಿ ಜಯಂತಿ : ಕಷ್ಟ ಕಳೆದು ಹೆಚ್ಚಾಗುವುದು ಸುಖ ಸಮೃದ್ಧಿ

ವೃಶ್ಚಿಕ ರಾಶಿ: ಈ ಸಮಯದಲ್ಲಿ, ಯಾರ ಜೊತೆಗೂ ಮನಸ್ತಾಪ ಮಾಡಿಕೊಳ್ಳಬೇಡಿ. ಇಲ್ಲವಾದರೆ ತೊಂದರೆಯಲ್ಲಿ ಸಿಲುಕುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಇದರಿಂದಾಗಿ ಅನಗತ್ಯ ಒತ್ತಡ ಉಂಟಾಗಬಹುದು. ಕುಟುಂಬ ಸದಸ್ಯರ ಬೆಂಬಲದಿಂದ ಸಮಸ್ಯೆಗಳಿಗೆ ತಕ್ಕ ಮಟ್ಟಿನ ಪರಿಹಾರ ಸಿಗುವುದು.

ಶನಿ ಜಯಂತಿಯಂದು ಈ ಕ್ರಮ ಕೈಗೊಳ್ಳಿ:

ಮೇಷ, ಕುಂಭ ಮತ್ತು ಮೀನ ರಾಶಿಯವರು ಶನಿಯ ಸಾಡೇ ಸತಿಯ ಪ್ರಭಾವಕ್ಕೆ ಒಳಗಾಗಿದ್ದರೆ, ಸಿಂಹ ಮತ್ತು ವೃಶ್ಚಿಕ ರಾಶಿಯವರು ಧೈಯ್ಯಾದ ಪರಿಣಾಮ ಎದುರಿಸುತ್ತಿದ್ದಾರೆ. ಇದಲ್ಲದೆ, ಯಾರ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದಾರೋ ಅವರು ಶನಿ ಜಯಂತಿಯಂದು ಶನಿದೇವನಿಗೆ ಎಣ್ಣೆಯನ್ನು ಅರ್ಪಿಸಬೇಕು. ಅರಳಿ ಮರದ ಕೆಳಗೆ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಬಡವರಿಗೆ ಮತ್ತು ನಿರ್ಗತಿಕರಿಗೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+