ತಿಣು'ಕಾಡಿದ' ಕಾಂಗ್ರೆಸ್: ರೇವಣ್ಣ ರೆಬೆಲ್

ಬೆಂಗಳೂರು, ಏ.15: ತಿಣುಕಾಡಿ ತಿಣುಕಾಡಿ ಕೊನೆಗೂ ಕಾಂಗ್ರೆಸ್ ಪಕ್ಷ ಎರಡನೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಇನ್ನೂ 9 ಕ್ಷೇತ್ರಗಳನ್ನು ಉಳಿಸಿಕೊಂಡಿದೆ. ಕಾಂಗ್ರೆಸ್ಸಿನ ಇಂದಿನ ಪರಿಸ್ಥಿತಿ ಬೇರೆ ಪಕ್ಷಗಳಿಗೆ ವರವಾಗುವ ಸಾಧ್ಯತೆಯಿದೆ. ಹಾಗಾಗಿ ಎಚ್ಚರಿಕೆಯ ನಡೆ ಹಾಕುತ್ತಿರುವ ಜೆಡಿಎಸ್ ಕಾಂಗ್ರೆಸ್ ಬಂಡಾಯದ ಗರಿಷ್ಠ ಲಾಭ ಪಡೆಯಲು ಹೊಂಚುಹಾಕುತ್ತಿದೆ.

ಬೆಂಗಳೂರಿನ ಹೆಬ್ಬಾಳ, ಕೆಆರ್ ಪುರಂ ಸೇರಿದಂತೆ ಕಾರವಾರ, ಕೆಜಿಎಫ್, ಬೆಳಗಾವಿ, ಬಳ್ಳಾರಿ ಜಿಲ್ಲೆಗಳ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಯತ್ನಿಸಿ ವಿಫ‌ಲರಾದ ಕೆಲವು ಪ್ರಭಾವಿ ನಾಯಕರು ಜೆಡಿಎಸ್‌ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

ಸ್ವತಃ ಜೆಡಿಎಸ್ ಇನ್ನೂ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಅದು ಕಾದುನೋಡುವ ತಂತ್ರಕ್ಕೆ ರೆಬೆಲ್ ಗಳು ಯಾರಾದರೂ ಸಿಗುತ್ತಾರಾ ಎಂದು ಕಾದು ನೋಡುತ್ತಿರುವ ಶುಭ ಘಳಿಗೆಯಲ್ಲೇ ಹೆಬ್ಬಾಳದ ಕಡೆಯಿಂದ 'ಹೆಲ್ಪ್ ಮಿ ಹೆಲ್ಪ್ ಮಿ' ಎಂದು ಜೋರಾಗಿ ಕೂಗಿದ್ದು ನೇರವಾಗಿ ಕುಮಾರಣ್ಣನ ಕಿವಿಗೆ ಬಿದ್ದಿದೆ. ತಡಮಾಡದೆ ಅವರೂ ಓಡಿಹೋಗಿ ದೊಡ್ಡ ಗೌಡರ ಕಿವಿಗೂ ಹಾಕಿದ್ದಾರೆ.

congress-ex-minister-hm-revanna-may-join-jds

ಹಾಗೆ ಜೋರಾಗಿ ಕೂಗಿದ್ದು ಯಾರಪ್ಪಾ ಅಂತಂದಂರೆ ಸನ್ಮಾನ್ಯ ರೇವಣ್ಣ ಅವರು. ರೇವಣ್ಣ ಆಗಲೇ ಜಿಡಿಎಸ್ ನಲ್ಲಿದ್ದಾರಲ್ಲಾ ಎಂದು ಕನ್ಫೂಷಿಯಸ್ ಆಗುವವರಿಗೆ...ಇವರು ಮಾಜಿ ಸಚಿವ ಎಚ್ಎಂ ರೇವಣ್ಣ. ನಾಲ್ಕು ದಶಕಗಳಿಂದ ಕಾಂಗ್ರೆಸಿಗೆ ಕಾಯಾವಾಚಾಮನಸಾ ಅಂಕಿತರಾಗಿದ್ದ ಸನ್ಮಾನ್ಯ ಎಚ್ಎಂ ರೇವಣ್ಣಗೆ ಕಾಂಗ್ರೆಸ್ ಕೈ ಕೊಟ್ಟಿದೆ. ಹಾಗಾಗಿ, ನಾನು ನಿಮ್ಮ ಕೈಹಿಡೀತೀನಿ. ಇಂಥ ಕಷ್ಟ ಕಾಲದಲ್ಲಿ ದಯವಿಟ್ಟು ಇಲ್ಲಾ ಅನ್ನಬೇಡಿ ಎಂದಿದ್ದಾರೆ.

