ಅಕ್ರಮ ಹೆಂಡತಿಯ ಮಕ್ಕಳೂ ಪೆನ್ಶನಿಗೆ ಅರ್ಹರು

ಕೇಂದ್ರ ಸರಕಾರದ ಉದ್ಯೋಗದಲ್ಲಿರುವ ವ್ಯಕ್ತಿಗಳು ಅನಧಿಕೃತ ಹೆಂಡತಿಯನ್ನು ಹೊಂದಿದ್ದರೆ, ಹೆಂಡತಿ ಮತ್ತು ಅವರ ಮಕ್ಕಳಿಗೂ ಪಿಂಚಣಿಯಲ್ಲಿ ಸಂಪೂರ್ಣ ಅಧಿಕಾರವಿದೆ.
ಈ ಸಂಬಂಧ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಸಚಿವಾಲಯ ತನ್ನ ಎಲ್ಲಾ ಇಲಾಖೆಗೂ ಆದೇಶ ಹೊರಡಿಸಿದೆ.
ಆದರೆ, ಅನಧಿಕೃತ ಹೆಂಡತಿಯ ಸಂಸಾರ ಪಿಂಚಣಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಪರಿಶೀಲಿಸಿದ ನಂತರವಷ್ಟೇ ಪೆನ್ಸನಿನಲ್ಲಿ ಎಷ್ಟು ಪಾಲು ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳು ನಿರ್ಧರಿಸಲಿದ್ದಾರೆ.
ಈ ಹಿಂದೆ ನೌಕರರ ಅಧಿಕೃತ ಹೆಂಡತಿಗೆ ಮಾತ್ರ ನಿವೃತ್ತಿ ನಂತರ ಸಿಗುವ ಪಿಂಚಣಿಯ ಮೇಲೆ ಸಂಪೂರ್ಣ ಅಧಿಕಾರವಿತ್ತು. ಆದರೆ ಈಗ ಕೇಂದ್ರ ಸರಕಾರ 1972 ಕೇಂದ್ರ ನಾಗರಿಕ ಸೇವೆ (ಪಿಂಚಣಿ) ನಿಯಮಗಳಿಗೆ ತಿದ್ದುಪಡಿ ತಂದಿದೆ.












Click it and Unblock the Notifications