ಬೆಂಗಳೂರಿನ ನಾಲ್ಕು ಡಿಸಿಪಿಗಳಿಗೆ ಎತ್ತಂಗಡಿ?

ಬೆಂಗಳೂರು, ನ.13: ಜಗದೀಶ್ ಶೆಟ್ಟರ್ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲೇ ಐಪಿಎಸ್ ವರ್ಗಾವಣೆಗೆ ಕೈ ಹಾಕಿದೆ. ಬೆಂಗಳೂರಿನ ನಾಲ್ಕು ಡಿಸಿಪಿಗಳ ಸ್ಥಾನವನ್ನು ಅದಲು ಬದಲು ಮಾಡಿ ಕರ್ನಾಟಕ ಸರ್ಕಾರ ಮಂಗಳವಾರ (ನ.13) ಆದೇಶ ಹೊರಡಿಸಿದೆ ಎಂದು ಸುವರ್ಣ ಸುದ್ದಿವಾಹಿನಿಯಲ್ಲಿ ಮಧ್ನಾನ್ಹ ಸುದ್ದಿಸಾಲು ಕಂಡು ಬಂದಿದೆ.

ಆದರೆ, ಸರ್ಕಾರದ ಈ ದಿಢೀರ್ ಆದೇಶಕ್ಕೆ ಪ್ರತಿಯಾಗಿ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು ತಡೆ ತಂದಿದ್ದಾರೆ ಸುದ್ದಿ ಕೂಡಾ ಹಬ್ಬಿತ್ತು.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಸೋನಿಯಾ ನಾರಂಗ್ ಅವರನ್ನು ಕೆಎಸ್ ಆರ್ ಪಿ ಡಿಸಿಪಿಯಾಗಿ ವರ್ಗಾವಣೆ ಮಾಡಿರುವುದು ಪ್ರಮುಖ ಬದಲಾವಣೆಯಾಗಿದೆ. ಉಳಿದಂತೆ ಡಿಸಿಪಿ ರಾಜಪ್ಪ, ಸಿದ್ದರಾಮಪ್ಪ, ಅವರ ಸ್ಥಾನ ಪಲ್ಲಟವಾಗಿದೆ. ಸಿದ್ದರಾಮಪ್ಪ-ಡಿಸಿಪಿ, ಉತ್ತರ ವಲಯ, ರೇವಣ್ಣ-ಡಿಸಿಪಿ ದಕ್ಷಿಣ ವಲಯ, ರಾಜಪ್ಪ-ಡಿಸಿಪಿ ಪಶ್ಚಿಮ ವಲಯಕ್ಕೆ ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡಿದ್ದ ನಗರದ ಮೂವರು ಡಿಸಿಪಿಗಳು ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನ ಪಶ್ಚಿಮ ವಲಯದ ಡಿಸಿಪಿ ಡಾ.ಡಿ.ಸಿ.ರಾಜಪ್ಪ, ದಕ್ಷಿಣ ವಲಯದ ಡಿಸಿಪಿಯಾಗಿ ಎಚ್.ಎಸ್.ರೇವಣ್ಣ ಹಾಗು ಉತ್ತರ ವಲಯದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ.

ಇತ್ತೀಚೆಗೆ ಕರ್ನಾಟಕ ಸರ್ಕಾರ ಗುಲ್ಬರ್ಗಾ ಪಾಲಿಕೆ ಆಯುಕ್ತ ಹುದ್ದೆಗೆ ಪಲ್ಲವಿ ಆಕೃತಿ, ಸಕಲೇಶಪುರ ಉಪ ವಿಭಾಗಾಧಿಕಾರಿಯಾಗಿ ಶ್ರೀವಿದ್ಯಾ, ಮಂಗಳೂರು ಎಸ್ಪಿಯಾಗಿ ಮನೀಷ್ ಕರ್ಬೇಕರ್, ಬೆಂಗಳೂರು ಸಿಬಿಐ ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿತ್ತು.

ಆಡಳಿತ ಯಂತ್ರ ಚುರುಕುಗೊಳಿಸುವುದು, ಅಧಿಕಾರಿಗಳಿಗೆ ಬಡ್ತಿ ನೀಡುವುದು ಸಾಮಾನ್ಯ ವಿಷಯವಾಗಿದೆ. ಅಧಿಕಾರಿಗಳ ಸೇವೆ ರಾಜ್ಯದ ಎಲ್ಲಾ ಭಾಗದ ಜನಕ್ಕೂ ಸಿಗುವಂತಾಗಲಿ ಎಂಬುದು ನಮ್ಮ ಆಶಯ ಎಂದು ಎಲ್ಲಾ ಮುಖ್ಯಮಂತ್ರಿಗಳು ಹೇಳುವ ಹಳೆ ಡೈಲಾಗ್ ಅನ್ನು ಶೆಟ್ಟರ್ ಅವರ ಕಚೇರಿ ವಕ್ತಾರರು ಮತ್ತೆ ಮತ್ತೆ ಹೇಳುತ್ತಾ ಬಂದಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ದಿವ್ಯಾ ವಿ.ಗೋಪಿನಾಥ್: ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ರಾಯಚೂರು ಉಪ ವಿಭಾಗ, ರಾಯಚೂರು. ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್.:ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಭಟ್ಕಳ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ. ವರ್ತಿಕಾ ಕಾಟಿಯಾರ್:ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಗೋಕಾಕ್ ಉಪ ವಿಭಾಗ, ಬೆಳಗಾವಿ ಜಿಲ್ಲೆ. ಚೇತನ್ ಆರ್.:ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಿಜಾಪುರ ಉಪ ವಿಭಾಗ, ಬಿಜಾಪುರ ಜಿಲ್ಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+