ದಂಪತಿ ರಾಸಲೀಲೆ ಎಂಎಂಎಸ್: ಇಬ್ಬರು ಕಸ್ಟಡಿಗೆ

Noida Cyber Cell ಪೊಲೀಸರು ಈ ಕುಕೃತ್ಯದ ಜಾಲವನ್ನು ಬೇಧಿಸಿದ್ದಾರೆ. ನೋಯ್ಡಾದ ಪ್ರತಿಷ್ಠಿತ ಕಂಪನಿಯೊಂದರ ಅಧಿಕಾರಿಯೊಬ್ಬರು ತಮ್ಮ ಪತ್ನಿಯ ಜತೆಗೂಡಿ ಮಥುರಾ, ಜೈಪುರ ಮತ್ತಿತರ ಊರುಗಳಿಗೆ ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಪತಿ-ಪತ್ನಿ ಕೆಲವು ಹೋಟೆಲುಗಳಲ್ಲಿ ಉಳಿದುಕೊಂಡಿದ್ದರು.
ಆದರೆ ಮಥುರಾ ಹೋಟೆಲಿನಲ್ಲಿ ದಂಪತಿ ಉಳಿದುಕೊಂಡಿದ್ದ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದ ಆರೋಪಿಗಳು ಅವರ ರಾಸಲೀಲೆಯನ್ನು ಗುಪ್ತವಾಗಿ ವಿಡಿಯೋ ಮಾಡಿಕೊಂಡಿದ್ದಾರೆ. ಬಂಧಿತ ಇಬ್ಬರು ಅಶ್ಲೀಲ ವೆಬ್ ಸೈಟ್ ಆಪರೇಟರುಗಳು ಈ ದೃಷ್ಕೃತ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ದಂಪತಿಯ ಕಾಮಕ್ರೀಡೆಯನ್ನು ಗುಪ್ತವಾಗಿ ವಿಡಿಯೋ ಮಾಡಿದ ಭೂಪರು ಆ MMS ಅನ್ನು 12 ಅಶ್ಲೀಲ ವೆಬ್ ಸೈಟ್ ಗಳಿಗೆ upload ಮಾಡಿದ್ದಾರೆ. ಇದರಿಂದ ನೊಂದ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದಂಪತಿ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆಗಿಳಿದ Noida Cyber Cell ಎಸ್ಪಿ ತ್ರಿವೇಣಿ ಸಿಂಗ್ ತನಿಖೆ ನಡೆಸಿದ್ದಾರೆ. ಆ ನಂತರ, ದಂಪತಿಯ MMS ಅನ್ನು ವೆಬ್ ಸೈಟ್ ಗಳಿಂದ ತೆಗೆದುಹಾಕಿಸಿದ್ದಾರೆ. ಹೀಗೆ ಹೀಗೆ ದಂಪತಿಯ ಕಾಮಕ್ರೀಡೆಯನ್ನು ಗುಪ್ತವಾಗಿ ವಿಡಿಯೋ ಮಾಡಿ, ವೆಬ್ ಸೈಟಿಗೆ ನೀಡಿದ ಆರೋಪದ ಮೇಲೆ ಅಂಕುರ್ ಮತ್ತು ಹರವಿಂದರ್ ಎಂಬಿಬ್ಬರು ಯುವಕರನ್ನು ಬಂಧಿಸಿದ್ದಾರೆ.
ಇದೊಂದು ಅಂತಾರಾಷ್ಟ್ರೀಯ ಜಾಲ. ಹೋಟೆಲ್ ಮಾಲೀಕರು ಅಶ್ಲೀಲ ವೆಬ್ ಸೈಟ್ ಗಳ ಜತೆ ಕೈಜೋಡಿಸಿ, ಇಂತಹ ಕುಕೃತ್ಯಕ್ಕೆ ಕೈಹಾಕುತ್ತಾರೆ ಎಂದು ಎಸ್ಪಿ ತ್ರಿವೇಣಿ ಸಿಂಗ್ ಎಚ್ಚರಿಸಿದ್ದಾರೆ. ಪೂರ್ಣ ಪ್ರಮಾಣದ ತನಿಖೆಯಿಂದ ಇಡೀ ಜಾಲವನ್ನು ಬೇಧಿಸುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications