ಗೆದ್ದದ್ದು ಮೋದಿಯಲ್ಲಾ,ಕಾಂಗ್ರೆಸ್ ಅಂತಾರೆ ಚಿದಂಬರಂ

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಪಡೆದಿದೆ. ಬಿಜೆಪಿ ಕಳೆದ ಅಸೆಂಬ್ಲಿ ಚುನಾವಣೆಗೆ ಹೋಲಿಸಿದರೆ ಎರಡು ಸೀಟು ಕಮ್ಮಿಗಳಿಸಿದೆ.
ಇದರಿಂದ ಅರ್ಥವಾಗುವುದಿಲ್ಲವೆ ಗುಜರಾತಿನಲ್ಲಿ ನಿಜವಾಗಿ ಗೆದ್ದದ್ದು ಕಾಂಗ್ರೆಸ್ ಎಂದು ಚಿದಂಬರಂ ತಮ್ಮದೇ ಆದ ರಾಜಕೀಯ ಸಮೀಕರಣ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಪಡೆದ ಮತಕ್ಕಿಂತ ನರೇಂದ್ರ ಮೋದಿ ಕಡಿಮೆ ಮತ ಗಳಿಸಿ ಜಯಗಳಿಸಿದ್ದಾರೆ.
ಇದರಿಂದ ರಾಜಕೀಯ ಬಲ್ಲವರು ಯಾರಾದರೂ ಅವರ ಜನಪ್ರಿಯತೆ ಕಮ್ಮಿಯಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು ಎಂದು ಹೇಳಿಕೆ ನೀಡಿ ಪರೋಕ್ಷವಾಗಿ ಗುಜರಾತಿನಲ್ಲಿ ಮೋದಿಗೆ ಇರುವ ಜನಪ್ರಿಯತೆಯನ್ನು ಚಿದಂಬರಂ ಒಪ್ಪಿಕೊಂಡಂತಾಗಿದೆ.
ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಂಬಿಸಿದಂತೆ ನರೇಂದ್ರ ಮೋದಿ ಅಭೂತಪೂರ್ವ ಜಯಗಳಿಸಲಿಲ್ಲ. ಹೀಗಾಗಿ ಅವರಿಗೆ ಹಾರಾಡಲು ಆಕಾಶವೇನೂ ತೆರೆದಿಲ್ಲ ಎನ್ನುವುದನ್ನು ಮೋದಿ ಮತ್ತು ಬಿಜೆಪಿ ಮುಖಂಡರು ತಿಳಿದುಕೊಳ್ಳಲಿ ಎಂದು ಚಿದಂಬರಂ ಹೇಳಿದ್ದಾರೆ.
ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ. ಜನರು ನಮ್ಮ ಪಕ್ಷದ ಮೇಲೆ ಮತ್ತೆ ವಿಶ್ವಾಸ ಇಟ್ಟಿದ್ದಾರೆ ಎಂದು ಗುಜರಾತ್ ಮತ್ತು ಹಿಮಾಚಲಪ್ರದೇಶ ಚುನಾವಣೆಯ ಫಲಿತಾಂಶವನ್ನು ಚಿದಂಬರಂ ಒಬ್ಬ ಕಾಂಗ್ರೆಸ್ ಪಕ್ಷದ ನಾಯಕನಾಗಿ ವ್ಯಾಖ್ಯಾನಿಸಿದ್ದಾರೆ.












Click it and Unblock the Notifications