ಸೋನಿಯಾ ಕುಟುಂಬದ ಮೇಲೆ ಸ್ವಾಮಿ ಗುರುತರ ಆರೋಪ

Sonia and Rahul Gandhi grabbed property worth of 1600 crore
ನವದೆಹಲಿ, ನ 1: ಜನತಾಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ನೆಹರೂ ಮತ್ತು ಗಾಂಧಿ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಆಸ್ತಿಯನ್ನು ಖಾಸಾಗಿ ಆಸ್ತಿಯನ್ನಾಗಿ ಪರಿವರ್ತಿಸಿ ಸುಮಾರು 1600 ಕೋಟಿ ರೂಪಾಯಿಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಯುವರಾಜ್ ರಾಹುಲ್ ಗಾಂಧಿ ಫ್ರಾಡ್ ಕಂಪೆನಿಯೊಂದನ್ನು ನಡೆಸುತ್ತಿದ್ದಾರೆ.

ಸರಕಾರಿ ಸೌಲಭ್ಯಗಳನ್ನು ಈ ಕಂಪೆನಿಗೆ ಬಳಸಿಕೊಳ್ಳಲಾಗುತ್ತಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನೀಡಲಾಗಿರುವ ನ.10, ಜನಪಥ್ ರಸ್ತೆ ಸರಕಾರಿ ಬಂಗಲೆಯನ್ನು ಈ ಫ್ರಾಡ್ ಕಂಪೆನಿಯ ಮೀಟಿಂಗ್ ಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ಸ್ವಾಮಿ ತರಾಟೆಗೆ ತೆಗೆದು ಕೊಂಡಿದ್ದಾರೆ.

ಯಂಗ್ ಇಂಡಿಯನ್ ಎನ್ನುವ ಈ ಫ್ರಾಡ್ ಸಂಸ್ಥೆಯ ಶೇ. 76 ಶೇರುಗಳು ರಾಹುಲ್ ಮತ್ತು ಸೋನಿಯಾ ಗಾಂಧಿ ಹೆಸರಿನಲ್ಲಿದೆ. ದೆಹಲಿಯಲ್ಲಿರುವ ಹೆರಾಲ್ಡ್ ಹೌಸ್ ಎನ್ನುವ ಸಂಸ್ಥೆಯ ಹೆಸರಿನಲ್ಲಿ ಈಗ ಈ ಕಂಪೆನಿ ವಹಿವಾಟು ನಡೆಸುತ್ತಿದೆ.

ಈ ಸಂಸ್ಥೆ ಇರುವ ಕಟ್ಟಡದ ಎರಡು ಅಂತಸ್ತನ್ನು ಪಾಸ್ಪೋರ್ಟ್ ಕಚೇರಿಗೆ ಬಾಡಿಗೆ ನೀಡಲಾಗಿದ್ದು ಇದರಿಂದ ಮಾಸಿಕ 30 ಲಕ್ಷ ಬಾಡಿಗೆ ಬರುತ್ತಿದ್ದು ಅದರಲ್ಲಿನ ಸಿಂಹಪಾಲು ಗಾಂಧಿ ಕುಟುಂಬಕ್ಕೆ ಸಂದಾಯವಾಗುತ್ತದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

2008 ರಲ್ಲಿ ನಡೆದ ಲೋಕಸಭಾ ಚುನಾವಣಾ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿರುವ ಅಫಿಡವಿಟ್ ನಲ್ಲಿ ರಾಹುಲ್ ಗಾಂಧಿ ಈ ಬಗ್ಗೆ ಉಲ್ಲೇಖಿಸಲಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ಸ್ವಾಮಿ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+