ಆಂಧ್ರ ಮೂಲದ ಟೆಕ್ಕಿ ಹೆಣವಾಗಿ ಪತ್ತೆ

Niagara
ಆಂಧ್ರಪ್ರದೇಶ, ಏ.12: ಅಮೆರಿಕಾದಲ್ಲಿ ಕಾಣೆಯಾಗಿದ್ದ ಆಂಧ್ರ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಪಿ.ವಿ.ಶರತ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಏ.2ರಂದು ಕುಟುಂಬದವರೊಂದಿಗೆ ನಯಾಗರ ಜಲಪಾತ ವೀಕ್ಷಿಸಿಲು ಹೋದಾಗ ಶರತ್ ಕುಮಾರ್ ಕಾಣೆಯಾಗಿದ್ದರು.

ಶುಕ್ರವಾರ ಬೆಳಗ್ಗೆ ಶರತ್ ಕುಮಾರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಮೆರಿಕಾ ಪೊಲೀಸರು ತಿಳಿಸಿದ್ದಾರೆ. ಅಮೆರಿಕಾದ ಟಿಸಿಎಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆಂಧ್ರ ಪ್ರದೇಶದ ಗುಂಟೂರಿನ ಶರತ್ ಕುಮಾರ್ (35) ಕಣ್ಮರೆಯಾಗಿದ್ದರು.

ಏಳು ವರ್ಷಗಳಿಂದ ಟಿಸಿಎಸ್ ಕಂಪನಿ ಉದ್ಯೋಗಿಯಾಗಿದ್ದ ಶರತ್ ಪತ್ನಿ ಮಂಜುಳಾ ಮತ್ತು ಸ್ನೇಹಿತರೊಂದಿಗೆ ನಯಾಗರ ಜಲಪಾತ ನೋಡಲು ತೆರಳಿದ್ದರು. ಆದರೆ, ಎಲ್ಲರೂ ಪ್ರವಾಸಕ್ಕೆ ಹೋಗಿದ್ದ ಬಸ್ ಗೆ ಬಂದರೂ ಶರತ್ ಬಂದಿರಲಿಲ್ಲ. ಕುಟುಂಬದವರು ಶರತ್ ರನ್ನು ಹುಡುಕಾಡಿದರೂ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಪತ್ತೆಯಾಗಿರಲಿಲ್ಲ.

ಎರಡು ದಿನಗಳ ನಂತರ ಅಮೆರಿಕಾದಲ್ಲಿ ಶರತ್ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಆಂಧ್ರ ಪ್ರದೇಶ ಪೊಲೀಸರು ಅಮೆರಿಕಾ ಪೊಲೀಸರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು.

ಶುಕ್ರವಾರ ಬೆಳಗ್ಗೆ ಶರತ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಆಂಧ್ರ ಪ್ರದೇಶದಲ್ಲಿರುವ ಕುಟುಂಬದವರಿಗೂ ಅಮೆರಿಕಾ ಅಧಿಕೃತ ಮಾಹಿತಿ ರವಾನಿಸಿದೆ. ಮರಣೋತ್ತರ ಪರೀಕ್ಷೆಯ ನಂತರ ಶರತ್ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ. (ಆಂಧ್ರ ಮೂಲದ ಟಿಸಿಎಸ್ ಕಂಪನಿ ಟೆಕ್ಕಿ ಕಾಣೆ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+