ಜೆಸಿಂತಾ ಬರೆದ 3 ಮರಣಪತ್ರಗಳಲ್ಲಿ ಏನಿದೆ?

What is there in Jacintha death notes
ಲಂಡನ್, ಡಿ. 14 : ಕೇಂಬ್ರಿಜ್ ರಾಜಕುಮಾರಿ ಕೇಟ್ ಮಿಡ್ಲ್‌ಟನ್ ಕುರಿತು ವಿವರ ಬಹಿರಂಗಪಡಿಸಿದ ವಿವಾದದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಉಡುಪಿ ಮೂಲದ ನರ್ಸ್ ಜಸಿಂತಾ ಸಾಲ್ಡಾನಾ ಅವರು ಆತ್ಮಹತ್ಯೆಗೆ ಶರಣಾಗುವ ಮುನ್ನ ಬರೆದಿಟ್ಟ 3 ಮರಣಪತ್ರದಲ್ಲಿ ಏನು ನಮೂದಿಸಿದ್ದರು ಎಂಬುದು ಈಗ ಬಹಿರಂಗವಾಗಿದೆ.

ಗಾರ್ಡಿಯನ್ ಪತ್ರಿಕೆ ಬಹಿರಂಗ ಪಡಿಸಿದ ಮರಣಪತ್ರದ ವಿವರಗಳು ಕೆಳಗಿನಂತಿವೆ.

* ಮೊದಲ ಮರಣಪತ್ರದಲ್ಲಿ, ಕುಚೋದ್ಯ ಮಾಡಿ ಅವರ ಸಾವಿಗೆ ಕಾರಣರಾದ ಆಸ್ಟ್ರೇಲಿಯಾದ ಡಿಜೆಗಳಾದ ಮೆಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಚಿಯನ್ ಅವರನ್ನು ಜೆಸಿಂತಾ ತರಾಟೆಗೆ ತೆಗೆದುಕೊಂಡಿದ್ದಾರೆ. ತಾವು ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ಮತ್ತು ಪ್ರಿನ್ಸ್ ಚಾರ್ಲ್ಸ್ ಎಂದು ಹೇಳಿಕೊಂಡು ಕರೆ ಮಾಡಿ ಕೇಟ್‌ಳ ಎಲ್ಲ ಖಾಸಗಿ ವಿವರಗಳನ್ನು ಇವರಿಬ್ಬರು ಪಡೆದುಕೊಂಡಿದ್ದರು. ಆ ಕರೆಯನ್ನು ಕೇಟ್ ಜೊತೆಗಿದ್ದ ನರ್ಸ್‌ಗೆ ವರ್ಗಾಯಿಸಿದ್ದು ಜೆಸಿಂತಾ.

* ಎರಡನೇ ಮರಣಪತ್ರದಲ್ಲಿ, ತಾವು ನಿಧನರಾದ ಮೇಲೆ ಅಂತಿಮ ಸಂಸ್ಕಾರವನ್ನು ಯಾವ ರೀತಿ ಮಾಡಬೇಕು ಎಂಬ ವಿವರಗಳನ್ನು ಬರೆದಿಟ್ಟಿದ್ದರು. ಅವರ ಇಚ್ಛೆಯಂತೆ ಅಂತಿಮ ಸಂಸ್ಕಾರ ಅವರ ತವರೂರಾದ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆಯುವ ಸಾಧ್ಯತೆಯಿದೆ.

* ಮೂರನೇ ಮರಣಪತ್ರದಲ್ಲಿ, ತಾವು ಕೆಲಸ ಮಾಡುತ್ತಿದ್ದ 7ನೇ ಕಿಂಗ್ ಎಡ್ವರ್ಡ್ ಆಸ್ಪತ್ರೆಯ ಸಿಬ್ಬಂದಿಗಳನ್ನು ಜೆಸಿಂತಾ ದೂಷಿಸಿದ್ದಾರೆ. ಕರೆ ಸ್ವೀಕರಿಸಿ ವರ್ಗಾಯಿಸಿದ್ದರಲ್ಲಿ ತಮ್ಮದೇನೂ ತಪ್ಪಿರಲಿಲ್ಲ. ಆದರೆ, ಕೇಟ್‌ಳ ಎಲ್ಲ ಖಾಸಗಿ ವಿವರಗಳನ್ನು ನೀಡಬಾರದಿತ್ತು ಎಂದು ಅವರು ಹೇಳಿದ್ದಾರೆ. ಹಾಗೆಯೆ, ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಇಷ್ಟು ವಿವರಗಳು ಮಾತ್ರ ಲಭ್ಯವಿವೆ. ತಲ್ಲಣಗೊಳಿಸಿದ ಈ ಪ್ರಕರಣದ ತನಿಖೆಯನ್ನು ಸ್ಕಾಟ್‌ಲೆಂಡ್ ಪೊಲೀಸರು ಇನ್ನೂ ನಡೆಸುತ್ತಿದ್ದಾರೆ. ಆದರೆ, ಮರಣಪತ್ರದಲ್ಲಿರುವ ವಿವರಗಳನ್ನು ನೋಡಿ ಜೆಸಿಂತಾ ಕುಟುಂಬದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಚೋದ್ಯ ಮಾಡಿದ ನಂತರ ಮತ್ತು ಆಕೆಯ ಸಾವಿಗೆ ಮುನ್ನ ಏನೇನು ನಡೆಯಿತು ಎಂಬುದರ ಕುರಿತು ಪೂರ್ಣ ತನಿಖೆ ನಡೆಸಬೇಕೆಂದು ಜೆಸಿಂತಾ ಗಂಡ ಆಗ್ರಹಿಸಿದ್ದಾರೆ. ಎಲ್ಲ ಸತ್ಯ ಹೊರಬರಬೇಕೆಂದು ಒತ್ತಾಯಿಸಿದ್ದಾರೆ.

ಭಾರತಕ್ಕೆ ಜೆಸಿಂತಾ ಶವ : ಜೆಟ್ ಏರ್‌ವೇಸ್ ಮುಖಾಂತರ ಜೆಸಿಂತಾ ಶವವನ್ನು ಭಾರತಕ್ಕೆ ತರಲಾಗುತ್ತಿದೆ. ಶನಿವಾರ ಬೆಳಗಿನ ಜಾವ 3 ಗಂಟೆಗೆ ಮುಂಬೈಗೆ ಬರಲಿದ್ದು, ಡಿ.16ರಂದು ವಿಮಾನದ ಮೂಲಕ ಮಂಗಳೂರಿಗೆ ಬರಲಿದ್ದು, ಶಿರ್ವದಲ್ಲಿ ಅಂದು ಶವಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+