ಬೀದರ್: ಐದು ಕ್ಷೇತ್ರಗಳಿಗೆ ಕೆಜೆಪಿ ಅಭ್ಯರ್ಥಿ ಘೋಷಣೆ

Yeddyurappa announces first list of candidates from Bidar district
ಬೀದರ್, ಡಿ 29: ಬಿ ಎಸ್ ಯಡಿಯೂರಪ್ಪ ನೇತೃತ್ವದ ಕೆಜೆಪಿ ಬೀದರ್ ಜಿಲ್ಲೆಯ ಐದು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ. ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಹೊರತು ಪಡಿಸಿ ಉಳಿದ ಐದು ಕ್ಷೇತ್ರಗಳಿಗೆ ಖುದ್ದು ಯಡಿಯೂರಪ್ಪ ಅವರೇ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದಾರೆ.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸ ಬೇಕೆಂದು ಯಡಿಯೂರಪ್ಪ ಕೆಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಔರಾದ್ ಕ್ಷೇತ್ರದಲ್ಲಿ ಮೂವರು ಅಭ್ಯರ್ಥಿಗಳ ಹೆಸರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಜನಾಭಿಪ್ರಾಯ ಪಡೆದು ಹೆಸರು ಅಂತಿಮಗೊಳಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿವೆ. ಯಡಿಯೂರಪ್ಪ ಘೋಷಿಸಿರುವ ಅಭ್ಯರ್ಥಿಗಳ ಹೆಸರು ಮತ್ತು ಕ್ಷೇತ್ರ ಇಂತಿದೆ:

ಬೀದರ್ (ಉತ್ತರ) - ಗುರುಪಾದಪ್ಪ ನಾಗಮಾರಪಳ್ಳಿ
ಭಾಲ್ಕಿ - ಡಿ ಕೆ ಸಿದ್ದರಾಮ
ಬಸವಕಲ್ಯಾಣ - ಬಸವರಾಜ ಪಾಟೀಲ ಅಟ್ಟೂರ
ಹುಮನಾಬಾದ್ - ಮಾಲಿ ಪಾಟೀಲ
ಬೀದರ್ (ದಕ್ಷಿಣ) - ಡಾ. ಶೈಲೇಂದ್ರ ಬೆಲ್ದಾಳೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+