ಸ್ಪೇನ್ ಮಹಿಳೆ ಮೇಲೆ ಅತ್ಯಾಚಾರ ಎಸಗಿದವನ ಬಂಧನ

ಸ್ಪೇನ್ ಮಹಿಳೆ ನೀಡಿದ ವಿವರಗಳ ಆಧಾರದ ಮೇಲೆ ಪೊಲೀಸರು ಶಂಕಿತ ಆರೋಪಿಯ ಸ್ಕೆಚ್ ಬಿಡಿಸಿ, 24 ಜನರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆ ಬಂಧಿತರಲ್ಲಿ ಒಬ್ಬನ ಚೆಹರೆ, ಪೊಲೀಸರು ಬಿಡಿಸಿರುವ ರೇಖಾಚಿತ್ರವನ್ನು ಹೋಲುತ್ತಿದ್ದು, ಆತನನ್ನು ತಮ್ಮ ಬಂಧಿಸಿದ್ದಾರೆ.
ಬಂಧಿತ ಬಾದಶಾ ಅನ್ಸಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವ್ಯಕ್ತಿ ಕಳೆದ ತಿಂಗಳು ಅಕ್ಟೋಬರ್‌ನಲ್ಲಿ ಬೆಂಗಳೂರು ಮೂಲದ ಬಾಲಿವುಡ್ ನಟ ಡಿನೋ ಮೋರಿಯಾ ಮನೆಯಲ್ಲಿಯೂ ಕಳ್ಳತನ ನಡೆಸಿದ್ದ ಎಂಬ ಸಂಗತಿ ಬಹಿರಂಗವಾಗಿದೆ. ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬಂಧಿತ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವುದು ಮತ್ತು ಡಿನೋ ಮನೆಯಲ್ಲಿ ಕಳ್ಳತನ ನಡೆಸಿದ್ದು ತಿಳಿದುಬಂದಿದೆ.
ಅಪರಿಚಿ ವ್ಯಕ್ತಿಯೊಬ್ಬ ಸೋಮವಾರ ಬೆಳಗಿನ ಜಾವ, ಮೂರನೇ ಮಹಡಿಯಲ್ಲಿದ್ದ ಫ್ಲಾಟ್‌ನ ತೆರೆದ ಕಿಟಕಿಯಿಂದ ಪ್ರವೇಶಿಸಿ ಚಾಕು ತೋರಿಸಿ ತನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದ ಮತ್ತು ತಾನು ಬಿಚ್ಚಿಟ್ಟಿದ್ದ ರಾತ್ರಿ ಗೌನ್ ಮತ್ತು ಒಳಉಡುಪುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ ಎಂದು ಬಾಂದ್ರಾ ಪೊಲೀಸರಿಗೆ ಸ್ಪೇನ್ ಮಹಿಳೆ ದೂರು ನೀಡಿದ್ದರು.
ಪಶ್ಚಿಮ ಬಾಂದ್ರಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಮೇಲೆ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಎಂಟು ತಂಡಗಳನ್ನು ರಚಿಸಿ ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದರು. ಕೇವಲ 36 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.












Click it and Unblock the Notifications