ಮುಖ್ಯಮಂತ್ರಿ ಮೋದಿ ಕಚೇರಿ ಉದ್ಘಾಟನೆಯಾಯ್ತು
ಅಹಮದಾಬಾದ್, ಏ.15: ಇಂದು ವಿಜಯ ನಾಮ ಸಂವತ್ಸರದ ವಸಂತ ಮಾಸ. ಚೈತ್ರ ಶುಕ್ಲ ಪಕ್ಷ. ಪಂಚಮಿ. ರೋಹಿಣಿ ನಕ್ಷತ್ರ. ಇದು ನಿಜಕ್ಕೂ ತುಂಬಾ ಸುಮೂರ್ಹತವೇ? ಏಕೆಂದರೆ ಕರ್ನಾಟಕದಲ್ಲಿ ಇಂದು ಅತಿರಥ ಮಹಾರಥ ಎನಿಸಿಕೊಂಡ ಪ್ರಮುಖ ರಾಜಕಾರಣಿಗಳು ನಾಮುಂದು ತಾಮುಂದು ಎಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಆದರೆ ಇದೆಲ್ಲ ಮುಗಿದು ಮುಖ್ಯಮಂತ್ರಿ ಗಾದಿ ಮೇಲೆ ನಾಲ್ಕನೆಯ ಬಾರಿಗೆ ಪ್ರತಿಷ್ಠಾಪಿಸಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ತಮಗಾಗಿ ಭವ್ಯವಾದ ಕಚೇರಿಯೊಂದನ್ನು ನಿರ್ಮಿಸಿಕೊಂಡಿದ್ದು, ಇಂದು ಕಚೇರಿ ಪ್ರವೇಶ ಮಾಡಲಿದ್ದಾರೆ. ಇಂದು ಚೈತ್ರ ಮಾಸದ ನವರಾತ್ರಿಯ ಐದನೆಯ ದಿನವಾಗಿದ್ದು, ಅತ್ಯಂತ ಪ್ರಶಸ್ತವಾಗಿದೆ ಎಂಬುದು ದಿನ ವಿಶೇಷ.

ಅದಕ್ಕೂ ಮುನ್ನ, ಸಚಿವಾಲಯದ ಗ್ರೂಪ್ ಡಿ ನೌಕರ ಸಾವಜಿ ದಾಮೋರ್ ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿಯ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಅವಳಿ ಕಟ್ಟಡಗಳ ಈ ಕಚೇರಿಗೆ 'ಸ್ವರ್ಣಿಮ್ ಸಂಕುಲ್' ಎಂದು ಹೆಸರಿಡಲಾಗಿದೆ. 10,700 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಅವಳಿ ಸಚಿವಾಲಯಕ್ಕೆ 110 ಕೋಟಿ ರೂ. ವೆಚ್ಚವಾಗಿದೆ.
Swarnim Sankul-I ರಲ್ಲಿ ಮುಖ್ಯಮಂತ್ರಿ ಮತ್ತು ಇತರೆ ಮಂತ್ರಿಗಳ ಕೊಠಡಿಗಳು ಇರಲಿವೆ. ಸೆಕ್ರೆಟರಿಗಳು ಮತ್ತು ಆಡಳಿತ ಕಚೇರಿಗಳು ಇಲ್ಲಿ ನೆಲೆಗಾಣಲಿವೆ. ಮುಖ್ಯಮಂತ್ರಿ ಕಚೇರಿ ಮೂರು ಮತ್ತು ನಾಲ್ಕನೆಯ ಮಹಡಿಯಲ್ಲಿರುತ್ತವೆ.
ಇದು ನಮ್ಮ ವಿಧಾನಸೌಧದಂತೆ ಸುವಿಶಾಲವಾಗಿ, ಚಿತ್ರಾಕರ್ಷಕವಾಗಿದೆ ಎಂದು ತಿಳಿದುಬಂದಿದೆ. ನರೇಂದ್ರ ಮೋದಿ ಅವರ ಭದ್ರತೆಗೆ ಆದ್ಯ ಗಮನ ನೀಡಿ, ಈ ಸುಭದ್ರ ಕಚೇರಿಯನ್ನು ನಿರ್ಮಿಸಲಾಗಿದೆ. Swarnim Sankul-I ಇನ್ನೂ ನಿರ್ಮಾಣ ಹಂತದಲ್ಲಿದೆ.












Click it and Unblock the Notifications