ಮತದಾನದ ಸಮಯ ಪರಿಷ್ಕರಿಸಿದ ಆಯೋಗ

polling
ಬೆಂಗಳೂರು, ಏ.9 : ವಿವಿಧ ರಾಜಕೀಯ ಪಕ್ಷಗಳ ಮನವಿಗೆ ಸ್ಪಂದಿಸಿದ ಚುನಾವಣಾ ಆಯೋಗ ಮತದಾನದ ಸಮಯವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಮೇ.5ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ಮಂಗಳವಾರ ರಾಜ್ಯ ಚುನಾವಣಾ ಆಯೋಗ ಈ ಕುರಿತು ಅಂತಿಮ ಆದೇಶ ಹೊರಡಿಸಿದೆ. ಮತದಾನದ ಸಮಯವನ್ನು ಒಂದು ಗಂಟೆ ಕಡಿತಗೊಳಿಸಿ ಆಯೋಗ ವೇಳಾಪಟ್ಟಿ ಪ್ರಕಟಿಸಿತ್ತು. ಅದರಂತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನದ ಸಮಯ ನಿಗದಿಯಾಗಿತ್ತು.

ಆಯೋಗದ ಈ ಕ್ರಮವನ್ನು ವಿವಿಧ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಪ್ರತಿಭಟಿಸಿದ್ದವು. ಹಿಂದಿನಂತೆಯೇ 7ರಿಂದ 5 ಗಂಟೆಯ ವರೆಗೆ ಮತದಾನದ ಸಮಯ ನಿಗದಿ ಪಡಿಸಿ ಎಂದು ಮನವಿ ಮಾಡಿದ್ದವು.

ಸೋಮವಾರ ನಗರಕ್ಕೆ ಆಗಮಿಸಿದ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಬಳಿಯೂ ಮತದಾನದ ಸಮಯ ಹೆಚ್ಚಿಸುವಂತೆ ಎಲ್ಲಾ ಪಕ್ಷಗಳು ಆಗ್ರಹಿಸಿದ್ದವು. ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಆಯೋಗ ಇಂದು ಮಧ್ಯಾಹ್ನ ಮತದಾನದ ಸಮಯ ಪರಿಷ್ಕರಿಸಿ ಆದೇಶ ಹೊರಡಿಸಿದೆ.

ತೊಂದರೆ ಏನು : ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾದರೆ ಕೆಲವು ಕಾರ್ಮಿಕರು ಮತದಾನ ಮಾಡಿ ತಕ್ಷಣ ಕೆಲಸಕ್ಕೆ ತೆರಳುತ್ತಾರೆ. ಆದರೆ, 8 ಗಂಟೆಗೆ ಮತದಾನ ಪ್ರಾರಂಭವಾದರೆ ಕಾರ್ಮಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಪಕ್ಷಗಳು ಅಭಿಪ್ರಾಯಪಟ್ಟಿದ್ದವು.

ಕೆಲವು ಜಿಲ್ಲೆಗಳಲ್ಲಿ ವಿಪರೀತ ಬಿಸಿಲಿದ್ದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾದರೆ ಜನರು ಉತ್ಸಾಹದಿಂದ ಬಂದು ಮತದಾನ ಮಾಡುತ್ತಾರೆ ಆದ್ದರಿಂದ ಸಮಯವನ್ನು ಪರಿಷ್ಕರಣೆ ಮಾಡುವಂತೆ ಪಕ್ಷಗಳು ಒತ್ತಾಯಿಸಿದ್ದವು.

ವಿವಿಧ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿದ್ದ ಆಯೋಗ ಮತದಾನದ ಸಮಯವನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಆದೇಶದಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮೇ 5ರಂದು ಮತದಾನ ನಡೆಯಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+