ಹೀಗೆ ಪಿಟಿಷನ್ ಬಂದಿದ್ದೇ ತಡ ಪದ್ಮನಾಭ ನಗರದ ಅಪ್ಪ-ಮಗ ಎಚ್ಎಂ ರೇವಣ್ಣ ಯಾರು, ಆತನ ತಾಖತ್ತು ಏನು ಎಂಬುದನ್ನು ಒಮ್ಮೆ ಸ್ಮರಿಸಿಕೊಂಡು ಜೆಡಿಎಸ್ ಗೆ ಒಂದು ಸ್ಥಾನ ಗ್ಯಾರಂಟಿ ಎಂದು ಖುಷಿಯೆದ್ದು ಹೋಗಿದ್ದಾರೆ.

ಸಿದ್ದರಾಮಯ್ಯ ಬ್ರೇಕ್: ಆದರೆ ಜೆಡಿಎಸ್ ರೇವಣ್ಣಗೆ ತಥಾಸ್ತು ಅನ್ನುವುದು ಅಷ್ಟು ಸರಳವಾಗಿಲ್ಲ. ಏಕೆಂದರೆ ಈಗಾಗಲೇ ಹೆಬ್ಬಾಳದಲ್ಲಿ 'ಪಕ್ಷದ ಆಂತರಿಕ ರೆಬೆಲ್' ಅಬ್ದುಲ್ ಅಜೀಂ ಎಂಬ ಖಡಕ್ ಪೊಲೀಸ್, ಮುಂದೆ ಪರಿಸ್ಥಿತಿ ಹೇಗೋ ಏನೋ? ಕುಮಾರಣ್ಣ ಯಾವಾಗ ಮತ್ತೆ ತನಗೆ ಕೈಕೊಡುತ್ತಾರೋ ಎಂದು ಲೆಕ್ಕಾಚಾರ ಹಾಕಿ ಅದಾಗ್ಲೇ ದೊಡ್ಡಗೌಡರ ಕೈಇಂದ ಬಿ ಫಾರಂ ಅನ್ನು ಕಸಿದಿಟ್ಟುಕೊಂಡಿದ್ದಾರೆ.

ಜತೆಗೆ, ಬಲಾಢ್ಯ ರೇವಣ್ಣರನ್ನು ಬಿಟ್ಟುಕೊಡಲು ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರು ಸಿದ್ಧರಿಲ್ಲ. ಪಕ್ಷ ಗೆದ್ದು ಬರಲಿ ನಿನಗೆ ಮುಂದೆ ಒಳ್ಳೆ ಹುದ್ದೆ ಕೊಡುವುದು ಗ್ಯಾರಂಟಿ ಎಂದು ಕಾಳು ಹಾಕಿದ್ದಾರೆ. ಜಾತಿ ಬಾಂಧವ ಸಿದ್ದು ಮಾತಿಗೆ ರೇವಣ್ಣ ಒಲಿಯುವ ಸಾಧ್ಯತೆಯಿದೆ.

ಆದರೂ ಕುರುಬ ಸಮುದಾಯದ ಪ್ರಭಾವಿ ಮುಖಂಡ ಎಚ್‌ಎಂ ರೇವಣ್ಣ ಅವರಿಗೆ ಕಾಂಗ್ರೆಸ್ ಕೈ ಎತ್ತಿರುವುದು ನಿಕ್ಕಿಯಾಗಿದ್ದು, ಅವರನ್ನು ಜೆಡಿಎಸ್ ಬೆಂಗಳೂರಿನಲ್ಲೇ ಬೇರೆ ಯಾವುದಾದರೂ ಕ್ಷೇತ್ರದಿಂದ ಕಣಕ್ಕಿಳಿಸಲು ಅಪ್ಪ-ಮಗ ಆಲೋಚಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+