ಕೆಂಪು ಬಸ್ ಬೆಲೆ ಈಗ 600 ಕೋಟಿ ರು

Bangalore's redBus.in being valued at $110 mn
ಬೆಂಗಳೂರು, ಮಾ.28: 'ಅವಶ್ಯಕತೆಯೇ ಆವಿಷ್ಕಾರದ ತಾಯಿ' ಎಂಬ ಮಾತಿಗೆ ತಕ್ಕಂತೆ ರೂಪುಗೊಂಡ 'ರೆಡ್ ಬಸ್' ಎಂಬ ಆನ್ ಟಿಕೆಟ್ ಬುಕ್ಕಿಂಗ್ ಸಂಸ್ಥೆ ದಿನೇದಿನೇ ತನ್ನ ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಸದ್ಯ 55 ಕೋಟಿ ನಿವ್ವಳ ಆದಾಯವಿರುವ ಸಂಸ್ಥೆ ಈಗ ನೂರಾರು ಕೋಟಿ ಬೆಲೆ ಬಾಳಲಿದೆ.

ರೆಡ್ ಬಸ್.ಇನ್ ವೆಬ್ ಸೈಟ್ ನಡೆಸುತ್ತಿರುವ ಬೆಂಗಳೂರು ಮೂಲದ ಪಿಲಾನಿ ಸಾಫ್ಟ್ ಲ್ಯಾಬ್ ತನ್ನ ಮಾರುಕಟ್ಟೆ ಮೌಲ್ಯವನ್ನು 11 ಪಟ್ಟು ಹೆಚ್ಚಿಸಿಕೊಳ್ಳುವ ಸನಿಹದಲ್ಲಿದೆ. ಸದ್ಯದಲ್ಲೇ ಪಿಲಾನಿ ಸಂಸ್ಥೆ 110 ಮಿಲಿಯನ್(605 ಕೋಟಿ ರು) ಮೌಲ್ಯ ಸಂಸ್ಥೆ ಎನಿಸಲಿದೆ.

2006ರಲ್ಲಿ ಆರಂಭವಾದ ರೆಡ್ ಬಸ್.ಇನ್ ಸಂಸ್ಥೆ ಹುಟ್ಟಿಕೊಂಡ ಕಥೆ ಪ್ರೇರಣೀಯ. ಒಂದು ದಿನ ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹಬ್ಬದ ಸಂದರ್ಭದಲ್ಲಿ ಊರಿಗೆ ಹೊರಟ್ಟಿದ್ದ ಸಾಮ್ ಗೆ ಬಸ್ ಸಿಗಲಿಲ್ಲ. ತಕ್ಷಣವೇ ಇಬ್ಬರು ಸ್ನೇಹಿತರ ಸಹಾಯದಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣವನ್ನು ನಿರ್ಮಿಸುವ ಬಗ್ಗೆ ಮಾತನಾಡಿದ್ದಾರೆ. ತಿಂಗಳುಗಳ ನಂತರ ಚಿಕ್ಕದಾಗಿ ಆರಂಭವಾದ ಆನ್ ಲೈನ್ ಬುಕ್ಕಿಂಗ್ ಸಂಸ್ಥೆ ಈಗ ಬೃಹದಾಕಾರವಾಗಿ ಬೆಳೆದಿದೆ.

1000ಕ್ಕೂ ಅಧಿಕ ಬಸ್ ಸಂಸ್ಥೆಗಳು 10,000ಕ್ಕೂ ಅಧಿಕ ಬಸ್ ಮಾರ್ಗಗಳಿಗೆ ಆನ್ ಲೈನ್ ಟಿಕೆಟ್ ನೀಡುತ್ತಿದೆ. 2012-13ರಲ್ಲಿ 2 ಕೋಟಿ ನಿವ್ವಳ ಲಾಭದೊಂದಿಗೆ 55 ಕೋಟಿ ರು ನಿವ್ವಳ ಆದಾಯ ಹೊಂದಿರುವ ಪಿಲಾನಿ ಸಂಸ್ಥೆ ಮಾರುಕಟ್ಟೆ ಮೌಲ್ಯ 600 ಕೋಟಿ ರು ಮುಟ್ಟಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ.

ರೆಡ್ ಬಸ್ ಗೆ ಸ್ಪರ್ಧಿಯಾಗಿರುವ ಟ್ರಾವೆಲ್ ಯಾರಿ.ಕಾಂ ಸಂಸ್ಥೆ ಕೂಡಾ 10 ಮಿಲಿಯನ್ ಮೌಲ್ಯ ಹೆಚ್ಚಿಸಿಕೊಳ್ಳಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ರೆಡ್ ಬಸ್ ಆನ್ ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಜೊತೆಗೆ ಆನ್ ಲೈನ್ ಮಾರ್ಗಸೂಚಿ, ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ನೀಡುತ್ತಿದೆ. ಕ್ಲೌಡ್ ಸಾಫ್ಟ್ ವೇರ್ BOSS ಹಾಗೂ ಸೀಟ್ ಸೆಲ್ಲರ್ ಅಳವಡಿಸಿಕೊಂಡಿದ್ದು, ಬಸ್ ನಿರ್ವಾಹಕರು, ಟ್ರಾವೆಲ್ ಏಜೆಂಟ್ ಗಳಿಗೆ ತ್ವರಿತವಾಗಿ ಬುಕ್ಕಿಂಗ್ ಮಾಹಿತಿ ತಲುಪಲಿದೆ. ಪ್ರಯಾಣಿಕ ಸ್ನೇಹಿ ವೆಬ್ ವಾತಾವರಣ ಇರುವುದರಿಂದ ಸರ್ಕಾರಿ ವೆಬ್ ತಾಣಗಳಿಗಿಂತ ರೆಡ್ ಬಸ್ ಜನಪ್ರಿಯತೆ ಹೆಚ್ಚುತ್ತಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+