ಆಂಧ್ರ ಮೂಲದ ಟಿಸಿಎಸ್ ಕಂಪನಿ ಟೆಕ್ಕಿ ಕಾಣೆ

ಏಳು ವರ್ಷಗಳಿಂದ ಟಿಸಿಎಸ್ ಕಂಪನಿ ಉದ್ಯೋಗಿಯಾಗಿದ್ದ ಶರತ್ ಕುಮಾರ್ (33) ಭಾನುವಾರ ಪತ್ನಿ ಮತ್ತು ಸ್ನೇಹಿತರೊಂದಿಗೆ ನಯಾಗರ ಜಲಪಾತ ನೋಡಲು ತೆರಳಿದ್ದರು. ಎಲ್ಲರೂ ಮರಳಿ ಪ್ರವಾಸಕ್ಕೆ ಹೋಗಿದ್ದ ಬಸ್ ಗೆ ಬಂದರು ಶರತ್ ಬಂದಿರಲಿಲ್ಲ. ಕುಟುಂಬದವರು ಶರತ್ ರನ್ನು ಹುಡುಕಾಡಿದರೂ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಪತ್ತೆಯಾಗಿಲ್ಲ.
ಶರತ್ ಕುಮಾರ್ ಬರಬಹುದೆಂದು ಎರಡು ದಿನ ಕಾದ ಕುಟುಂಬದವರು, ಮರಳದ ಹಿನ್ನೆಲೆಯಲ್ಲಿ ಅಮೆರಿಕಾದ ಪೊಲೀಸರಿಗೆ ದೂರು ನೀಡಿದ್ದಾರೆ. ಮೊಟೊರೋಲಾ ಕಂಪನಿ ಉದ್ಯೋಗಿಯಾಗಿದ್ದ ಮಂಜುಳಾ ಅವರನ್ನು ವಿವಾಹವಾಗಿ ಶರತ್ ಚಿಕಾಗೋದಲ್ಲಿ ನೆಲೆಸಿದ್ದರು.
ಆಂಧ್ರಪ್ರದೇಶದ ಗುಂಟೂರಿನ ಪೋತರಾಜು ಕೃಷ್ಣಮೂರ್ತಿ ಅವರ ಪುತ್ರರಾದ ಶರತ್ ಮೊದಲನೇ ಪತಿಗೆ ವಿಚ್ಛೇದನ ನೀಡಿದ್ದ ಮಂಜುಳಾ ಅವರನ್ನು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶರತ್ ಕುಮಾರ್ ಕಾಣೆಯಾಗಿರುವ ಬಗ್ಗೆ ಆಂಧ್ರ ಪ್ರದೇಶದಲ್ಲಿರುವ ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದೆ.
ಬುಧವಾರ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿದ ಶರತ್ ತಂದೆ ಕೃಷ್ಣಮೂರ್ತಿ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಕಂಪನಿಗೆ ಕರೆ ಮಾಡಿ ಶರತ್ ಕುಮಾರ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ನಯಾಗರ ಜಲಪಾತ ನೋಡಲು ಕುಟುಂಬ ಮತ್ತು ಸ್ನೇಹಿತರೊಂದಿಗೆ ತೆರಳುವುದಾಗಿ ಕಂಪನಿಯಲ್ಲಿ ಮಾಹಿತಿ ನೀಡಿದ್ದಾರೆ.
ಶರತ್ ಕುಮಾರ್ ಅವರ ಜೊತೆ ಪ್ರವಾಸಕ್ಕೆ ತೆರಳಿದ್ದ ಶ್ರೀನಿವಾಸ್, ಶರತ್ ಕುಮಾರ್ ಮತ್ತು ಅವರ ಪತ್ನಿಯ ಜೊತೆ ನಯಾಗರ ಜಲಪಾತ ವೀಕ್ಷಿಸಲು ತೆರಳಿದ್ದೆವು. ನಾವೆಲ್ಲರೂ ವಾಪಾಸ್ ಬಸ್ಸಿನ ಬಳಿ ಬಂದರೂ ಶರತ್ ಕುಮಾರ್ ಬರಲಿಲ್ಲ. ಎಷ್ಟು ಹುಡುಕಿದರೂ ಎಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ದೊರಕುತ್ತಿಲ್ಲ ಎಂದು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications