ಈ ಬಾರಿಯೂ ಅನಿವಾಸಿ ಕನ್ನಡಿಗರು ಮತ ಹಾಕುವುದಿಲ್ಲ

NRI Kannadigas not in a position to cast vote
ಬೆಂಗಳೂರು, ಮಾರ್ಚ್ 28: ಕರ್ನಾಟಕದ 14ನೆಯ ವಿಧಾನಸಭೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕದಲ್ಲಿ ಭೀಕರ ಬಿಸಿಲೂ ಕಾಲಿಟ್ಟಿದೆ. ಅದರ ಜತೆಗೆ ಈ ಚುನಾವಣೆಯ ಕಾವೂ ಜೋರಾಗುತ್ತಿದೆ. ಈ ಮಧ್ಯೆ, ಸಾಗರದಾಚೆ ತಂಪಾಗಿರುವ ಅನಿವಾಸಿ ಭಾರತೀಯರು ಅಂದರೆ ಕನ್ನಡಿಗರು ಚುನಾವಣೆ ಬಗ್ಗೆ ಏನನ್ನುತ್ತಾರೆ? ಮತ ಹಾಕುವುದಕ್ಕೆ ಬರುತ್ತಾರಾ, ಅಂದರೆ...

18 ಲಕ್ಷ ಮಂದಿ ಅನಿವಾಸಿ ಕನ್ನಡಿಗರು:
ಅಷ್ಟೂ ಮಂದಿ ಇಲ್ಲಿನ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ಆದರೆ ಒಂದೇ ತೊಡಕು ಮತ ಹಾಕುವುದಕ್ಕಾಗಿ ಅವರೆಲ್ಲ ವಿದೇಶಗಳಿಂದ ಹಾರಿಬರಬೇಕು. ಇಷ್ಟಕ್ಕೂ ಎಷ್ಟು ಮಂದಿ ಇಂತಹ ಅನಿವಾಸಿ ಕನ್ನಡಿಗರು ಇದ್ದಾರಪ್ಪಾ ಅಂದರೆ ಮತ ಹಾಕುವ ಎನ್ನಾರೈಗಳೇ 18 ಲಕ್ಷ ಮಂದಿ ಇದ್ದಾರೆ. ಜನತಂತ್ರದಲ್ಲಿ ಈ ಸಂಖ್ಯೆ ನಿಜಕ್ಕೂ ಗಣನೀಯವೇ. ಆದರೆ ಇವರ ಅಮೂಲ್ಯ ಮತ ಹಕ್ಕು ವ್ಯರ್ಥವಾಗುತ್ತಿದೆ.

ಇದು ಈ ಬಾರಿ ಚುನಾವಣೆಯ ಕಥೆಯಲ್ಲ. ಬಹಳ ಹಿಂದಿನಿಂದಲೂ ಉದ್ಯೋಗ ನಿಮಿತ್ತ ಜೀವನ ಅರಸಿ ವಿದೇಶಕ್ಕೆ ತೆರಳಿದ ಮಂದಿಗೆ ಮತದಾನ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸತತ ಪ್ರಯತ್ನದ ನಂತರ ಭಾರತ ಸರಕಾರವು ಎನ್ನಾರೈಗಳಿಗೂ ಭಾರತದಲ್ಲಿ ಮತ ಚಲಾಯಿಸುವುದಕ್ಕೆ 2010ರಲ್ಲಿ ಅಸ್ತು ಎಂದಿತು. ಇದರಿಂದ ಆನಂದಿತರಾದ ವಿದೇಶಿ ಕನ್ನಡಿಗರು ತಾವೂ ಮತ ಚಲಾಯಿಸುವುದಕ್ಕೆ ಉತ್ಸುಕರಾದರು.

ಆದರೆ ಅವರ ಉತ್ಸಾಹಕ್ಕೆ ಭಂಗವುಂಟಾಗುವಂತೆ ಚುನಾವಣೆ ಆಯೋಗ ಸಾಮಾನ್ಯ ಷರತ್ತೊಂದನ್ನು ವಿಧಿಸಿದೆ. ಏನಪಾ ಅಂದರೆ ವಿದೇಶಿ ಕನ್ನಡಿಗರು ಕರ್ನಾಟಕದಲ್ಲಿ ತಾವು ನೆಲೆಸಿರುವ ಸ್ಥಳದಲ್ಲಿ ಚುನಾವಣೆ ಆಯೋಗದಲ್ಲಿ ಹೆಸರನ್ನು ನೋಂದಾಯಿಸಿರಬೇಕು. ಮತ್ತು ಆ ಸ್ಥಳದಲ್ಲೇ ಖುದ್ದಾಗಿ ಮತ ಚಲಾಯಿಸಬೇಕು ಎನ್ನುತ್ತಿದೆ ಆಯೋಗ.

ಹಾಗಾಗಿ, ಇದು ಸಾಧ್ಯವಾಗದ ಮಾತು ಎಂದು ಸುಮಾರು 120 ರಾಷ್ಟ್ರಗಳಲ್ಲಿ ನೆಲೆಸಿರುವ 18 ಲಕ್ಷ ಕನ್ನಡಿಗರು ಮತ ಚಲಾವಣೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಇದು ಕನ್ನಡಿಗರಿಗಷ್ಟೇ ಸೀಮಿತವಾದ ಸಮಸ್ಯೆಯಲ್ಲ. ಇತರೆ ರಾಜ್ಯದವರಿಗೂ ಇದು ಸಮಸ್ಯೆಯಾಗಿದೆ. ಇದುವರೆಗೂ ಯಾರೊಬ್ಬರೂ ಚುನಾವಣೆ ಆಯೋಗದಲ್ಲಿ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಹಾಗಾಗಿ ಈ ಬಾರಿಯೂ ಯಾವೊಬ್ಬ ಅನಿವಾಸಿ ಕನ್ನಡಿಗರಿಗೂ ಮತ ಹಾಕಲು ಸಾಧ್ಯವಾಗುವುದಿಲ್ಲ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+