ಕ್ಲರ್ಕ್ ಸಂಬಳ 40 ಸಾವಿರ ಆದ್ರೆ ಆಸ್ತಿ ಮಾತ್ರ 25 ಕೋಟಿ

ಆದರೆ ಸರಕಾರ ಇಷ್ಟೊಂದು ಸಂಬಳ ಕೊಡುತ್ತಿದ್ದರೂ ಈ ಗುಮಾಸ್ತ ಮಸ್ತ್ ಮಸ್ತ್ ಆಗಿ ಬೇಜಾನ್ ಆಸ್ತಿ ಮಾಡಿದ್ದಾನೆ. ಅದೂ ಅಕ್ರಮವಾಗಿ. ಕೊನೆಗೂ ಅಲ್ಲಿನ ಲೋಕಾಯುಕ್ತ ಪೊಲೀಸರು ಅಷ್ಟೂ ಆಸ್ತಿಯೊಂದಿಗೆ ಅವನನ್ನು ನಿನ್ನೆ ಬಂಧಿಸಿದ್ದಾರೆ.
ಭೂಪಾಲ್ ನಗರದ ಬೈರಾಗಢದ ನಿವಾಸಿ ಅರ್ಜುನ್ ದಾಸ್ ಲಾಲ್ವಾನಿ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ರೇಡ್ ಮಾಡಿದಾಗ ಅವರಿಗೆ ಸಿಕ್ಕಿದ್ದು ನಗದು, ಚಿನ್ನಾಭರಣ, ನಿರಖು ಠೇವಣಿ ಪತ್ರ, ಹೂಡಿಕೆ ದಾಖಲೆ ಪತ್ರ, 4 ನಿವೇಶನ, ಮನೆ, 2 ಗ್ಯಾರೇಜ್, 3 ಬಂಗಲೆ, 27 ಬ್ಯಾಂಕ್ ಖಾತೆ, 12 ಅಂಗಡಿಗಳ ಮಾಲೀಕತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ ಕೃಷಿ ತೋಟ, ಫಾರ್ಮ್ ಹೌಸ್ ಇನ್ನೂ ಏನೇನೋ ಇದೆ ಇವನ ಹೆಸರಿನಲ್ಲಿ!
ಗಮನಿಸಿ... ಇವುಗಳ ಮೊತ್ತ ಇಂದಿನ ಮಾರಕಟ್ಟೆ ದರದಲ್ಲಿ ಅಪಾರವಾಗಿದೆಯಾದರೂ ಇವುಗಳ ಖರೀದಿ ಸಮಯದಲ್ಲಿನ ಬೆಲೆಯನ್ನು ಗಣನೆಗೆ ತೆಗೆದುಕೊಂಡು ಇವುಗಳ ಮೌಲ್ಯ ಲೆಕ್ಕ ಹಾಕಿರುವ ಲೋಕಾಯುಕ್ತ ಪೊಲೀಸರಿಗೆ ಗುಮಾಸ್ತ ಅರ್ಜುನ್ ದಾಸನ ಆಸ್ತಿ ಬರೋಬ್ಬರಿ 25 ಕೋಟಿ ರೂ ಎಂಬುದು ಮನದಟ್ಟಾಗಿದೆ.
ಅಂದಹಾಗೆ ಗುಮಾಸ್ತ ಅರ್ಜುನ್ ದಾಸ ಕೆಲಸಕ್ಕೆ ಸೇರಿದ್ದು 1983ರಲ್ಲಿ. ಇವನಪ್ಪ ಪಾಕಿಸ್ತಾನದಿಂದ ನಿರಾಶ್ರಿತನಾಗಿ ಭಾರತಕ್ಕೆ ಬಂದಿದ್ದರು. ಈತನದು ಬಡಕುಟುಂಬವೇ. ಅರ್ಜುನ್ ದಾಸನ ಒಬ್ಬ ಮಗ ಇಂಜಿನಿಯರಿಂಗ ಓದುತ್ತಿದ್ದರೆ ಮತ್ತೊಂದು ಮಗು ವೈದ್ಯಕೀಯ ಶಿಕ್ಷಣ ಪಡೆಯುತ್ತಿದೆ.












Click it and Unblock the Notifications