ಹಿಂದೂಗಳ ವಿರುದ್ಧ ಕಿಡಿಕಾರಿದ್ದ ಓವೈಸಿಗೆ ನೋಟಿಸ್

Akbaruddin Owaisi
ಹೈದರಾಬಾದ್, ಜ.4: ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಭಾಷಣ ಮಾಡಿ ಪರಾರಿಯಾಗಿರುವ ಎಂಐಎಂನ ಶಾಸಕ ಅಕ್ಬರುದ್ದೀನ್ ಓವೈಸಿ ಎಲ್ಲಿದ್ದರೂ ಜ.7ರೊಳಗೆ ಪೊಲೀಸರ ಮುಂದೆ ಹಾಜರಾಗುವಂತೆ ಸ್ಥಳೀಯ ಕೋರ್ಟ್ ಆದೇಶ ಹೊರಡಿಸಿದೆ.

ಚಂದ್ರಯಾನಗುಟ್ಟ ಕ್ಷೇತ್ರದ ಶಾಸಕ ಅಕ್ಬರುದ್ದೀನ್ ವಿರುದ್ಧ ಉಸ್ಮಾನಿಯಾ ವಿವಿ ಪೊಲೀಸರು ಐಪಿಸಿ ಸೆಕ್ಷನ್ 153(A) ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಅಗತ್ಯ ಬಿದ್ದರೆ ಇಂಟರ್ ಪೋಲ್ ಸಹಾಯ ಪಡೆಯುವುದಾಗಿ ಆಂಧ್ರ ಡಿಜಿಪಿ ದಿನೇಶ್ ರೆಡ್ಡಿ ಹೇಳಿದ್ದಾರೆ.

ಉದ್ಯಮಿ ಎಸ್ ವೆಂಕಟೇಶ್ ಗೌಡ ಎಂಬುವರು ದಾಖಲಿಸಿದ್ದ ದೂರು ಅರ್ಜಿಯ ವಿಚಾರಣೆ ನಡೆಸಿದ ಹೈದರಾಬಾದಿನ ಸ್ಥಳೀಯ ಕೋರ್ಟ್ ಈ ಆದೇಶ ಹೊರಡಿಸಿದೆ. ಓವೈಸಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ, ಜ.28ರೊಳಗೆ ವರದಿ ಸಲ್ಲಿಸುವಂತೆ ಉಸ್ಮಾನಿಯಾ ವಿವಿ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ ಆಂಧ್ರ ಪೊಲೀಸರು ಓವೈಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವಕೀಲ ಕೆ ಕರುಣಾಸಾಗರ್ ಅವರು ಓವೈಸಿ ವಿರುದ್ಧ ದಾಖಲಿಸಿರುವ ದೂರಿನ ವಿಚಾರಣೆ ಮತ್ತೊಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿದೆ.

ಸದ್ಯ ಓವೈಸಿಗೆ ನೋಟಿಸ್ ಜಾರಿಯಾಗಿರುವುದು ಡಿ.8,9 ರಂದು ನಿಜಾಮಬಾದ್ ಜಿಲ್ಲೆಯಲ್ಲಿ ಓವೈಸಿ ಮಾಡಿದ ಪ್ರಚೋದನಕಾರಿ ಭಾಷಣದ ವಿರುದ್ಧದ ಪ್ರಕರಣವಾಗಿದೆ.

ಕರುಣಾಸಾಗರ್ ಅವರು ದೂರು ದಾಖಲಿಸಿರುವ ಅದಿಲಾಬಾದ್ ಜಿಲ್ಲೆಯಲ್ಲಿ ಓವೈಸಿ ಮಾಡಿದ ಡಿ.24 ರ ಅತ್ಯುಗ್ರ ಭಾಷಣದ ಕೇಸು ಇನ್ನೂ ಬಾಕಿ ಇದೆ.

ಸದ್ಯ ಓವೈಸಿ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ. ನೋಟಿಸ್ ಬಗ್ಗೆ, ತನಿಖೆ ಬಗ್ಗೆ ಓವೈಸಿಯಾಗಲಿ ಆತನ ಸೋದರ ಸಂಸದ ಅಸಾದುದ್ದೀನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ನಡುವೆ ಓವೈಸಿ ಭಾಷಣದ ವಿಡಿಯೋಗಳು ಯೂಟ್ಯೂಬ್ ನಿಂದ ಮಾಯವಾಗಿದೆ. ಓವೈಸಿ ಭಾಷಣವನ್ನು ಪ್ರಸಾರ ಮಾಡಿದ ಹೈದರಾಬಾದಿನ T4 ಮಾಧ್ಯಮ ಸಂಸ್ಥೆ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಡಿ.24 ರಂದು ಮಜ್ಲಿಸ್-ಇ- ಮುಸ್ಲಿಮೀನ್(MIM) ಶಾಸಕ ಓವೈಸಿ ಮಾಡಿದ್ದ ನಿಂದನಾ ಭಾಷಣದ ವಿರುದ್ಧ ದೂರು ದಾಖಲಿಸಿದ್ದ ಕೆ ಕರುಣಾಸಾಗರ್ ಇನ್ನಷ್ಟು ಈ ರೀತಿ ದೂರು ದಾಖಲಿಸುವಂತೆ ಹಿಂದೂಗಳನ್ನು ಕೋರಿದ್ದಾರೆ.

ಈ ನಡುವೆ ಕರುಣಾಸಾಗರ್ ಅವರಿಗೆ ಡಿ.28ರಿಂದ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಆಂಧ್ರಪ್ರದೇಶದ ಮಾನವ ಹಕ್ಕುಗಳ ಆಯೋಗ ಹೈದರಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿದ್ದು ಜ.17ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಹಿಂದೂ ಹಾಗೂ ಹಿಂದೂಸ್ತಾನವನ್ನು ಜರೆಯುವ MIM ಪಕ್ಷವನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಹೇಳಿದ್ದಾರೆ. MIM ಪಕ್ಷದ ಓವೈಸಿ ಚಂದ್ರಯಾನ ಗುಟ್ಟ ಕ್ಷೇತ್ರದ ಶಾಸಕರಾಗಿದ್ದಾರೆ.

ಈ ಹಿಂದೆ ಹಲವು ಬಾರಿ ಈ ರೀತಿ Hate Speech ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದಾರೆ. ಏನಿತ್ತು ಭಾಷಣದಲ್ಲಿ?: "If the police are removed for just 15 minutes, 25 crore Muslims in the country will show they are mightier than 100 crore Hindus." ಎಂದು ಘೋಷಿಸಿದ್ದರು.

"We Will kill more hindus than those who were Killed in last 1000days"

"Many 'Modi's come and go. they can't do anything. If Modi has dare, let him come to hyderabad and confront us"

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+