ಧರ್ಮಾಂಧ ಶಾಸಕ ಓವೈಸಿ ಹಾಜರ್: ಬುಕಾರ್ ಪುಕಾರ್

ಹೈದರಾಬಾದ್, ಜ.7: ಇಂದು ಬೆಳಗ್ಗೆ 3 ಗಂಟೆಯಲ್ಲಿ ಲಂಡನ್ನಿನಿಂದ ಹೈದರಾಬಾದಿಗೆ ಬಂದಿಳಿದ ಆಂಧ್ರ MIM ಶಾಸಕ/ಧರ್ಮಾಂಧ ಅಕ್ಬರುದ್ದೀನ್ ಓವೈಸಿ ಹೈಡ್ರಾಮಾ ಶುರುವಿಟ್ಟುಕೊಂಡಿದ್ದಾರೆ.

'10 ಗಂಟೆಗೆಲ್ಲ ಕೋರ್ಟಿನಲ್ಲಿ ಶರಣಾಗುವುದಾಗಿ' ಸೋದರನ ಮೂಲಕ (ಹೈದರಾಬಾದ್ ಸಂಸದ ಅಸಾಸುದ್ದೀನ್ ಓವೈಸಿ) ಪೊಲೀಸರಿಗೆ ತಿಳಿಸಿದ್ದ ಓವೈಸಿ ಹೈಡ್ರಾಮಾ ನಡೆಸಿದ್ದಾರೆ. ಇದರಿಂದ ಹೈದರಾಬಾದಿನಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು, ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಹಾಕಿದ್ದಾರೆ.

ಬುಕಾರ್ ಪುಕಾರ್: ಪೊಲೀಸ್ ಬಂಧನವನ್ನು ತಪ್ಪಿಸಿಕೊಳ್ಳಲು ನೇರವಾಗಿ ಕೋರ್ಟಿಗೆ ಶರಣಾಗುವ ಮಾತನ್ನಾಡಿಸಿದ್ದ ಧರ್ಮಾಂಧ ಓವೈಸಿ, ಇದೀಗ ತನಗೆ ಬುಕಾರ್ ಇದೆ ಎಂದು ಪುಕಾರ್ ಎಬ್ಬಿಸಿದ್ದಾನೆ. ಮತ್ತು ಅದನ್ನೇ ತನ್ನ ವಕೀಲ ರಸೂಲ್ ಖಾನ್ ಮೂಲಕ ಕೋರ್ಟಿಗೆ ಹೇಳಿಸಿದ್ದಾರೆ.

hyderabad-mim-mla-fever-akbaruddin-owaisi-not-surrender

ಇದರಿಂದಾಗಿ ಇನ್ನೂ ನಾಲ್ಕು ದಿನ ನನಗೆ ರೆಸ್ಟ್ ಬೇಕು. ಸದ್ಯಕ್ಕೆ ಕೋರ್ಟಿಗೂ ಬರೋಲ್ಲ, ಪೊಲೀಸ್ ಠಾಣೆಗೂ ಬರೋಲ್ಲ ಎಂದಿದ್ದಾರೆ. ಆದರೂ ಆದಿಲಾಬಾದ್ ಜಿಲ್ಲೆಯ ನಿರ್ಮಲ್ ಠಾಣೆ ಪೊಲೀಸರು ಓವೈಸಿ ತಮ್ಮ ಠಾಣೆಯತ್ತ ಬರುವುದಕ್ಕಾಗಿಯೇ ಕಾಯುತ್ತಿದ್ದಾರೆ. ಇತ್ತ ಓವೈಸಿಗೆ ಬಂಜಾರಾ ಹಿಲ್ಸ್ ಬಡಾವಣೆಯಲ್ಲಿರುವ ಅವರ ಮನೆಯಲ್ಲಿ ಆರೈಕೆ ನಡೆದಿದೆ.

ಆದರೆ, ಇಂದು ಬೆಳಗಿನ ಜಾವ ಇಲ್ಲಿನ ಷಂಷದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಠಳಾಯಿಸುತ್ತಾ ಬಂದು ಮಾಧ್ಯಮಗಳಿಗೆ ಪೋಸ್ ಕೊಟ್ಟ Majlis-e-Ittehadul Muslimeen ಶಾಸಕ, 42 ವರ್ಷದ ಓವೈಸಿಯ ಕ್ಲೀನ್ ಶೇವ್ಡ್ ಮುಖದಲ್ಲಿ ಜ್ವರದ ಲಕ್ಷಣಗಳು ಎಳ್ಳಷ್ಟೂ ಕಂಡಿರಲಿಲ್ಲ ಎಂಬುದು ಗಮನಾರ್ಹ.

ಅಂದಗಾಗೆ, ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಡಿ. 24ರಂದು ಭಾಷಣ ಮಾಡಿದ್ದ ಶಾಸಕ ಅಕ್ಬರುದ್ದೀನ್ ಓವೈಸಿ ತನ್ನ ಕರುಳು ಸರಿಯಿಲ್ಲ ಎಂದೇ ಆರೋಗ್ಯ ತಪಾಸಣೆಗಾಗಿ ಲಂಡನ್ನಿಗೆ ತೆರಳಿದ್ದುದು. ಮತ್ತು ಆರೋಗ್ಯ ಸುಧಾರಿಸಿದೆ ಎಂದೇ ವಾಪಸ್ಸು ಸಹ ಆಗಿರುವುದು. ಆದರೆ ಈ ಮಧ್ಯೆ ಮತ್ತೆ ಯಾವಾಗ ಜ್ವರ ಬಂತೋ ಗೊತ್ತಿಲ್ಲಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+