ಒಳಗೆ ಸೇರಿದರೆ ಗುಂಡು,ಹುಡುಗಿಯಾಗುವಳು ಗಂಡು

ನಗರದ ಅಂಬೇಡ್ಕರ್ ವೃತ್ತದಲ್ಲಿ ಸೀರೆ ಉಟ್ಟು 'ಟೈಟ್' ಆಗಿದ್ದ ಮಹಿಳೆ ಸುಮಾರು ಎರಡು ಗಂಟೆಗಳ ಕಾಲ ಪೊಲೀಸರನ್ನೂ ಬಿಡದೆ ಅಕ್ಕಪಕ್ಕ ಬಂದವರನ್ನೆಲ್ಲಾ ಬಾಯಿಗೆ ಬಂದಂತೆ ನಿಂದಿಸಿ ತಡರಾತ್ರಿ ಬೀದರ್ ಜನತೆಗೆ ಪುಕ್ಸಟ್ಟೆ ಮನೋರಂಜನೆ ನೀಡಿದ್ದಾಳೆ.
ಯಾರ ಮಾತನ್ನೂ ಕೇಳದ ಈಕೆ ಪೋಲೀಸರನ್ನು ಹತ್ತಿರ ಬರುಲು ಬಿಡುತ್ತಿರಲಿಲ್ಲ. ನಡು ಬೀದಿಯಲ್ಲಿ ಈಕೆ ರಂಪ ರಾಮಾಯಣ ಮಾಡುತ್ತಿದ್ದರೆ ಪೊಲೀಸರೂ ಸೇರಿ ಎಲ್ಲರೂ ಮೂಕ ಪ್ರೇಕ್ಷಕರಾಗಿದ್ದರು.
ರೋಡಿನಲ್ಲಿ ಬಿದ್ದು ಹೊರಳಾಡುತ್ತಿದ್ದ ಈಕೆ ಅದೇನೋ ಹೇಳಿದ್ದನ್ನೇ ಹೇಳುತ್ತಿದ್ದಳು. ಅಸ್ಪಷ್ಟವಾಗಿ ಮಾತನಾಡುತ್ತಿದ್ದ ಈಕೆ ಏನು ಹೇಳುತ್ತಿದ್ದಾಳೆ ಎಂದು ಕೇಳಲು ಪೊಲೀಸರು ಮತ್ತು ನೆರೆದಿದ್ದ ಕೆಲವರು ಆಕೆಯ ಬಳಿಗೆ ಹೋದರೆ ಮತ್ತೆ ಕೂಗಿ ರಂಪ ಮಾಡುತ್ತಿದ್ದಳು.
ಸುಮಾರು ಎರಡು ಗಂಟೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಈಕೆ ಗುಂಡಿನ ಮತ್ತು ಇಳಿದ ನಂತರ ಸುಮ್ಮನಾದಳು.
ಕೂಡಲೇ ಪೊಲೀಸರು ಅಂಬುಲೆನ್ಸ್ ತರಿಸಿ ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.












Click it and Unblock the Notifications