ನಾಪತ್ತೆಯಾಗಿದ್ದ ಸೌವಿಕ್ ಪಾಲ್ ಹೆಣವಾಗಿ ಪತ್ತೆ

Missing Bangalore student found dead in London
ಲಂಡನ್, ಜ. 23 : ತಮ್ಮ ಮಗ ವಾಪಸ್ ಬಂದೇ ಬರುತ್ತಾನೆ ಎಂದು ಕಾದಿದ್ದ ಸೌವಿಕ್ ಪಾಲ್ ತಂದೆ ತಾಯಿಯ ಹೃದಯ ನುಚ್ಚುನೂರಾಗಿದೆ. ಕಳೆದ ವರ್ಷದ ಕೊನೆಯ ದಿನ ನಿಗೂಢವಾಗಿ ಕಾಣೆಯಾಗಿದ್ದ ಬೆಂಗಳೂರಿನ ಹೆಬ್ಬಾಳದ ಹುಡುಗ ಸೌವಿಕ್ ಪಾಲ್ (18) ಹೆಣ ಜ.22ರ ಮಂಗಳವಾರ ಕಾಲುವೆಯೊಂದರಲ್ಲಿ ದೊರೆತಿದೆ.

ಮ್ಯಾಂಚೆಸ್ಟರ್ ಯುನೈಟೆಡ್‌ನ ಹಳೆ ಟ್ರಾಫೋರ್ಡ್ ಫುಟ್ಬಾಲ್ ಮೈದಾನದ ಬಳಿಯಿರುವ ಬ್ರಿಜ್‌ವಾಟರ್ ಕಾಲುವೆಯಲ್ಲಿ, ಮ್ಯಾಂಚೆಸ್ಟರ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸೌವಿಕ್ ಪಾಲ್ ಶವ ದೊರೆತಿದೆ. ಅಲ್ಲಿನ ಪೊಲೀಸರಿಗೆ ಹುಡುಕಾಟದಲ್ಲಿ ಸಹಾಯ ಮಾಡಲೆಂದು ಲಂಡನ್ನಿಗೆ ತೆರಳಿದ್ದ ಸೌವಿಕ್ ಪಾಲ್ ಶಂತನು ಪಾಲ್ ನಿರಾಶೆಯಿಂದ ಮತ್ತು ನೋವಿನಿಂದ ಮರಳುವಂತಾಗಿದೆ.

ಮ್ಯಾಂಚೆಸ್ಟರ್ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಡಕ್ಟ್ ಡಿಸೈನ್ ಕೋರ್ಸ್ ಮಾಡುತ್ತಿದ್ದ ಸೌವಿಕ್ ಪಾಲ್ ಡಿ.31ರಂದು ರಾತ್ರಿ 11 ಗಂಟೆಯ ಸುಮಾರಿಗೆ ಹೊಸವರ್ಷಾಚರಣೆಯಲ್ಲಿ ಕಡೆಯ ಬಾರಿ ಕಾಣಿಸಿಕೊಂಡಿದ್ದರು. ಸೌವಿಕ್ ಕಾಣೆಯಾಗಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿತ್ತು. ಆತ ವಾಪಸ್ ಬಂದೇ ಬರುತ್ತಾನೆ ಎಂಬ ಆಶಾಭಾವನೆ ಆತನ ತಾಯಿ ಮಹೂಯಾ ಪಾಲ್ ವ್ಯಕ್ತಪಡಿಸಿದ್ದರು. ಕಡೆಗೂ ಅವರ ಮಗ ಬಾರದ ಲೋಕಕ್ಕೆ ತೆರಳಿಬಿಟ್ಟಿದ್ದಾರೆ.

ಸೌವಿಕ್ ಹುಡುಕಾಟದಲ್ಲಿ ತೊಡಗಿದ್ದ ಡಿಟೆಕ್ಟಿವ್ ಚೀಫ್ ಇನ್‌ಸ್ಪೆಕ್ಟರ್ ಕಾಲಿನ್ ಲಾರ್ಕಿನ್ ಅವರು, ಸೌವಿಕ್ ಪಾಲ್ ಕುಟುಂಬಕ್ಕೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಸೌವಿಕ್ ಸಾವಿನ ಬಗ್ಗೆ ಯಾರ ಮೇಲೂ ಶಂಕೆ ವ್ಯಕ್ತಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಪೋಸ್ಟ್ ಮಾರ್ಟಂ ಮಾಡಿ ತನಿಖೆ ನಡೆಸಿದ ನಂತರವೇ ಸತ್ಯಾಸತ್ಯತೆ ಬಯಲಿಗೆ ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.

ನಿಗೂಢವಾಗಿ ಕಣ್ಮರೆಯಾಗಿದ್ದ ಸೌವಿಕ್‌ನನ್ನು ಹುಡುಕಲು ಎಲ್ಲ ಮಾಧ್ಯಮಗಳಲ್ಲಿ ಮನವಿ ಮಾಡಲಾಗಿತ್ತು. ಫೇಸ್‌ಬುಕ್‌ನಲ್ಲಿ ಸೌವಿಕ್‌ನನ್ನು ಹುಡುಕಿ ಕೊಡಿರೆಂದು ವಿಶೇಷ ಪುಟವನ್ನು ರಚಿಸಲಾಗಿತ್ತು. ಭಿತ್ತಿಪತ್ರಗಳನ್ನು ಮುದ್ರಿಸಿ ಲಂಡನ್ನಿನಲ್ಲಿ ಎಲ್ಲೆಡೆ ಹಂಚಲಾಗಿತ್ತು. ಸೌವಿಕ್ ಪಾಲ್ ದೇಹವನ್ನು ಬೆಂಗಳೂರಿಗೆ ಎಂದು ತರುತ್ತಾರೆ ಎಂಬುದು ಇನ್ನೂ ತಿಳಿದುಬರಬೇಕಿದೆ.

ಸೌವಿಕ್ ಸಾವು ಕರ್ನಾಟಕದ ಜನತೆಗೆ ಆದ ಎರಡನೇ ಆಘಾತ. ಕೆಲ ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಜೆಸಿಂತಾ ಅವರು, ರಾಜಕುಮಾರಿ ಕೇಟ್‌ಗೆ ಸಂಬಂಧಿಸಿದ ಹಗರಣದಲ್ಲಿ ತಮಗರಿವಿಲ್ಲದಂತೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದರು. ಕೆಲ ದಿನಗಳ ಹಿಂದೆ ಜರ್ಮನಿಗೆ ಉನ್ನತ ಶಿಕ್ಷಣಕ್ಕೆಂದು ತೆರಳಿದ್ದ ಬೆಂಗಳೂರಿನ ನಿವಾಸಿ ಲಿಖಿತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+