ಕೋರಮಂಗಲ: ಡಿವೈಎಸ್ಪಿ ದಾವೂದ್ ಪುತ್ರರ ಆಟಾಟೋಪ

bangalore-bar-girls-gang-molested-at-kengeri-oct-18
ಬೆಂಗಳೂರು, ಅ.19: ಒಂದು ವಾರದ ಹಿಂದೆ ನೇಪಾಳ ಮೂಲದ ವಿದ್ಯಾರ್ಥಿನಿ ಮೇಲೆ ಜ್ಞಾನಭಾರತಿ ಕ್ಯಾಂಪಸ್ ಬಳಿ ಗ್ಯಾಂಗ್ ರೇಪ್ ನಡೆದಿರುವ ಬೆನ್ನಿಗೇ ಕೆಂಗೇರಿ ಬಳಿ ಇಂದು ಬೆಳಗಿನ ಜಾವ 1 ಗಂಟೆಯಲ್ಲಿ ಮೂವರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.

ಬಾಧಿತ ಯುವತಿಯರು ಗಾಂಧಿನಗರದಲ್ಲಿರುವ ಕ್ಯಾಸಿನೋ ರಾಯಲ್ ಬಾರ್ ನಲ್ಲಿ ಡ್ಯಾನ್ಸ್ ಗರ್ಲ್ಸ್ ಆಗಿದ್ದಾರೆ. ನಿನ್ನೆ ರಾತ್ರಿ ಈ ಮೂವರ ಮೇಲೂ ರೇಪ್ ನಡೆದಿದ್ದು, ಅತ್ಯಾಚಾರಿಗಳು MMS ಮಾಡುತ್ತಾ ರೇಪ್ ಮಾಡಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ. ಈ ಯುವತಿಯರು ಒಂಟಿ ಮನೆಯಲ್ಲಿ ವಾಸವಾಗಿದ್ದರಿಂದ ದುಷ್ಕರ್ಮಿಗಳು ಕುಕೃತ್ಯವೆಸಗಿದ ಬಳಿಕ ಸಲೀಸಾಗಿ ಪರಾರಿಯಾಗಿದ್ದಾರೆ.

ನಾಗದೇವನಹಳ್ಳಿ ಜಗಜ್ಯೋತಿ ಲೇಔಟಿನಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ರಾಮನಗರ ಎಸ್ಪಿ ಅಗರವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ತಪಾಸಣೆ ನಡೆಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮೂವರು ಯುವತಿಯರನ್ನು ವೃದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಒಟ್ಟು 7 ಮಂದಿ ಈ ದುಷ್ಕೃತ್ಯವೆಸಗಿದ್ದಾರೆ ಎಂದು ಯುವತಿಯರು ದೂರಿದ್ದಾರೆ.

ಡಿವೈಎಸ್ಪಿ ದಾವೂದ್ ಪುತ್ರರ ಆಟಾಟೋಪ: ಇದೇ ವೇಳೆ, ಸಿಒಡಿ ಸಿಬೈ ಎಸ್ಪಿ ದಾವೂದ್ ಖಾನ್ ಅವರ ಪುತ್ರ ಸುಹೈಲ್ ಖಾನ್ ಹಾಗೂ ಆತನ ಸ್ನೇಹಿತರು ನಾಲ್ವರು ಈಶಾನ್ಯ ಭಾರತದ ವಿದ್ಯಾರ್ಥಿಗಳ ಮೇಲೆ ನಿನ್ನೆ ಶುಕ್ರವಾರ ನಡುರಾತ್ರಿ ಹಲ್ಲೆ ನಡೆಸಿದ್ದಾರೆ. ಕೋರಮಂಗಲದಲ್ಲಿ ಏಷ್ಯನ್ ಗೇಮ್ಸ್ ವಿಲೇಜ್ ವಸತಿ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಇವರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭ ಸುಹೈಲ್ ಖಾನ್ ಹಾಗೂ ಆತನ ಸ್ನೇಹಿತರು ಈಶಾನ್ಯ ಭಾರತದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+